No menu items!
20.9 C
Munich
Friday, August 21, 2026

ಕೃಷಿ ಇಲಾಖೆ ಬಿಟ್ಟರೆ ಕಾರ್ಮಿಕರೇ ಹೆಚ್ಚು ಈ ದೇಶದಲ್ಲಿ ಇರೋದು !

Must read

ಬೆಂಗಳೂರು: ನನ್ನ ಹೆಸರಲ್ಲಿ ಪೂಜೆ ಮಾಡಿಸೋ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ಅಸಂಘಟಿತ ಕಡ್ಟಟ ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯಬೇಕು ಅಂತ 226 ಕೋಟಿ ರೂ. ಧನಸಹಾಯ ಮಾಡ್ತಿದ್ದೇವೆ. 9.60 ಲಕ್ಷ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದ್ದೇವೆ. ರಾಜ್ಯದಲ್ಲಿ 83% ಅಸಂಘಟಿತ ಕಾರ್ಮಿಕರು ಇದ್ದಾರೆ. ಕೃಷಿ ಇಲಾಖೆ ಬಿಟ್ಟರೆ ಕಾರ್ಮಿಕರೇ ಹೆಚ್ಚು ಈ ದೇಶದಲ್ಲಿ ಇರೋದು. ಯಾವುದೇ ರಾಷ್ಟ್ರದ ಶಕ್ತಿ ಕಾರ್ಮಿಕರು ಅಂತ ಅಂಬೇಡ್ಕರ್ ಹೇಳಿದ್ದರು ಎಂದು ನುಡಿದರು.
ಶಕ್ತಿ ಯೋಜನೆ ಅಡಿ 88 ಕೋಟಿ ಹೆಣ್ಣುಮಕ್ಕಳು ಓಡಾಡಿದ್ದಾರೆ. ಶಕ್ತಿ ಯೋಜನೆ ಮಾಡಿದ ಮೇಲೆ ಧರ್ಮಸ್ಥಳಕ್ಕೆ ಬರೋರು ಜಾಸ್ತಿ ಆಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ನನ್ನ ಹೆಸರಲ್ಲಿ ಪೂಜೆ ಮಾಡಿಸ್ತಾರೆ ಅಂತ ಹೇಳಿದ್ದಾರೆ. ನನ್ನ ಹೆಸರಲ್ಲಿ ಪೂಜೆ ಮಾಡಿಸೋ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಸಿಎಂ ಸಿದ್ದರಾಮಯ್ಯ ನುಡಿದಿದ್ದಾರೆ.

- Advertisement -spot_img

More articles

- Advertisement -spot_img

Latest article