No menu items!
13.1 C
Munich
Monday, June 15, 2026

ಜೈಲಿನಲ್ಲೇ ಮದುವೆ!

Must read

ಭುವನೇಶ್ವರ: ಮದುವೆಯಾಗುವುದಾಗಿ ವಂಚಿಸಿ ಮತ್ತೊಬ್ಬಳನ್ನು ಮದುವೆಯಾಗಲು ಯತ್ನಿಸಿ ಜೈಲು ಪಾಲಾಗಿದ್ದವನಿಗೆ ಜೈಲಿನಲ್ಲಿಯೇ ಮದುವೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ನರಸಿಂಗ್ ದಾಸ್ ಹಾಗೂ ಪೂಜಾ ದಾಸ್ ಇಬ್ಬರು ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ನರಸಿಂಗ್ ದಾಸ್ ಪ್ರೀತಿಸಿ ಮೋಸ ಮಾಡಲು ಯತ್ನಿಸಿದ್ದನು. ಹೀಗಾಗಿ ಇಬ್ಬರಿಗೂ ಜೈಲಿನಲ್ಲಿ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವನ್ನು ಮಾಡಲಾಗಿದೆ.

ನರಸಿಂಗ್ ದಾಸ್ ಹಾಗೂ ಪೂಜಾ ಇಬ್ಬರು ಪ್ರೀತಿಸುತ್ತಿದ್ದರು. ಪೂಜಾಳಿಗೆ ಮೋಸ ಮಾಡಿ ಬೇರೆ ಯುವತಿಯೊಂದಿಗೆ ಮದುವೆಯಾಗಲೂ ಯೋಚನೆಯನ್ನು ರೂಪಿಸಿದ್ದನು. ಈ ವಿಚಾರವನ್ನು ತಿಳಿದ ಸಂತ್ರಸ್ತೆ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಆಧಾರದ ಮೇಲೆ ನರಸಿಂಗ್‍ನನ್ನು ಪೊಲೀಸರು 2019ರ ಸೆಪ್ಟೆಂಬರ್ 28 ರಂದು ಪೋಕ್ಸೋ ಕಾಯ್ದೆ ಅಡಿ ಬಂಧಿಸಿದ್ದರು. ಈ ವೇಳೆ ಪೂಜಾ ಅಪ್ರಾಪ್ತೆಯಾಗಿದ್ದಳು.

ಪ್ರೇಮಿಗಳ ಮದುವೆಯನ್ನು ಒಡಿಶಾ ಹೈಕೋರ್ಟ್ ಮಧ್ಯಸ್ಥಿಕೆಯಲ್ಲಿ ನಡೆಸಲಾಗಿದೆ ಎಂದು ಜೈಲಿನ ಡಿಐಜಿ ಕುಲಮಣಿ ಬೆಹೆರಾ ತಿಳಿಸಿದ್ದಾರೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article