Home ಎಲ್ಲೆಲ್ಲಿ ಏನೇನು.? ಕಬಿನಿ ಹಿನ್ನೀರಿನಲ್ಲಿ ಕುಟುಂಬ ಸಮೇತ ವಿಶ್ರಾಂತಿಗೆ ಜಾರಿದ HDK

ಕಬಿನಿ ಹಿನ್ನೀರಿನಲ್ಲಿ ಕುಟುಂಬ ಸಮೇತ ವಿಶ್ರಾಂತಿಗೆ ಜಾರಿದ HDK

0
ಕಬಿನಿ ಹಿನ್ನೀರಿನಲ್ಲಿ ಕುಟುಂಬ ಸಮೇತ ವಿಶ್ರಾಂತಿಗೆ ಜಾರಿದ HDK

ಬೆಂಗಳೂರು: ಒಂದು ಕಡೆ ಪ್ರಜ್ವಲ್ ರೇವಣ್ಣ ಬಂಧನವಾಗಿದ್ದರೆ, ಮತ್ತೊಂದು ಕಡೆ ಬಸವನಗುಡಿ ಹೆಚ್‌.ಡಿ.ರೇವಣ್ಣ ನಿವಾಸ ಖಾಲಿ ಖಾಲಿಯಾಗಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರ ಕುಟುಂಬ ಸಮೇತರಾಗಿ ರೆಸಾರ್ಟ್‌ಗೆ ವಿಶ್ರಾಂತಿಗೆ ತೆರಳಿದ್ದಾರೆ. ಎಚ್.ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. 2 ದಿನಗಳ ಕಾಲ ವಿಶ್ರಾಂತಿಗೆ ಹೋಗಿದ್ದಾರೆ ಎನ್ನಲಾಗಿದೆ. ಪತ್ನಿ, ಪುತ್ರ, ಸೊಸೆ, ಮೊಮ್ಮಗನ ಜೊತೆ ರೆಸ್ಟ್‌ಗೆ ಹೋಗಿದ್ದು, ನಾಳೆ ಅಥವಾ ನಾಡಿದ್ದು ವಾಪಸ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.