ಹಠಮಾರಿ ಹುಡುಗಿ, ಹುಚ್ಚು ಹುಡುಗನ ಮದುವೆ ಸ್ಟೋರಿ ಇದು..!

0
744

ಮೊನ್ನೆ ಅವಳು ಮತ್ತು ಅವನು ಸಿಕ್ಕಿ ಮದುವೆ ಇನ್ವಿಟೇಶನ್ ಕೊಟ್ಟು ಕಥೆ ಹೇಳಿದಾಗ ಒಂಥರಾ ಖುಷಿಯಾಯ್ತು…..!ಹಠಮಾರಿ ಹುಡುಗಿ, ಹುಚ್ಚು ಹುಡುಗನ ಮದುವೆ ಸ್ಟೋರಿ ಇದು…! ಬೇಡ ಎಂದು ದೂರಾದವರು ಮತ್ತೆ ಒಂದಾಗುತ್ತಿರೋ ಬ್ಯೂಟಿಫುಲ್ ಜೋಡಿಯ ಸಖತ್ ಸ್ಟೋರಿ ಇದು…!

ಅವಳು ನನ್ನ ಆತ್ಮೀಯ ಸ್ನೇಹಿತೆ ಸಂಗೀತ. ಅವನೂ ಕೂಡ ನನಗೆ ಗೊತ್ತು…! ಅವಳಿಂದಲೇ, ಅದೊಂದು ಅನುಮಾನ ಜಗಳದಿಂದಲೇ ಅವನ ಪರಿಚಯ ಆಗಿದ್ದು…!


ಬನ್ನಿ ಮೂರು ವರ್ಷದ ಹಿಂದೆ ಹೋಗಿ ಬರೋಣ. ಆಗ ಮಾಸ್ಟರ್ ಡಿಗ್ರಿ ಮಾಡ್ತಿದ್ದೆ.‌ ನಾನು ಪತ್ರಿಕೋದ್ಯಮದ ವಿದ್ಯಾರ್ಥಿ. ಸಂಗೀತ ಪೊಲಿಟಿಕಲ್ ಸೈನ್ಸ್ ಸ್ಟೂಡೆಂಟ್. ನಮ್ ಯೂನಿವರ್ಸಿಟಿಯಲ್ಲಿ ಜರ್ನಲಿಸಂ ಮತ್ತು ರಾಜ್ಯಶಾಸ್ತ್ರ ವಿಭಾಗ ಎರಡೂ ಅಕ್ಕಪಕ್ಕದಲ್ಲೇ ಇವೆ. ಅಲ್ಲೇ ಪಕ್ಕದಲ್ಲೇ ಇಂಗ್ಲಿಷ್ ಡಿಪಾರ್ಟ್‌ಮೆಂಟ್..!


ಒಂದ್ ದಿನ ಸಿಕ್ಕಾಪಟ್ಟೆ ಮಳೆ ಬರ್ತಿತ್ತು… ಮಳೆಯಲ್ಲಿ ಹೇಗಪ್ಪಾ ಆಚೆ ಹೋಗೋದು ಅಂತ ಟೆಕ್ಷನ್ ನಲ್ಲಿ ನಿಂತಿದ್ದೆ..‌.ಫ್ರೆಂಡ್ಸ್ ಎಲ್ಲಾ ಕ್ಯಾಂಟಿನಲ್ಲಿ ಬಿಸಿಬಿಸಿ ಕಾಫಿ, ಬೋಂಡ‌ ತಿನ್ತಾ …ಕಾಲ್ ಮಾಡಿ ಬೇಗ ಬಾರೋ ಅಂತಿದ್ರು‌…! ನಾನು ನೆನೆದುಕೊಂಡು ಹೋಗುವ ಸ್ಥಿತಿಯಲ್ಲಿರ್ಲಿಲ್ಲ. ಆಗತಾನೆ ಜಾಂಡೀಸ್ ನಿಂದ ಗುಣಮುಖನಾಗ್ತಿದ್ದೆ. ಹೆಂಗಪ್ಪ ಹೋಗೋದು ಅಂತಿರುವಾಗ ಪೊಲಿಟಿಕಲ್ ಸೈನ್ಸ್ ಡಿಪಾರ್ಟ್ಮೆಂಟ್ ಕಡೆಯಿಂದ ಒಬ್ಬಳು ಬಂದಳು…! ಅವಳು ನನ್ನ ಪಕ್ಕದಲ್ಲಿ ನಿಂತು ಛತ್ರಿಸಿಡಿಸಿದಾಗ ,’ರೀ….ಬೇಜಾರಿಲ್ದೆ ನನ್ನ ಸ್ವಲ್ಪ ಕ್ಯಾಂಟೀನ್ ಹತ್ತಿರ ಬಿಡ್ತೀರ…? ಅಂದೆ.‌..!


ಅಯ್ಯೋ ಬನ್ನಿ‌….ನಾನು ಅಲ್ಲೇ ಹೋಗ್ತಾ ಇದ್ದೀನಿ…ಅಂದ್ಲು ಅವಳ ಸ್ಕೂಟಿಯಲ್ಲಿ ಹಿಂದಿ ಕೂರಿಸಿಕೊಂಡ್ಲು…ನಾ ಛತ್ರಿ ಹಿಡಿದೆ…! ಕ್ಯಾಂಟೀನ್ ಬಂತು.. ನಾನು ಥ್ಯಾಂಕ್ಯು ಹೇಳಿ ಗೆಳೆಯರಿದ್ದ ಟೇಬಲ್ ಕಡೆಗೆ ಹೋದೆ. ಅವಳು ಅವಳ ಫ್ರೆಂಡ್ಸ್ ಇದ್ದೆಡೆಗೆ ಹೋದ್ಲು…! ಅದೇ ನಮ್ಮಿಬ್ಬರ ಮೊದಲ ಭೇಟಿ…ಅದು ಎರಡನೇ ವರ್ಷದ ಸ್ನಾತಕೋತ್ತರ ಪದವಿಯ ಆರಂಭದ ದಿನಗಳು..! ಎರಡು ಡಿಪಾರ್ಟ್‌ಮೆಂಟ್ ಅಕ್ಕಪಕ್ಕ ಇದ್ದರೂ ನಮಗೆ ಪರಸ್ಪರ ಪರಿಚಯ ಇರಲಿಲ್ಲ. ಆಕೆ ಸಂಗೀತ.


ಅವತ್ತು ಅವಳು ನನ್ನ ಸ್ಕೂಟಿಯಲ್ಲಿ ಕೂರಿಸಿಕೊಂಡು ಬಂದಿದ್ದನ್ನು ಇಂಗ್ಲಿಷ್ ಡಿಪಾರ್ಟ್ ಮೆಂಟ್ ನ‌ ಹರ್ಷ ನೋಡಿದ್ದ. ಅವನು ಮರುದಿನ ಬೆಳಗ್ಗೆ ನನಗೆ ಸಿಕ್ಕ…! ಮಾತಿಗೂ ಅವಕಾಶ ನೀಡದೆ ಹಲ್ಲೆಗೆ ಮುಂದಾದ‌. ಅವನು ಮುಷ್ಠಿಕಟ್ಟಿ ನನ್ನ ಮುಖಕ್ಕೆ ಹೊಡೆದಿದ್ದೇ ತಡ…ನಾನೂ ಕೋಪಗೊಂಡು ತಿರುಗಿ ಬಾರಿಸಿದೆ…ನೀನ್ಯಾರು….ಬೊಗಳು, ಬೋ….ಯಾಕೋ ಕೈ ಮಾಡಿದೆ….ಈಗ ಹೊಡಿಯೋ ಅಂತ ಹಿಗ್ಗಾಮುಗ್ಗ ಬಾರಿಸಿದೆ. ಅವತ್ತು ಬೈಕ್ ತಗೊಂಡು ಬಂದಿದ್ದೆ, ಆದ್ರಿಂದ ಕೈಯಲ್ಲಿದ್ದ ಹೆಲ್ಮೆಟ್ ಕೂಡ ನನಗೆ ಸಾಥ್ ಕೊಟ್ಟಿತ್ತು….! ಅಷ್ಟೊತ್ತಿಗೆ ನನ್ನ ಫ್ರೆಂಡ್ಸ್ ಬಂದ್ರು…


ಹೇಳ್ದೆ, ಇವ್ನು ಯಾರೋ…ಮಾರಾಯ…ಸುಮ್ ಸುಮ್ನೆ ಬಂದ್ ಹೊಡೆದ ಅಂತ…! ಫ್ರೆಂಡ್ಸ್ ನನ್ನ ಸಮಾಧಾನ ಪಡಿಸಿ ಅವನನ್ನು ವಿಚಾರಿಸೋಕೆ ಶುರುಮಾಡಿದ್ರು. ಅಷ್ಟರಲ್ಲೇ ಸಂಗೀತ ಬಂದಳು…!


ಅವಳು ಅವನನ್ನು ಬಿಡಿಸಿದಳು, ಅವನು ಅವಳ ಮೇಲೆ ಕೋಪ ತೋರಿಸಿದ…ಮತ್ತೆ ನಾ ಹೆಲ್ಮೆಟ್ ಇಟ್ಕೊಂಡು , ನಿನ್ನ ಉಳಿಸೋಕೆ ಬಂದವಳ ಮೇಲೆ ಕೈ‌ ಮಾಡ್ತೀಯ…ಅಂತ ಮತ್ತೊಮ್ಮೆ ಹಲ್ಲೆಗೆ ಮುಂದಾದೆ. ಆಗ ನನ್ನ ತಡೆದ ಸಂಗೀತ. ..ಪ್ಲೀಸ್…ಅಂತ ಕೈ ಮುಗಿದಳು…ಇವನು ಹರ್ಷ ಅಂತ ನಾವಿಬ್ರು ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದೀವಿ ಅಂದ್ಲು‌. ನೀವ್ ಏನ್ ಬೇಕಾದ್ರು ಮಾಡಿಕೊಳ್ಳಿ….ಇವನಿಗೇಕೆ ಈ ನನ್ ಮಗ ಹೊಡೆಯೋಕೆ ಬಂದಿದ್ದು ಅಂತ ನನ್ನ ಫ್ರೆಂಡ್ಸ್ ರೇಗಾಡಿದ್ರು. ಆಗ ಅವನು ಬಾಯ್ಬಿಟ್ಟ…ನಿನ್ನೆ ಇವನು ಇವಳ ಜೊತೆ ಸ್ಕೂಟಿಯಲ್ಲಿ ಬಂದಿದ್ದು ಯಾಕೆ ಅಂದ…? ಆಗ ಸಿಟ್ಟು ಮಾಡಿಕೊಳ್ಳೋ ಸರಧಿ ಸಂಗೀತದ್ದು…ಥೂ‌ ನಿನ್ನ ಅನುಮಾನಕ್ಕೆ ಅಂತ ಉಗಿದು ಏನಾಯ್ತು ಅಂತ ಬಿಡಿಸಿ ಹೇಳಿದ್ಲು…! ಅಷ್ಟೊತ್ತಿಗೆ ಯಾರೋ ನಮ್ಮ ಡಿಪಾರ್ಟ್‌ಮೆಂಟ್ ಹಾಗೂ ಇಂಗ್ಲೀಷ್ ಡಿಪಾರ್ಟ್‌ಮೆಂಟ್ ಪ್ರೊಫೆಸರ್ ಗೆ ವಿಷಯ ಮುಟ್ಟಿಸಿದ್ರು. ಅವರು ಬರೋದನ್ನು ನೋಡಿ ಎಲ್ರೂ ಕಾಲ್ಕಿತ್ವಿ…! ಹರ್ಷನನ್ನು ನಾವೇ ಹಾಸ್ಟೆಟಲ್ ಗೆ ಕರ್ಕೊಂಡು‌ ಹೋಗಿ ಚಿಕಿತ್ಸೆ ಕೊಡಿಸಿದ್ವಿ…ಆಮೇಲೆ ಎಚ್ ಒಡಿ ಕರೆಸಿ ಬುದ್ಧಿಹೇಳಿದ್ರು.


ಬರ್ತಾ ಬರ್ತಾ ಸಂಗೀತ, ಹರ್ಷ ನಮಗೆ ತುಂಬಾ ಒಳ್ಳೆಯ ಫ್ರೆಂಡ್ಸ್ ಆದ್ರು. ಎಲ್ಲಾ ಚೆನ್ನಾಗೇ ಇತ್ತು. ಆದ್ರೆ ಹರ್ಷ ತನ್ನ ಜೂನಿಯರ್ ಸ್ಮಿತಾ ಜೊತೆ ಯಾವಾಗ ಕ್ಲೋಸ್ ಆದನೋ…ಸಂಗೀತ ನೋವಾಯ್ತು.‌ ಸ್ಮಿತಾ ವಿಚಾರದಲ್ಲಿ ಇಬ್ಬರೂ ನಿತ್ಯ ಜಗಳ ಮಾಡಲಾರಂಭಿಸಿದ್ರು. ಯಾರ ಮಾತು ಕೇಳಲೇ ಇಲ್ಲ. ಲವ್ ಬ್ರೇಕಪ್ ಆಯ್ತು. ಅಷ್ಟೊತ್ತಿಗೆ ಪಿಜಿ ಮುಗಿಯಿತು…ಎಲ್ಲರೂ ದೂರವಾದೆವು.

ಮನೆಯಲ್ಲಿ ಸಂಗೀತಗೆ‌ ನೋಡಿದ ಹುಡುಗ ಹರ್ಷ…! ಎರಡೂ ಕುಟುಂಬದವರೂ ಒಪ್ಪಿ ಮದುವೆಗೆ ಮುಂದಾಗಿ, ಇಬ್ಬರನ್ನು ಕೇಳಿದ್ದಾರೆ. ಹರ್ಷನ ಅಪ್ಪ ಅಮ್ಮ ಸಂಗೀತಳ ಫೋಟೊ ತೋರಿಸಿದಾಗ ಇಷ್ಟ ಆಯ್ತು…ಕೂಡಲೇ ಅವಳಿಗೆ ಫೋನ್ ಮಾಡಿದ…ಮಾತಾಡಿದ..ಕ್ಷಮೆ ಕೇಳಿದ. ಇಬ್ಬರೂ ಸರಿಯಾದ್ರು. ಮದುವೆಗೆ ಒಪ್ಪಿದ್ರು…ಈಗ ಅವರ ಮದುವೆ..ಆಮಂತ್ರಣ ನೀಡುವ ಸಲುವಾಗಿ ಇಬ್ಬರೂ ನನಗೆ ಸಿಕ್ಕಿದ್ರು…ತುಂಬಾ ಖುಷಿಯಾತ್ತು ಒಳ್ಳೆಯದಾಗ್ಲಿ….

 

LEAVE A REPLY

Please enter your comment!
Please enter your name here