No menu items!
23.4 C
Munich
Saturday, May 2, 2026

ತಲೆ ಕೆಟ್ಟವರು ಕಾಂಗ್ರೆಸ್ ಗೆ ಹೋಗ್ತಾರೆ ಅಷ್ಟೇ: ಶಾಸಕ ಬೈರತಿ ಬಸವರಾಜ್ ವ್ಯಂಗ್ಯ

Must read

ತಲೆ ಕೆಟ್ಟವರು ಕಾಂಗ್ರೆಸ್ ಗೆ ಹೋಗ್ತಾರೆ ಅಷ್ಟೇ: ಶಾಸಕ ಬೈರತಿ ಬಸವರಾಜ್ ವ್ಯಂಗ್ಯ

 

ಬಳ್ಳಾರಿ:-ತಲೆ ಕೆಟ್ಟವರು ಕಾಂಗ್ರೆಸ್ ಗೆ ಹೋಗ್ತಾರೆ ಅಷ್ಟೇ ಎಂದು ಹೇಳುವ ಮೂಲಕ ಶಾಸಕ ಬೈರತಿ ಬಸವರಾಜ್ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ST ಸೋಮಶೇಖರ್ ಹೇಳಿಕೆ ವಿಚಾರ‌ವಾಗಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬೈರತಿ ಬಸವರಾಜ್, ST‌ ಸೋಮಶೇಖರ್ ತಮ್ಮ ಬೆಳೆ ಬೇಯಿಸಿಕೊಳ್ಳೋಕೆ ಹಿಂಗೆಲ್ಲಾ ಮಾತನಾಡುತ್ತಾರೆ. ಅಷ್ಟಕ್ಕೂ ಪಕ್ಷ ಸೇರುವವರ ಹೆಸರು ಗೊತ್ತಿದ್ರೆ ಬಹಿರಂಗವಾಗಿ ಹೇಳಲಿ. ಏಳು – ಎಂಟು ಶಾಸಕರು ಹೋಗುತ್ತಾರೆ ಅಂತಾ ಹೇಳೋದಲ್ಲ. ನಾನೇಕೆ ಕಾಂಗ್ರೆಸ್‌ಗೆ ಹೋಗಲಿ. ನನ್ನ ತೆಲೆ ಕೆಟ್ಟಿದೆಯಾ. ಸೋಮಶೇಖರ್ ಕಾಂಗ್ರೆಸ್ ಪಕ್ಷದ ಮನವೊಲಿಕೆಗೆ ಹೀಗೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ.

ಈ ಮೂಲಕ ಕಾಂಗ್ರೆಸ್ ಸೇರ್ಪಡೆಯ ವದಂತಿಗೆ ತೆರೆ ಎಳೆದಿದ್ದಾರೆ.

- Advertisement -spot_img

More articles

- Advertisement -spot_img

Latest article