No menu items!
28.7 C
Munich
Saturday, July 25, 2026

ಚಿಲ್ಲರೆ ಹೇಳಿಕೆಗಳಿಗೆ ಮತ್ತು ಅಸಂಬದ್ಧ ಹೇಳಿಕೆಗಳಿಗೆ ಉತ್ತರ ಕೊಡಲ್ಲ: ಪ್ರಲ್ಹಾದ್ ಜೋಶಿ

Must read

ಹುಬ್ಬಳ್ಳಿ: ಚಿಲ್ಲರೆ ಹೇಳಿಕೆಗಳಿಗೆ ಮತ್ತು ಅಸಂಬದ್ಧ ಹೇಳಿಕೆಗಳಿಗೆ ಉತ್ತರ ಕೊಡಲ್ಲ. ಮೋದಿ ಏನು ಸೈಟ್ ತಗೊಂಡಿದ್ದಾರೆಯೇ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಒಂದೂವರೆ ವರ್ಷದಲ್ಲಿ ಸರ್ಕಾರ ಭಯಂಕರ ಬ್ರಷ್ಟಾಚಾರ ಎಸಗಿದೆ. ರಾಹುಲ್ ಗಾಂಧಿ, ಇನ್ನಿತರ ನಾಯಕರಿಂದ ಭಯಂಕರ ಬ್ರಷ್ಟಾಚಾರ ಶುರುವಾಗಿದೆ. ಸಾವಿರಾರು ಕೋಟಿ ಸಂಗ್ರಹ ಮಾಡಿ ತೆಲಂಗಾಣಕ್ಕೆ ಆಗಾಗ ಕೊಟ್ಟಿದ್ದಾರೆ ಎಂದು ಆರೋಪಿಸಿದಾಗ ಕಾಂಗ್ರೆಸ್ ಆಕ್ಷೇಪ ಮಾಡಿತ್ತು.
ಒಂದು ಸಾವಿರ ಕೋಟಿ ಹಣ ಸಂಗ್ರಹ ಆಗಿದೆ ಎಂದು ನಾನು ಮೊದಲೇ ಹೇಳಿದ್ದೆ. ಇದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನೂರಾರು ಜನರಿಗೆ ಟ್ರಾನ್ಸಫರ್ ಮಾಡಿದ್ದಾರೆ. ನಿನ್ನೆ ಕೆಲ ಅಧಿಕಾರಿಗಳು ಸಿಕ್ಕಿದ್ದರು. ಬೆಂಗಳೂರಿನಲ್ಲಿ ಕೆಲ ಪ್ರಮುಖ ಅಧಿಕಾರಿಗಳು ಸಿಕ್ಕಿದ್ದರು. ಎಲ್ಲ ಹಣ ಹೈದರಾಬಾದ್ ಕಂಪನಿಗಳಿಗೆ ಹಣ ಹೋಗಿದೆ. ಇದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಗೊತ್ತಿದ್ದೇ ಮಾಡಿದ್ದು ಎಂದು ಜೋಶಿ ಆರೋಪಿಸಿದರು.

- Advertisement -spot_img

More articles

- Advertisement -spot_img

Latest article