ಇಸ್ರೇಲಿನಿಂದ ಬಂದಿಳಿದ ಮೊದಲ ವಿಮಾನ: 230 ಮಂದಿಯಲ್ಲಿ ಐವರು ಕನ್ನಡಿಗರು

0
75

ಬೆಂಗಳೂರು:ಇಸ್ರೇಲ್-ಹಮಾಸ್ ಯುದ್ಧದ ನಡುವೆ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಅಜಯ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಭಾರತೀಯರನ್ನುಹೊತ್ತ ಮೊದಲ ವಿಮಾನ ಇಸ್ರೇಲ್ನಿಂದ ದಹೆಲಿಗೆ ಬಂದಿಳಿದಿದೆ.
ಒಟ್ಟು 230 ಮಂದಿ ಭಾರತೀಯರು ತವರಿಗೆ ಮರಳಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಸ್ವಾಗತಿಸಿದ್ದಾರೆ. 230 ಮಂದಿಯಲ್ಲಿ ಐವರು ಕನ್ನಡಿಗರು ಸಹ ಇದ್ದು, ಅವರನ್ನ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇದೇ ವೇಳೆ ದೆಹಲಿಯಿಂದ ಕರ್ನಾಟಕಕ್ಕೆ ತೆರಳಲು ಸಾರಿಗೆ ವೆಚ್ಚದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಚಂದ್ರ ಅವರು, ಇಸ್ರೆಲ್ನಿಂದ ಬಂದ ಕನ್ನಡಿಗರ ಜೊತೆ ಮಾತನಾಡಿದ್ದೇನೆ. ದೆಹಲಿಗೆ ಬಂದಿರುವ ಅವರ ಯೋಗಕ್ಷೇಮವನ್ನು ಕರ್ನಾಟಕ ಸರ್ಕಾರ ನೋಡಿಕೊಳ್ಳಲಿದೆ. ಪ್ರತಿಯತೊಬ್ಬರನ್ನು ಅವರ ಊರುಗಳಿಗೆ ಕ್ಷೇಮವಾಗಿ ತಲುಪಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಮಾಡಲಿದೆ. ರಷ್ಯಾ-ಉಕ್ರೇನ್ ಯುದ್ಧದ ಸಂಧರ್ಭದಲ್ಲಿ ಮಾಡಿದಂತೆ ಈ ಬಾರಿಯೂ ವ್ಯವಸ್ಥೆ ಮಾಡಲಾಗುವುದು. ಉಳಿದುಕೊಳ್ಳಲು ಕರ್ನಾಟಕ ಭವನದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ