ಕಳೆದ 24 ಗಂಟೆಯಲ್ಲಿ ಬ್ರಿಟನ್ ನಿಂದ ಬಂದ‌15 ಮಂದಿಗೆ ಕೊರೋನಾ

1
64

ಬೆಂಗಳೂರು: ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿ ಒಂದಂಕಿ ಕೊರೊನಾ ಪ್ರಕರಣಗಳಷ್ಟೆ ವರದಿಯಾಗಿವೆ. ಯಾದಗಿರಿಯಲ್ಲಿ ಒಂದೇ ಒಂದು ಹೊಸ ಪ್ರಕರಣವೂ ವರದಿಯಾಗಿಲ್ಲ. ಹಾವೇರಿಯಲ್ಲಿ ಕೇವಲ 1 ಕೇಸ್‌ ಅಷ್ಟೆ ದೃಢಪಟ್ಟಿದೆ.
ಒಟ್ಟಾರೆ 857 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 9,15,345ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೋವಿಡ್‌-19 ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಾಗ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ಮಾದರಿಯ ಕೊರೊನಾದ ಆತಂಕ ಆರಂಭವಾಗಿದೆ.
ಕಳೆದ 24 ಗಂಟೆಯಲ್ಲಿ ಬ್ರಿಟನ್‌ನಿಂದ ಆಗಮಿಸಿದ 15 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 9 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಳಿದ 6 ಜನರ ವರದಿ ಇನ್ನೂ ಬರಬೇಕಿದೆ. ಇಲ್ಲಿಯವರೆಗೆ ಯು.ಕೆಯಿಂದ ರಾಜ್ಯಕ್ಕೆ ಆಗಮಿಸಿದ 1,434 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 23 ಜನರಲ್ಲಿ ಕೋವಿಡ್‌ ಸೋಂಕಿರುವುದು ದೃಢಪಟ್ಟಿದೆ. ಆದರೆ ಇನ್ನೂ 503 ಜನರ ವರದಿ ಬರಬೇಕಿದೆ.
ಕಳೆದ 24 ಗಂಟೆಯಲ್ಲಿ ಬ್ರಿಟನ್‌ನಿಂದ ಆಗಮಿಸಿದ 15 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 9 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಉಳಿದ 6 ಜನರ ವರದಿ ಇನ್ನೂ ಬರಬೇಕಿದೆ. ಇಲ್ಲಿಯವರೆಗೆ ಯು.ಕೆಯಿಂದ ರಾಜ್ಯಕ್ಕೆ ಆಗಮಿಸಿದ 1,434 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 23 ಜನರಲ್ಲಿ ಕೋವಿಡ್‌ ಸೋಂಕಿರುವುದು ದೃಢಪಟ್ಟಿದೆ. ಆದರೆ ಇನ್ನೂ 503 ಜನರ ವರದಿ ಬರಬೇಕಿದೆ.
ಇದೇ ಅವಧಿಯಲ್ಲಿ 964 ಸೋಂಕಿತರು ಚೇತರಿಸಿಕೊಂಡಿದ್ದು, ಕೋವಿಡ್‌ನಿಂದ ಗುಣಮುಖರಾದವರ ಸಂಖ್ಯೆ 8,89,881ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 13,394 ಸಕ್ರಿಯ ಪ್ರಕರಣಗಳಿದ್ದು ಇವರಲ್ಲಿ 205 ಸೋಂಕಿತರು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ಓದಿರೋದನ್ನು ಥಟ್ ಅಂತ ನೆನಪಿಸಿಕೊಳ್ಳೋದು ಹೇಗೆ?

ಯಾವುದೇ ಪರೀಕ್ಷೆಗಳಿಗೆ ಪಠ್ಯಕ್ರಮದ ಪ್ರಕಾರ ಓದಿದರೂ ಕಲಿತದ್ದು ಪೂರ್ಣವಾಗಿ ನೆನಪಿನಲ್ಲಿ ಉಳಿಯುವುದಿಲ್ಲ. ಪ್ರಮುಖ ಮಾಹಿತಿಗಳನ್ನೇ ಮರೆತುಬಿಟ್ಟಿರುತ್ತೇವೆ. ಓದಿದ್ದೆಲ್ಲಾ ನೆನಪಿನಲ್ಲಿ ಉಳಿಯಬೇಕೆಂದರೆ ಅದಕ್ಕೆ ಮತ್ತೊಂದು ಶೈಲಿಯ ಅಧ್ಯಯನವನ್ನೇ ರೂಢಿಸಿಕೊಂಡು, ದಿನನಿತ್ಯ ಫಾಲೋ ಮಾಡಬೇಕು. ಈ ಸಲಹೆಗಳು ಒಂದು ರೀತಿ ಯುನಿವರ್ಸಲ್ ಫಾರ್ಮುಲಾಗಳಾಗಿದ್ದು, ಓದಿದ್ದನ್ನು ವೇಗವಾಗಿ ನೆನಪು ಮಾಡಿಕೊಳ್ಳಲು ಸಹಕಾರಿ. ಈ ವಿಧಾನಗಳನ್ನು ನೀಡಿದವರು ಜರ್ಮನಿ ಮನೋಶಾಸ್ತ್ರಜ್ಞರಾದ Hermann Ebbinghaus ರವರು. ಆ ವಿಧಾನಗಳನ್ನು ಈ ಕೆಳಗೆ ನೀಡಲಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ಆಗಲಿ, ಶೈಕ್ಷಣಿಕ ವಾರ್ಷಿಕ ಪರೀಕ್ಷೆಗಳಿಗೆ ಆಗಲಿ ಬಳಸಬಹುದು.
ಮರೆವಿಗೆ ಪ್ರಮುಖ ಕಾರಣಗಳೆಂದರೆ ಮೆದುಳು ಅನಗತ್ಯ ಮಾಹಿತಿಗಳಿಂದ ಓವರ್‌ಲೋಡ್‌ ಆಗುವುದನ್ನು ತಡೆಯುತ್ತದೆ. ಆದ್ದರಿಂದ ಎಲ್ಲಾ ಹೊಸ ಮಾಹಿತಿಗಳು ಶಾರ್ಟ್‌ ಟರ್ಮ್‌ ಮೆಮೊರಿಯಲ್ಲಿ ಸ್ಟೋರ್ ಆಗುತ್ತವೆಯೇ ಹೊರತು, ದೀರ್ಘ ಮೆಮೊರಿಯಲ್ಲಲ್ಲ. ಓದಿದ, ತಿಳಿದ ಮಾಹಿತಿಯನ್ನು ಮತ್ತೊಮ್ಮೆ ಓದದೇ ಇದ್ದರೇ ಅಥವಾ ಬಳಸದಿದ್ದಲ್ಲಿ, ಮಾಹಿತಿಗಳು ಬಹುಬೇಗ ಮರೆತುಹೋಗುತ್ತವೆ.
ಓದಿದ್ದು ದೀರ್ಘಕಾಲ ನೆನಪಿನಲ್ಲಿರಬೇಕು ಎಂದರೆ ಲಾಂಗ್ ಟರ್ಮ್‌ ಮೆಮೊರಿಯಲ್ಲಿ ಶೇಖರಣೆ ಮಾಡಬೇಕು. ನೆನಪು ಮಾಡಿಕೊಳ್ಳಲು ಮೆದುಳಿಗೆ ಹೆಚ್ಚು ಕೆಲಸಕೊಡುವುದು ತುಂಬಾ ಕಷ್ಟದ ಕೆಲಸವೇನಲ್ಲ. ದೀರ್ಘಕಾಲ ವಿಷಯಗಳನ್ನು ಮರೆಯಬಾರದು ಎಂದರೆ, ಕೆಲವು ದಿನಗಳು ಮತ್ತು ಅಥವಾ ಒಂದು ವಾರಗಟ್ಟಲೇ ಅದೇ ಮಾಹಿತಿಗಳನ್ನು ನೆನಪುಮಾಡಿಕೊಳ್ಳುವ ಮತ್ತು ಪುನಃ ಪುನಃ ಓದುವ ಚಟುವಟಿಕೆಗಳನ್ನು ಮಾಡಬೇಕು. ಇತರೆ ಹಲವು ಮೆಮೊರೈಜಿಂಗ್ ಟಿಪ್ಸ್‌ಗಳು ಈ ಕೆಳಗಿನಂತಿವೆ.
ಸುಮ್ಮನೆ ಓದುವ ಬದಲು ಓದಿದ್ದನ್ನು ಅರ್ಥಮಾಡಿಕೊಳ್ಳುತ್ತಾ ಓದಿ. ಅರ್ಥಮಾಡಿಕೊಂಡ ಮಾಹಿತಿಗಳು 9 ಪಟ್ಟು ವೇಗವಾಗಿ ನೆನಪಿಗೆ ಬರುತ್ತವೆ. ಹಾಗೆ ಅಗತ್ಯ ಮಾಹಿತಿಗಳನ್ನು ಮಾತ್ರ ಹೆಚ್ಚು ಓದಿ ಮತ್ತು ಕಲಿಯಿರಿ. ಯಾವುದಕ್ಕೆ ಎಷ್ಟು ಪ್ರಾಧಾನ್ಯತೆ ನೀಡಬೇಕೋ ಅಷ್ಟು ಮಾತ್ರ ನೀಡಿರಿ.

ಒಂದು ಟಾಫಿಕ್‌ನಿಂದ ಮತ್ತೊಂದು ಟಾಫಿಕ್‌ಗೆ ಲಿಂಕ್‌ ಮಾಡಿ ಗಮನಿಸಿ. ಹೀಗೆ ಮಾಡುವುದರಿಂದ ವಿಷಯಗಳು ಬಹುಬೇಗ ನೆನಪಿಗೆ ಬರುತ್ತವೆ. ಉದಾಹರಣೆಗೆ ಒಂದು ಸ್ಥಳವನ್ನು ತೆಗೆದುಕೊಂಡಾಗ, ಅದರ ಸುತ್ತಮುತ್ತಲ ಬಗ್ಗೆ ಯೋಚಿಸಿದರೆ, ಮತ್ತಷ್ಟು ಮಾಹಿತಿಗಳು ಸಿಗುತ್ತದೆ. ಹಾಗೆಯೇ ನೀವು ಓದಿದ ಮಾಹಿತಿಗೂ ಸಹ.
ಕಾಲಾನುಕ್ರಮವಾಗಿ ನೀವು ಯಾವುದಾದರೂ ಮಾಹಿತಿಗಳನ್ನು ನೆನಪು ಮಾಡಿಕೊಳ್ಳಬೇಕು ಎಂದಲ್ಲಿ, ಸಣ್ಣ ವಿಷಯಗಳನ್ನು ಒಂದು ಕಥೆಯನ್ನಾಗಿ ರೂಪಿಸಿ. ಹೀಗೆ ಮಾಡಿದಾಗ ವಿಷಯಗಳನ್ನು ನೆನಪು ಮಾಡಿಕೊಳ್ಳುವುದು ತುಂಬಾ ಸುಲಭ.
ಕಲಿಯುತ್ತಿರುವ ಮಾಹಿತಿಯನ್ನು ರೆಕಾರ್ಡ್‌ ಮಾಡಿ. ಸ್ವಲ್ಪ ಸಮಯಗಳ ಕಾಲ ಕೇಳಿರಿ. ಈ ವಿಧಾನವು ಬಹಳ ಜನರಿಗೆ ವರ್ಕ್ ಆಗುತ್ತದೆ. ಹಾಗೆ ಕಲಿಕೆ ವೇಳೆ ಉತ್ತಮ ಆಂಗಿಕ ಭಾಷೆ (Body Language) ಬಳಸಿ. ಇದರಿಂದ ಮೆಮೊರಿ ಪವರ್‌ ವೃದ್ಧಿಗೆ ಸಹಾಯವಾಗುತ್ತದೆ.

– ಅಧ್ಯಯನ ಸಾಮಾಗ್ರಿ ಆಯ್ಕೆಯಲ್ಲಿ ಉತ್ತಮವಾದುದ್ದನ್ನು ಆರಿಸಿಕೊಳ್ಳಿ. ತೀರ ಹಳೆಯ ಪುಸ್ತಕಗಳು ಮತ್ತು ವಿಧಾನಗಳನ್ನು ಅನುಸರಿಸದಿರಿ. ತಲೆಯೊಳಗೆ ಹೋಗದ ವಿಧಾನದಲ್ಲಿ ಯಾವುದನ್ನೇ ಕಲಿಯಬಾರದು. ಸುಲಭವಾಗಿ ಅರ್ಥವಾಗುವ ವಿಧಾನದಲ್ಲಿ ಅಧ್ಯಯನ ನಡೆಸಿ. ಉತ್ತಮ ಪುಸ್ತಕಗಳು, ನೆನಪು ಮಾಡಿಕೊಳ್ಳಲು ಸರಳ ಮಾದರಿಯಲ್ಲಿ ನೀಡಲಾದ ಮೆಟೀರಿಯಲ್‌ಗಳನ್ನು ಆಯ್ಕೆ ಮಾಡಿಕೊಂಡು ಓದಿರಿ.

 

1 COMMENT

LEAVE A REPLY

Please enter your comment!
Please enter your name here