ಏಪ್ರಿಲ್ 29ರಿಂದ ರಾಬರ್ಟ್ ಸಕ್ಸಸ್ ಟೂರ್.

0
379

ಒಂದೆಡೆ ಯುವರತ್ನಾದ ಯುವ ಸಂಭ್ರಮ ನಡೆಯುತ್ತಿದ್ದರೆ ಮತ್ತೊಂದೆಡೆ ರಾಬರ್ಟ್ ಚಿತ್ರತಂಡ ವಿಜಯಯಾತ್ರೆಯನ್ನು ಪ್ಲಾನ್ ಮಾಡಿಕೊಂಡಿದೆ. ಇದೇ ತಿಂಗಳ 29 ರಿಂದ ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಪಟ್ಟಣಗಳಿಗೆ ಭೇಟಿ ನೀಡುವುದರ ಮೂಲಕ ರಾಬರ್ಟ್ ಚಿತ್ರದ ಸಕ್ಸಸ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ.

 

 

ಸಿನಿಮಾ ಗೆಲ್ಲಲು ಕಾರಣಕರ್ತರಾದ ಅಭಿಮಾನಿಗಳು ಮತ್ತು ವೀಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ವಿಜಯ ಯಾತ್ರೆ ಇದಾಗಿದ್ದು ನಿಮ್ಮ ಊರುಗಳಿಗೆ ಡಿ ಬಾಸ್ ಮತ್ತು ರಾಬರ್ಟ್ ಚಿತ್ರ ತಂಡ ಬರಲಿದೆ ಎಂದು ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

 

 

ಇನ್ನು ರಾಬರ್ಟ್ ವಿಜಯಯಾತ್ರೆ ಯಾವ ಯಾವ ಜಿಲ್ಲೆಗಳಲ್ಲಿ ಯಾವ ಯಾವ ದಿನಾಂಕದಂದು ನಡೆಯಲಿದೆ ಎಂಬ ಸಂಪೂರ್ಣ ವಿವರ ಮುಂದಿನ ಫೋಟೋದಲ್ಲಿ ಇದ ನೋಡಿ.