No menu items!
16.9 C
Munich
Monday, June 15, 2026

ಕೃಷಿಯಲ್ಲಿ‌ ಬಾಲಿವುಡ್ ಬಾಯಿಜಾನ್..ಟ್ರ್ಯಾಕ್ಟರ್‌ ಓಡಿಸುತ್ತಿರುವ ವಿಡಿಯೋ ಹಂಚಿಕೊಂಡ ಸಲ್ಮಾನ್..

Must read

ಕೊರೊನಾ‌ದಿಂದಾಗಿ‌ ಸದ್ಯ ಬಾಲಿವುಡ್ ‌ಕೊಂಚ ಸೈಲೆಂಟ್ ‌ಆಗಿದೆ. ಹೀಗಾಗಿ‌‌ ಬಾಲಿವುಡ್ ತಾರೆಯರು ತಮ್ಮದೇ ಲೋಕದಲ್ಲಿ ಕಳೆದುಹೋಗಿದ್ದಾರೆ.‌ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಕೊರೊನಾ ಲಾಕ್ ಡೌನ್ ನಲ್ಲಿ ಕೃಷಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ನಾಲ್ಕು ತಿಂಗಳಿಂದ ಸಲ್ಮಾನ್ ತನ್ನ ಫಾರ್ಮ್ ಹೌಸ್ ನಲ್ಲಿ ನೆಲೆಸಿದ್ದು, ಅಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.ಕೃಷಿ ಗದ್ದೆಗಿಳಿದು, ಭತ್ತ ನಾಟಿ ಮಾಡುತ್ತಿರುವ, ಉಳುಮೆ‌ ಮಾಡುತ್ತಿರುವ ವಿಡಿಯೋವನ್ನು ಹಂಚಿ ಕೊಂಡಿದ್ದಾರೆ. ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ತಮ್ಮ ಮೈಯೆಲ್ಲಾ ಕೆಸರಾಗಿರುವ ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೇ ಈ ಫೋಟೋ ಸಾಕಷ್ಟು ಟ್ರೋಲ್ ಆಗಿತ್ತು.

ಕೆಲವು ಅಭಿಮಾನಿಗಳು ಸಲ್ಲು‌‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಕೆಲವರು ಮಾತ್ತ ‘ಸಲ್ಲುಗೆ ಕೃಷಿ ಅಂದರೆನೆಂಬುದೇ ಗೊತ್ತಿಲ್ಲ. ಕೇವಲ ನಾಟಕವಾಡುತ್ತಿದ್ದಾರೆ ಎಂದು ಕಾಲೆಳೆಯುವುದರ ಜೊತೆಗೆ ಸಾಕಷ್ಟು ಟ್ರೋಲ್ ಮಾಡಿದ್ದರು.

ತಮ್ಮ ಕೃಷಿ ಚಟುವಟಿಕೆಗಳ ಫೋಟೋ, ವಿಡಿಯೋ ಹಾಕೋದರ ಮೂಲಕ ಟಾಂಗ್ ನೀಡಿದ್ದಾರೆ. ‘ಗದ್ದೆಯಲ್ಲಿ ಟ್ರಾಕ್ಟರ್ ಓಡಿಸುವ ವಿಡಿಯೋವೊಂದನ್ನು ಹಂಚಿಕೊಂಡು ನನಗೂ ಕೃಷಿಯ ಬಗ್ಗೆ ಜ್ಞಾನವಿದೆ’ ಎಂದು ಸಾಬೀತುಪಡಿಸಿದ್ದಾರೆ.

ಸಲ್ಮಾನ್ ಖಾನ್ ಲಾಕ್ ಡೌನ್ ಆರಂಭದ ಕಾಲದಿಂದಲೂ ತಮ್ಮದೆ ಫಾರ್ಮ್ ಸ್ ನಲ್ಲಿ ಕಾಲಕಳೆಯುತ್ತಿದ್ದಾರೆ. ಮಾತ್ರವಲ್ಲದೆ ಅಲ್ಲಿಂದಲೇ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂವಾದ ನಡೆಸುತ್ತಿದ್ದಾರೆ. ಈ ಹಿಂದೆ ಗದ್ದೆಯಲ್ಲಿ ನಾಟಿ ಮಾಟುತ್ತಿರುವ ಫೋಟೋವನ್ನು ಹಂಚಿಕೊಂಡು ಎಲ್ಲಾ ಅನ್ನದಾತರನ್ನು ಗೌರವಿಸುವೆ ಎಂದು ಕ್ಯಾಪ್ಷನ್ ನೀಡಿದ್ದರು. ಈದು ವೈರಲ್ ಆಗಿದ್ದು ಮಾತ್ರವಲ್ಲದೆ ಟ್ರೋಲ್ ಕೂಡ ಆಗಿತ್ತು. ಕೃಷಿ ಎನೆಂಬುದೇ ಗೊತ್ತೆ ಇಲ್ಲ ಎಂದು ಟ್ರೋಲ್ ಮಾಡಿದವರಿಗೆ ಸಲ್ಮಾನ್ ಖಾನ್ ಖಡಕ್ ತಿರುಗೇಟು ನೀಡಿದ್ದಾರೆ.ಈ ವಿಡಿಯೋದಲ್ಲಿ ಸಲ್ಮಾನ್ ಖಾನ್ ಟ್ರ್ಯಾಕ್ಟರ್ ಓಡಿಸುತ್ತಿದ್ದಾ ಸ್ವತಃ ಭತ್ತದ ಗದ್ದೆಯಲ್ಲಿ ಇಳಿದು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.ಇದೀಗ ಟ್ರೋಲಿಗರಿಗೆ ಸಲ್ಲು ಸಖತ್ ಆಗೇ ತಿರುಗೇಟು ನೀಡಿದ್ದಾರೆ.

ಸದ್ಯ ಸಲ್ಮಾನ್ ಖಾನ್ ರಾಧೇ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಮೇ ತಿಂಗಳಲ್ಲಿ ತೆರೆಕಾಣಬೇಕಿತ್ತು. ಆದರೆ, ಕೋವಿಡ್ ವೈರಸ್ ಹಿನ್ನೆಲೆಯಲ್ಲಿ ಸಿನಿಮಾ ಕೆಲಸಗಳನ್ನು ಮುಂದೂಡಲಾಗಿತ್ತು.ಈ ಸಿನಿಮಾ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article