ಸೌತ್ ಆಫ್ರಿಕಾದ ಈ ನಟ ಆಂಜನೇಯ ಸ್ವಾಮಿಯ ಅಪ್ಪಟ ಭಕ್ತ

0
328

ಜಾನ್ ಲೂಕಸ್ ವಿಶ್ವದ ಪ್ರಸಿದ್ಧ ಬಾಡಿ ಬಿಲ್ಡರ್. ತಮ್ಮ ಕಟ್ಟುಮಸ್ತಾದ ದೇಹ ದಿಂದ ಬಹಳ ಪ್ರಸಿದ್ಧತೆ ಮತ್ತು ಅಭಿಮಾನಿಗಳನ್ನು ಪಡೆದುಕೊಂಡಿರುವ ಜಾನ್ ಲೂಕಸ್ ಅವರಿಗೆ ಹಿಂದೂ ದೇವರಾದ ಶ್ರೀ ಆಂಜನೇಯ ಸ್ಪೂರ್ತಿ ಎಂಬ ವಿಚಾರ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಹೌದು ಜಾನ್ ಲೂಕಸ್ ಅವರು ತಮ್ಮ ದೇಹವನ್ನು ಬೆಳೆಸಲು ಆಂಜನೇಯಸ್ವಾಮಿ ಸ್ಪೂರ್ತಿ ಎಂಬುದನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದರ ಮೂಲಕ ಬಹಿರಂಗಪಡಿಸಿದ್ದಾರೆ. ಆಂಜನೇಯಸ್ವಾಮಿ ಮುಂದೆ ನಿಂತು ಪೋಸ್ ಕೊಟ್ಟಿರುವ ಇವರ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಾನ್ ಲೂಕಸ್ ಅವರು ಕನ್ನಡದ ಪೊಗರು ಚಿತ್ರದಲ್ಲಿಯೂ ಸಹ ಅಭಿನಯವನ್ನು ಮಾಡಿದ್ದಾರೆ.