No menu items!
22 C
Munich
Monday, July 20, 2026

ಕಮರ್ಷಿಯಲ್ ಮಸಾಲೆ ಸೌಂಡ್ ಮಧ್ಯೆ ಭಕ್ತಿಯ ಅಲೆ: ಯುಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ ‘ರಾಯರ ದರ್ಶನ’ ಹಾಡು

Must read

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ತೆರೆದರೆ ಸಾಕು, ಕಿವಿ ತಮಟೆ ಹರಿಯುವಂತಹ ಕಮರ್ಷಿಯಲ್ ಬೀಟ್‌ಗಳು, ತಲೆಬುಡವಿಲ್ಲದ ಮಾಸ್ ಸಾಂಗ್ಸ್ ಮತ್ತು ಟ್ರೆಂಡ್‌ಗಾಗಿ ಮಾಡುವ ಐಟಂ ಡ್ಯಾನ್ಸ್‌ಗಳದ್ದೇ ಅಬ್ಬರ. ಸಂಗೀತ ಅಂದರೆ ಕೇವಲ ಸೌಂಡ್ ಅಷ್ಟೇನಾ…? ಮನಸ್ಸಿಗೆ ನೆಮ್ಮದಿ ಕೊಡುವ ಹಾಡುಗಳು ಈಗ ಬರುವುದೇ ಇಲ್ಲವಾ ಅಂತ ಜನ ಬೇಸರ ಮಾಡಿಕೊಳ್ಳುತ್ತಿರುವಾಗಲೇ, ಭಕ್ತಿ ಪ್ರಧಾನ ಹಾಡೊಂದು ಸೋಶಿಯಲ್ ಮೀಡಿಯಾ ಮಾತ್ರವಲ್ಲದೇ ಯುಟ್ಯೂಬ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಅದೇ ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ “ರಾಯರ ದರ್ಶನ” ಆಲ್ಬಮ್ ಸಾಂಗ್.

ಮಂತ್ರಾಲಯ ಶ್ರೀಗಳ ಆಶೀರ್ವಾದದ ಬಲ: ಲಕ್ಷ್ಮಿ ಗಣೇಶ್ ಪ್ರೊಡಕ್ಷನ್‌ನ ಭಕ್ತಿ ಕಾವ್ಯ

ಯಾವುದೇ ಒಂದು ಒಳ್ಳೆ ಕೆಲಸಕ್ಕೆ ದೈವಬಲ ಇರಬೇಕು ಅಂತಾರಲ್ಲ, ಹಾಗೆ ಈ ಹಾಡಿನ ಯಶಸ್ಸಿನ ಹಿಂದೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಆಶೀರ್ವಾದವಿದೆ. ”TNIT” ಸಹಯೋಗದಲ್ಲಿ “ಲಕ್ಷ್ಮಿ ಗಣೇಶ್ ಪ್ರೊಡಕ್ಷನ್ಸ್‌ನಲ್ಲಿ ಮೂಡಿ ಬಂದಿರುವ ಲಕ್ಷ್ಮೀ ಗಣೇಶ್ ಮತ್ತು ಮಂತ್ರಾಲಯ ವಾಹಿನಿ” ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿರುವ ಈ ಹಾಡು, ಕೇವಲ ಭಕ್ತರನ್ನಷ್ಟೇ ಅಲ್ಲದೆ ಅಪ್ಪಟ ಸಂಗೀತ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದೆ. ಅದ್ದೂರಿ ಮೇಕಿಂಗ್ ಜೊತೆಗೆ ಕಣ್ಮನ ಸೆಳೆಯುವ ದೃಶ್ಯ ವೈಭವ ಈ ಭಕ್ತಿಗೀತೆಯ ತೂಕವನ್ನು ಹತ್ತರಷ್ಟು ಹೆಚ್ಚಿಸಿದೆ.

ಅಜನೀಶ್ ಲೋಕನಾಥ್ ಮ್ಯಾಜಿಕ್ & ಅಬ್ಬಿ ವಿ ವಾಯ್ಸ್: ಕ್ಲಾಸಿಕಲ್ ಧ್ವನಿಗೆ ಫಿದಾ ಆದ ಆಡಿಯನ್ಸ್!

‘ಕಾಂತಾರ’ ಸಿನಿಮಾ ಖ್ಯಾತಿಯ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಈ ಹಾಡಿಗೆ ಸಂಗೀತ ನೀಡಿದ್ದಾರೆ ಅಂದಮೇಲೆ ಕೇಳಬೇಕಾ? ಸಿ.ಆರ್. ಬಾಬಿ ಅವರ ಜೊತೆ ಸೇರಿ ಕಿವಿಗೆ ಬಿದ್ದ ತಕ್ಷಣ ಮೈ ನವಿರೇಳಿಸುವಂತಹ ಟ್ಯೂನ್ ಹಾಕುವಲ್ಲಿ ಅಜನೀಶ್ ಮತ್ತೊಮ್ಮೆ ಗೆದ್ದಿದ್ದಾರೆ. ಇನ್ನು ಈ ಹಾಡಿಗೆ ಗಾಯಕ ಅಬ್ಬಿ ವಿ ತಮ್ಮ ಅದ್ಭುತ ಧ್ವನಿಯ ಮೂಲಕ ಜೀವ ತುಂಬಿದ್ದಾರೆ.

ಅಬ್ಬಿ ವಿ ಅವರ ಕ್ಲಾಸಿಕಲ್ ಟಚ್ ಮತ್ತು ಅಜನೀಶ್ ಹಾಗೂ ಬಾಬಿ ಅವರ ಗಾಯನ ಕೇಳುಗರನ್ನು ನೇರವಾಗಿ ಮಂತ್ರಾಲಯದ ಸನ್ನಿಧಿಗೆ ಕರೆದುಕೊಂಡು ಹೋದಂತಹ ಫೀಲ್ ನೀಡುತ್ತಿರುವುದು ಸುಳ್ಳಲ್ಲ. ಸುಗುಣ ರಘು ಭಟ್ ಅವರ ಅದ್ಧೂರಿ ನಿರ್ಮಾಣ ಮತ್ತು ನಿರ್ದೇಶಕ ರಘು ಭಟ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಹಾಡು ಸದ್ಯ ಹಲವರ ಕಾಲರ್ ಟ್ಯೂನ್ ಆಗಿ ಬದಲಾಗುತ್ತಿರುವುದು ಸುಳ್ಳಲ್ಲ.

ಶಿವಣ್ಣ, ಪ್ರೇಮ್, ಜಗ್ಗೇಶ್, ಸ್ಟಾರ್ ನಟರ ಬೆಂಬಲದ ಭಕ್ತಿ ವೈಭವ

ಈ ಡಿವೋಷನಲ್ ಆಲ್ಬಮ್ ಸಾಂಗ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೇಟ್ ಮಾಡಲು ಚಿತ್ರರಂಗದ ದಿಗ್ಗಜರ ಸಪೋರ್ಟ್ ಕೂಡ ಕಾರಣವಾಗಿದೆ. ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್, ರಾಯರ ಅಪ್ಪಟ ಭಕ್ತರಾಗಿರುವ ನವರಸ ನಾಯಕ ಜಗ್ಗೇಶ್, ಲವ್ಲಿ ಸ್ಟಾರ್ ಪ್ರೇಮ್ ಮತ್ತು ಹಿರಿಯ ನಟಿ ತಾರಾ ಅನುರಾಧಾ ಅವರು ಈ ಹಾಡಿಗೆ ಬೆಂಬಲವಾಗಿ ನಿಂತಿದ್ದಾರೆ.

ಲಕ್ಷಾಂತರ ವೀವ್ಸ್, ಸಾವಿರಾರು ಲೈಕ್ಸ್: ಆರ್ಗ್ಯಾನಿಕ್ ರೀಚ್ ಅಂದರೆ ಇದೆ!

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹಾಡುಗಳು ಹಿಟ್ ಆಗಬೇಕಾದರೆ ಕೋಟಿ ಕೋಟಿ ಸುರಿದು ಪ್ರಮೋಷನ್ ಮಾಡಬೇಕಾದ ಪರಿಸ್ಥಿತಿ ಇದೆ. ಆದರೆ “ರಾಯರ ದರ್ಶನ” ಹಾಡಿಗೆ ಜನರೇ ಸ್ವಯಂಪ್ರೇರಿತರಾಗಿ ಪ್ರಚಾರ ಮಾಡುತ್ತಿದ್ದಾರೆ. ರಿಲೀಸ್ ಆದ ಮೂರೇ ವಾರದಲ್ಲಿ 695,554ಕ್ಕೂ ಅಧಿಕ ವೀವ್ಸ್ ಪಡದಿದೆ ಅಂದರೆ ಈ ಹಾಡು ಮಾಡಿರುವ ಮೋಡಿ ಎಂತಹದ್ದು ನೀವೆ ಲೆಕ್ಕ ಹಾಕಿ.

ಇನ್ನು 20 ಸಾವಿರಕ್ಕೂ ಹೆಚ್ಚು ಜನ ಈ ಹಾಡನ್ನು ಮೆಚ್ಚಿದ್ದಾರೆ. ತಮ್ಮ ಮನದ ಅಭಿಪ್ರಾಯಗಳನ್ನು ಕಮೆಂಟ್ ಮಾಡುವ ಮೂಲಕ ಹಂಚಿಕೊಂಡವರ ಸಂಖ್ಯೆ 750ಕ್ಕೂ ಮೇಲಿದೆ. ಇವೆಲ್ಲ ಅಂಕಿ ಸಂಖ್ಯೆಗಳು ಯೂಟ್ಯೂಬ್‌ನಲ್ಲಿ ಈ ಹಾಡು ಟ್ರೆಂಡ್ ಸೃಷ್ಟಿಸುತ್ತಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿಗಳು. ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ವಾಟ್ಸಾಪ್ ಸ್ಟೇಟಸ್‌ಗಳಲ್ಲಿ ರಾಯರ ಭಕ್ತರು ಈ ಹಾಡನ್ನು ಸಿಕ್ಕಾಪಟ್ಟೆ ಶೇರ್ ಮಾಡಿಕೊಳ್ಳುತ್ತಿದ್ದು, ಡಿಜಿಟಲ್ ಲೋಕದಲ್ಲಿ ಸದ್ಯ ಭಕ್ತಿಯ ಅಲೆಯನ್ನು ಈ ಹಾಡು ಎಬ್ಬಿಸಿದೆ.

ರೀಲ್ಸ್ ಹುಚ್ಚಾಟದ ಕಾಲದಲ್ಲಿ ಮನಸ್ಸಿಗೆ ಶಾಂತಿ ನೀಡಿದ ರಾಯರ ನಾಮಸ್ಮರಣೆ!

ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಸ್ಕ್ರಾಲ್ ಮಾಡಿದರೆ ಬರೀ ಕಿರಿಕಿರಿ ಮಾಡುವ ರೀಲ್ಸ್‌ಗಳ ಕಿರಿಕಿರಿ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸಿಗೆ ನೆಮ್ಮದಿ ನೀಡುವ, ಮೆದುಳಿಗೆ ಶಾಂತಿ ಕೊಡುವ ಒಂದು ಡಿವೈನ್ ಸಾಂಗ್ ಬೇಕು ಅಂದುಕೊಳ್ಳುವವರಿಗೆ ಈ ಹಾಡು ಬೆಸ್ಟ್ ಆಯ್ಕೆ. ಕಣ್ಣು ಮುಚ್ಚಿ ಈ ಹಾಡನ್ನು ಕೇಳುತ್ತಿದ್ದರೆ ನಾವೇ ಮಂತ್ರಾಲಯದ ತುಂಗಭದ್ರಾ ನದಿಯ ದಂಡೆಯಲ್ಲಿ ಕುಳಿತು ರಾಯರ ಬೃಂದಾವನವನ್ನು ದರ್ಶನ ಮಾಡುತ್ತಿದ್ದೇವೇನೋ ಎಂಬ ಭ್ರಮೆ ಹುಟ್ಟಿಸುತ್ತದೆ. ಇದೇ ಈ ಸಾಂಗ್‌ನ ರಿಯಲ್ ಸಕ್ಸಸ್.

ಮಾಸ್ ಮಸಾಲಾ ಯುಗದಲ್ಲೂ ಗೆದ್ದ ಕ್ಲಾಸಿಕ್ ಕಂಟೆಂಟ್: ಬದಲಾಗುತ್ತಿದೆಯಾ ಜನರ ಟೇಸ್ಟ್?

“ರಾಯರ ದರ್ಶನ” ಹಾಡಿಗೆ ಸಿಗುತ್ತಿರುವ ಈ ಅಭೂತಪೂರ್ವ ರೆಸ್ಪಾನ್ಸ್ ನೋಡುತ್ತಿದ್ದರೆ ಒಂದು ವಿಷಯ ಸ್ಪಷ್ಟವಾಗುತ್ತದೆ—ಜನರು ಎಷ್ಟೇ ಕಮರ್ಷಿಯಲ್ ಹಾಡುಗಳನ್ನು ನೋಡಿದರೂ, ಕೊನೆಗೆ ಮನಸ್ಸಿನ ನೆಮ್ಮದಿಗೆ ಹುಡುಕುವುದು ಇಂತಹ ಕ್ಲಾಸಿಕಲ್ ಮತ್ತು ಸ್ಪಿರಿಚುಯಲ್ ಹಾಡುಗಳನ್ನೇ. ಹೊಸ ತಲೆಮಾರಿನ ಯುವಕರು ಕೂಡ ಈ ಹಾಡನ್ನು ಲೂಪ್‌ನಲ್ಲಿ ಕೇಳುತ್ತಿರುವುದು ಬದಲಾಗುತ್ತಿರುವ ಜನರ ಮ್ಯೂಸಿಕ್ ಟೇಸ್ಟ್‌ಗೆ ಸಾಕ್ಷಿಯಾಗಿದೆ. ಮಾಸ್ ಮಸಾಲಾ ಯುಗದಲ್ಲೂ ಒಳ್ಳೆಯ ಕಂಟೆಂಟ್ ಇದ್ದರೆ ಜನ ತಲೆಮೇಲೆ ಹೊತ್ತು ಮೆರೆಸುತ್ತಾರೆ ಎಂಬುದನ್ನು ಈ ಸಾಂಗ್ ಪ್ರೂವ್ ಮಾಡಿದೆ. ಭಕ್ತಿಗೀತೆಗಳಿಗೆ ಈಗಲೂ ಕೂಡ ಡಿಮ್ಯಾಂಡ್ ಇದೆ ಎನ್ನುವುದನ್ನು ಕೂಡ ”ರಾಯರ ದರ್ಶನ” ಹಾಡು ರುಜುವಾತು ಮಾಡಿದೆ. ನೀವು ಈ ಹಾಡು ಇನ್ನೂ ನೋಡಿಲ್ಲವಾದರೆ ಈಗಲೇ ನೋಡಿ. ಖಂಡಿತ ನಿಮಗೆ ಇಷ್ಟವಾಗಿಯೇ ಆಗುತ್ತೆ.

- Advertisement -spot_img

More articles

- Advertisement -spot_img

Latest article