No menu items!
13.9 C
Munich
Wednesday, April 29, 2026

ಏಪ್ರಿಲ್ ನಲ್ಲಿ ಪುನೀತ್ – ದರ್ಶನ್ ಫೈಟ್! ಗೆಲ್ಲುವವರು ಯಾರು?

Must read

ಕೊರೋನಾ ಕಾರಣದಿಂದ ಕಳೆದ ವರ್ಷ ಬಿಡುಗಡೆಯಾಗಬೇಕಿದ್ದ ಸ್ಟಾರ್ ನಟರ ಚಿತ್ರಗಳು ಈ ವರ್ಷದ ತೆರೆಗೆ ಬರಲು ಸಜ್ಜಾಗಿವೆ. ಇನ್ನು ನಿನ್ನೆ ಹೊಸ ವರ್ಷದ ಪ್ರಯುಕ್ತ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ.  ಅದೇ ರೀತಿ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಬಿಡುಗಡೆ ತಿಂಗಳನ್ನು ಸಹ ಅನೌನ್ಸ್ ಮಾಡಲಾಗಿದೆ.

 

ಯುವರತ್ನ ಚಿತ್ರ ಏಪ್ರಿಲ್ 1 ರಂದು ತೆರೆಗೆ ಬರಲಿದೆ ಎಂದು ಘೋಷಣೆ ಮಾಡಲಾಗಿದ್ದು, ರಾಬರ್ಟ್ ಚಿತ್ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಒಟ್ಟಿನಲ್ಲಿ ಈ ಎರಡೂ ಚಿತ್ರಗಳು ಸಹ ಏಪ್ರಿಲ್ ನಲ್ಲಿ ಬೆಳ್ಳಿಪರದೆಗೆ ದರ್ಶನ ನೀಡುವುದು ಪಕ್ಕ.. ಈ ಎರಡು ಚಿತ್ರಗಳ ಬಿಡುಗಡೆ ಒಟ್ಟಿಗೆ ಆಗುತ್ತದೆ ಎಂದು ತಿಳಿದ ತಕ್ಷಣ ಈ ಬಾರಿ ಮದ್ದಾನೆಗಳ ಕಾದಾಟ ನಡೆಯುವುದು ಪಕ್ಕಾ ಎನ್ನುತ್ತಿದೆ ಗಾಂಧಿನಗರ..

 

ಹೌದು ಈ ಇಬ್ಬರೂ ನಟರು ಚಿತ್ರಗಳು ಒಮ್ಮೆಲೆ ಬಿಡುಗಡೆ ಆದರೆ ದೊಡ್ಡ ಪೈಪೋಟಿ ನಡೆಯುವುದಂತೂ ಪಕ್ಕ. ಈ ಹಿಂದೆ ಇಂಡಸ್ಟ್ರಿ ಹಿಟ್ ಚಿತ್ರ ನೀಡಿದ್ದ ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ಕಾಂಬಿನೇಶನ್ ನ ಯುವರತ್ನ ಕೂಡ ಬಿಗ್ ಹಿಟ್ ಆಗಲಿದೆ ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇನ್ನು ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್ ನ ರಾಬರ್ಟ್ ಕೂಡ ಬಿಗ್ ಹಿಟ್ ಆಗಲಿದೆ ಎಂಥಾ ದೊಡ್ಡ ಮಟ್ಟದ ನಿರೀಕ್ಷೆಯಿದೆ.

 

ಒಟ್ಟಿನಲ್ಲಿ ಎರಡು ಚಿತ್ರಗಳು ಸಹ ಬಿಗ್ ಚಿತ್ರಗಳಾಗಿದ್ದು ಒಟ್ಟಿಗೆ ಚಿತ್ರಮಂದಿರಗಳಿಗೆ ಲಗ್ಗೆ ಇಡುವುದರಿಂದ ಬಾಕ್ಸಾಫೀಸಿನಲ್ಲಿ ಕಾಳಗ ನಡೆಯುವುದು ಪಕ್ಕ.. ಇನ್ನು  ಸಾಮಾಜಿಕ ಜಾಲತಾಣದಲ್ಲಿ ಯಾವ ಚಿತ್ರ ಗೆಲ್ಲಲಿದೆ ಎಂಬ ಲೆಕ್ಕಾಚಾರಗಳು ಈಗಾಗಲೇ ಹರಿದಾಡುತ್ತಿದೆ.. ಕನ್ನಡ ಸಿನಿಮಾ ಅಭಿಮಾನಿಗಳು ಮಾತ್ರ ಎರಡು ಚಿತ್ರಗಳು ಸಹ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಲಿ ಎಂದು ಹಾರೈಸುತ್ತಿದ್ದಾರೆ..

 

ನಿಮ್ಮ ಪ್ರಕಾರ ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಗೆಲ್ಲಲಿದೆ ಎಂಬುದನ್ನು ಕಾಮೆಂಟ್ ಮಾಡಿ..

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article