No menu items!
12.1 C
Munich
Wednesday, May 20, 2026

ತೆಲುಗು ಚಿತ್ರರಂಗದ ಚುನಾವಣೆಯಲ್ಲಿ ಸೋತ ಪ್ರಕಾಶ್ ರೈ!

Must read

ತೆಲುಗು ಸಿನಿಮಾ ರಂಗದ ಕಲಾವಿದರ ಸಂಘ ಮಾ (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಚುನಾವಣೆಯ ಫಲಿತಾಂಶ ಹೊರಗೆ ಬಿದ್ದಿದ್ದು, ಮಂಚು ವಿಷ್ಣು ವಿರುದ್ಧ ಪ್ರಕಾಶ್ ರೈ ಸೋಲುಂಡಿದ್ದಾರೆ.

ಮಾ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಂಚು ವಿಷ್ಣು ಹಾಗೂ ಪ್ರಕಾಶ್ ರಾಜ್ ಸ್ಪರ್ಧಿಸಿದ್ದು ಮಂಚು ವಿಷ್ಣು ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮಂಚು ವಿಷ್ಣು ಸುಮಾರು 400 ಮತಗಳ ಅಂತರದಲ್ಲಿ ಪ್ರಕಾಶ್ ರೈ ಅವರನ್ನು ಸೋಲಿಸಿದ್ದಾರೆ.

ಸಿಂಡಿಕೇಟ್ ಮಾದರಿಯಲ್ಲಿ ಚುನಾವಣೆ ನಡೆದಿದ್ದು, ಮಂಚು ವಿಷ್ಣು ಸಿಂಡಿಕೇಟ್‌ನಿಂದ ಸ್ಪರ್ಧಿಸಿದ್ದವರಿಗೆ ಹೆಚ್ಚು ಮಂದಿಗೆ ಗೆಲುವು ದೊರಕಿದೆ. ಆದರೆ ಉಪಾಧ್ಯಕ್ಷ ಸ್ಥಾನವನ್ನು ಪ್ರಕಾಶ್ ರೈ ಸಿಂಡಿಕೇಟ್‌ನಿಂದ ಸ್ಪರ್ಧಿಸಿದ್ದ ಶ್ರೀಕಾಂತ್‌ ಗೆದ್ದುಕೊಂಡಿದ್ದಾರೆ. ಪ್ರಕಾಶ್ ರೈ ಪ್ಯಾನಲ್‌ನಿಂದ ಸ್ಪರ್ಧಿಸಿದ್ದ ಜೀವಿತಾ ರಾಜಶೇಖರ್ ಸೋತಿದ್ದಾರೆ. ಜೀವಿತಾ ವಿರುದ್ಧ ರಘುಬಾಬು ಗೆಲುವು ಸಾಧಿಸಿದ್ದಾರೆ. ಬ್ಯಾನರ್ಜಿ ವಿರುದ್ಧ ಮದ್ದಾಲ ರವಿ ಗೆಲುವು ಸಾಧಿಸಿದ್ದಾರೆ. ಮಂಚು ವಿಷ್ಣು ಪ್ಯಾನೆಲ್‌ನ 11 ಮಂದಿ ಗೆಲುವು ಸಾಧಿಸಿದ್ದು ಮಾ ಗದ್ದುಗೆ ಮಂಚು ವಿಷ್ಣುಗೆ ಪ್ಯಾನೆಲ್‌ಗೆ ದೊರಕುವುದು ಖಾತ್ರಿಯಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article