No menu items!
15.1 C
Munich
Wednesday, May 6, 2026

ಡಿಸಿಎಂ ಸಿಬಿಐ ತನಿಖೆಯಿಂದ ಪಾರಾಗಲು ಸಾಲು-ಸಾಲು ಸವಾಲು !

Must read

ಬೆಂಗಳೂರು :- ಸಿಬಿಐ ತನಿಖೆಯಿಂದ ಪಾರಾಗಲು DCM ಡಿಕೆ ಶಿವಕುಮಾರ್ ಹೂಡಿರುವ ತಂತ್ರ ಸುಲಭಕ್ಕೆ ಫಲ ಕೊಡುವ ಲಕ್ಷಣಗಳು ಕಾಣುತ್ತಿಲ್ಲ.

ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿಯನ್ನು ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ.

ಕೋರ್ಟ್​ನಲ್ಲಿ ಈ ಬಗ್ಗೆ ಕಾನೂನು ಹೋರಾಟಕ್ಕೆ ಸಿದ್ಧತೆಗಳು ಆರಂಭವಾಗಿವೆ. ಹಾಗಾದರೆ ಸಿಬಿಐ ಮುಂದಿನ ದಾರಿ ಏನು? ಶಿವಕುಮಾರ್ ಮುಂದಿರುವ ಹಾದಿ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಾದರೂ ಸರಿ ಸಿಬಿಐ ತನಿಖೆಯಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬಚಾವು ಮಾಡಲೇಬೇಕು ಎಂದು ರಾಜ್ಯ ಸರ್ಕಾರ ತೀರ್ಮಾನಿಸಿದಂತಿದೆ. ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರದ ನೀಡಿದ ಸಮ್ಮತಿ ಹಿಂಪಡೆಯಲು ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಬಗ್ಗೆ ನಿರ್ಧಾರ ಕೈಗೊಂಡಿದೆ.

ಸರ್ಕಾರ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದು ಈ ನಿರ್ಧಾರ ಕೈಗೊಂಡಿದ್ದರೂ, ಸರ್ಕಾರ ಹಾಗೂ ಡಿಕೆ ಶಿವಕುಮಾರ್ ಮುಂದಿನ ಹಾದಿ ಸುಲಭವಾಗೇನೂ ಇಲ್ಲ. 2020 ರಲ್ಲೇ ಸಿಬಿಐ ತನಿಖೆ ಆರಂಭಿಸಿದ್ದು, ತನಿಖೆ ಇದೀಗ ಮುಕ್ತಾಯ ಹಾದಿಯಲ್ಲಿದೆ. ಈ ಹಂತದಲ್ಲಿ ರಾಜ್ಯ ಸರ್ಕಾರ ಸಮ್ಮತಿ ಹಿಂಪಡೆದಿರುವ ಕ್ರಮ ದೋಷಪೂರಿತವೆಂದು ವಾದಿಸಲು ಸಿಬಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಸಮ್ಮತಿ ಹಿಂಪಡೆಯುವ ರಾಜ್ಯ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಸಿಬಿಐ ಕಾಯುತ್ತಿದೆ.

ಸಿಬಿಐ ನಿಲುವಿಗೆ ಪೂರಕವಾಗಿ ಸುಪ್ರೀಂಕೋರ್ಟ್ ತೀರ್ಪು ಕೂಡಾ ಇದ್ದು, ಇದನ್ನೇ ಅಸ್ತ್ರವಾಗಿ ಬಳಸಲು ಸಿಬಿಐ ಚಿಂತನೆ ನಡೆಸುತ್ತಿದೆ. ಸಿಬಿಐ ಅಲ್ಲದೇ ಯಾವುದೇ ವ್ಯಕ್ತಿ ಸರ್ಕಾರದ ಆದೇಶ ಪ್ರಶ್ನಿಸಿ ಪಿಐಎಲ್ ದಾಖಲಿಸಲೂ ಅವಕಾಶವಿದೆ.

ಸುಪ್ರೀಂಕೋರ್ಟ್ ಹೇಳಿದ್ದೇನು?

ಸಿಬಿಐ ತನಿಖೆಗೆ ನೀಡಿದ ಅನುಮತಿ ಪೂರ್ವಾನ್ವಯವಾಗಿ ಹಿಂಪಡೆಯಲು ಸಾಧ್ಯವಿಲ್ಲ

1994 ರಲ್ಲೇ ಈ ಬಗ್ಗೆ ತೀರ್ಪು ನೀಡಿರುವ ಸುಪ್ರೀಂಕೋರ್ಟ್

ಕಾಜಿ ಲೆಂಡಪ್ ದೊರ್ಜಿ ವರ್ಸಸ್ ಸಿಬಿಐ ಪ್ರಕರಣದಲ್ಲಿ ತೀರ್ಪು

1979 ರಿಂದ 1984 ರವರೆಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿದ್ದ ನರ ಬಹದೂರ್ ಭಂಡಾರಿ

1984 ರಲ್ಲಿ ಸಿಬಿಐ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ ದಾಖಲಿಸಿತ್ತು

ಸರ್ಕಾರದ ಪೂರ್ವಾನುಮತಿ ಪಡೆದು ಸಿಬಿಐ ಕೇಸ್ ದಾಖಲಿಸಿತ್ತು

1985 ರಲ್ಲಿ ಮತ್ತೆ ಭಂಡಾರಿ ಸಿಎಂ ಆದ ನಂತರ ಅನುಮತಿ ವಾಪಸ್

ಇದನ್ನು ಪ್ರಶ್ನಿಸಿ ಮಾಜಿ ಸಿಎಂ ಕಾಜಿ ಲೆಂಡಪ್ ದೊರ್ಜಿ ಕೋರ್ಟ್ ಮೊರೆ
ಒಮ್ಮೆ ಕೊಟ್ಟ ಅನುಮತಿ

ಹಿಂಪಡೆಯಲು ಕಾಯ್ದೆಯಲ್ಲಿ ಅವಕಾಶವಿಲ್ಲವೆಂದು ತೀರ್ಪು

ಅನುಮತಿಯನ್ನು ಪೂರ್ವಾನ್ವಯವಾಗಿ ಹಿಂಪಡೆಯಲು ಸಾಧ್ಯವಿಲ್ಲವೆಂದ ಸುಪ್ರೀಂಕೋರ್ಟ್

ಸದ್ಯ ಸಿಬಿಐ ಈ ತೀರ್ಪನ್ನು ಡಿಕೆ ಶಿವಕುಮಾರ್ ಪ್ರಕರಣಕ್ಕೂ ಅನ್ವಯಿಸಿ ವಾದಮಂಡಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಶಿವಕುಮಾರ್ ಕೂಡಾ ಈ ಪ್ರಕರಣದ ಕಾನೂನು ಕುಣಿಕೆಯಿಂದ ಪಾರಾಗಲು ಸರ್ವಸಿದ್ಧತೆ ನಡೆಸಿದ್ದಾರೆ.

- Advertisement -spot_img

More articles

- Advertisement -spot_img

Latest article