No menu items!
24 C
Munich
Monday, May 4, 2026

ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ: ಮಾಜಿ ಸಚಿವ ಸಿ.ಟಿ ರವಿ

Must read

ಚಿಕ್ಕಮಗಳೂರು: ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಮಾಜಿ ಸಚಿವ ಸಿ.ಟಿ ರವಿ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. , ಒಂದು ಕಾಲದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಇವು ಅಖಂಡ ಭಾರತದ ಭಾಗವಾಗಿದ್ದವು. ಗಾಂಧಾರಿಯ ತವರು ಮನೆ ಆಫ್ಘಾನಿಸ್ತಾನವಾಗಿತ್ತು. ಅಲ್ಲಿ ನೂರಕ್ಕೆ ನೂರು ಜನ ಹಿಂದೂಗಳಿದ್ದರು. ಈಗ ಮತ್ತೆ ಭಾರತದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾದರೆ ಪಾಕಿಸ್ತಾನ ಆಗಲಿದೆ. ಹಿಂದೂಗಳು ಒಗ್ಗಟ್ಟಾಗಿದ್ದರೆ ಪಾಕಿಸ್ತಾನ ಎನ್ನುವ ವಿಚಾರವೇ ತಲೆ ಎತ್ತುವುದಿಲ್ಲ ಎಂದಿದ್ದಾರೆ.
ಭಾರತದಲ್ಲಿ ಹಿಂದೂಗಳು ಕಡಿಮೆ ಆದಾಗ ಅದು ಮೊಘಲ್‍ಸ್ಥಾನ, ಅಥವಾ ಪಾಕಿಸ್ತಾನ ಆಗುತ್ತದೆ. ಹಿಂದೂಗಳು ಬಹುಸಂಖ್ಯಾತರಾಗಿದ್ದರೆ ಭಾರತ ಹಾಗೂ ಸಂವಿಧಾನ ಉಳಿಯುತ್ತದೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ಭಾರತ ಹಾಗೂ ಸಂವಿಧಾನ ಉಳಿಯುವುದಿಲ್ಲ. ಹಿಂದೂ ರಾಷ್ಟ್ರವಾದರೆ ಆಫ್ಘಾನಿಸ್ತಾನ ಆಗಲು ಜಾಗವೇ ಇರುವುದಿಲ್ಲ. ಕಾಂಗ್ರೆಸ್‍ನದ್ದು ಎಸ್‍ಡಿಪಿಐ ಹಾಗೂ ಪಿಎಫ್‍ಐ ಬೆಂಬಲಿಸುವ ನೀತಿಯಾಗಿದೆ. ನಿಮ್ಮ ಮನಸ್ಸಿನಿಂದ ತಾಲಿಬಾನ್ ಚಿಂತನೆ ತೆಗೆದು ಹಾಕಿ. ಇತಿಹಾಸ ಅರಿಯದವನು ಇತಿಹಾಸ ಸೃಷ್ಟಿಸಲಾರ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.

- Advertisement -spot_img

More articles

- Advertisement -spot_img

Latest article