No menu items!
24.7 C
Munich
Saturday, May 2, 2026

ಗೃಹಲಕ್ಷ್ಮಿ ತಂದ ಸೌಭಾಗ್ಯ: ಮಗಳಿಗೆ ಕಂಪ್ಯೂಟರ್ ಕೊಡಿಸಿದ ತಾಯಿ

Must read

ಗೃಹಲಕ್ಷ್ಮಿ ತಂದ ಸೌಭಾಗ್ಯ: ಮಗಳಿಗೆ ಕಂಪ್ಯೂಟರ್ ಕೊಡಿಸಿದ ತಾಯಿ

ತುಮಕೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಬರುವ 2,000 ರೂ. ಹಣದಿಂದ ಬಹಳಷ್ಟು ಮಹಿಳೆಯರು ಅನುಕೂಲ ಪಡೆಯುತ್ತಿದ್ದಾರೆ. ಮಹಿಳೆಯರು ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಫ್ರಿಡ್ಜ್, ವಾಷಿಂಗ್ ಮಷಿನ್ ಖರೀದಿಸಿದ್ದ ವಿಷಯ ಸುದ್ದಿಯಾಗಿತ್ತು. ಇತ್ತೀಚಿಗೆ ವೃದ್ಧೆಯೊಬ್ಬರು ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದ ಸುದ್ದಿ ವರದಿಯಾಗಿತ್ತು.
ಸದ್ಯ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ತಾಯಿಯೊಬ್ಬಳು ಮಗಳಿಗೆ ಕಂಪ್ಯೂಟರ್ ಕೊಡಿಸಿದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರಿನ ಗಾಂಧಿ ನಗರದ ಕೆರಗೋಡಿ ವಾಸಿಗಳಾದ ಸಾಧಿಕ್ ಹಾಗೂ ನಗ್ಮ ದಂಪತಿ ತಮ್ಮ ಪುತ್ರಿ ಸೈದಾ ಆಫೀಫಾಗೆ ಓದಲು ಅನುಕೂಲ ಆಗಲೆಂದು ಗೃಹಲಕ್ಷ್ಮೀ ಹಣವನ್ನು ಕೂಡಿಟ್ಟು ಕಂಪ್ಯೂಟರ್ ಕೊಡಿಸಿದ್ದಾರೆ.
ಗೃಹಲಕ್ಷ್ಮಿ ಹಣದಲ್ಲಿ ಮಗಳಿಗೆ ಕಂಪ್ಯೂಟರ್ ಕೊಡಿಸಿ ಪೋಷಕರು ಸಂಭ್ರಮಿಸಿದ್ದಾರೆ. ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿಗಳನ್ನ ಹಾಕಲಾಗುತ್ತಿದೆ.

- Advertisement -spot_img

More articles

- Advertisement -spot_img

Latest article