ಥೀಯೇಟರ್ ನಲ್ಲಿ ಉಳಿಸಿಕೊಂಡಿದ್ದ ಮಾನ ಟಿವಿ ಲಿ ಮನೆ ಮನೆಲಿ ಹೊಯ್ತು

0
48

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅಭಿನಯದ ಪೊಗರು ಸಿನಿಮಾ ಅದ್ದೂರಿ ಪ್ರದರ್ಶನ ನೀಡುತ್ತಿತ್ತು ಅದೇ ಸಮಯದಲ್ಲಿ ಒಂದು ದೊಡ್ಡ ವಿವಾದಕ್ಕೆ ಸುದ್ದಿಯಾಯ್ತು ಬ್ರಾಹ್ಮಣ ಸಮುದಾಯಕ್ಕೆ ಪೊಗರು ಚಿತ್ರದಿಂದ ಅವಮಾನ ಆಗಿದೆ ಎಂದು ರಾಜ್ಯದ ಬ್ರಾಹ್ಮಣ ಸಂಘಟನೆಗಳು ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ದರು ಅದಾದ ನಂತರ ಚಿತ್ರದ ನಿರ್ದೇಶಕ ನಂದಕಿಶೋರ್ ಅವರು ಬ್ರಾಹ್ಮಣ ಸಮುದಾಯಕ್ಕೆ ಕ್ಷಮೆ ಯಾಚಿಸಿ ಆ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವ ಯಾವ ದೃಶ್ಯದಿಂದ ಬೇಸರವಾಗಿದೆ ಆ ದೃಶ್ಯವನ್ನು ಚಿತ್ರದಿಂದ ತೆಗೆದು ನಂತರ ಪ್ರದರ್ಶನಕ್ಕೆ ಕೊಡುತ್ತೇವೆ ಎಂದು ಮಾಧ್ಯಮದವರ ಮುಂದೆ ಹಾಗೂ ಚಿತ್ರರಂಗದ ಹಿರಿಯರ ಸಮ್ಮುಖದಲ್ಲಿ ನಿರ್ದೇಶಕ ನಂದಕಿಶೋರ್ ಹೇಳಿಕೆ ನೀಡಿದ್ದರು, ಅದಾದ ನಂತರ ಚಿತ್ರ ಅದ್ದೂರಿಯಾಗಿ ಪ್ರದರ್ಶನಗೊಳ್ಳುತ್ತಿತು ಇದೇಲ್ಲಾ ವಿವಾದ ಮರೆಯಾಗುವ ಮುನ್ನವೇ ಇಂದು ಯುಗಾದಿ ಹಬ್ಬದ ಪ್ರಯುಕ್ತ ಇಂದು ಪೊಗರು ಚಿತ್ರ ಖಾಸಗಿ ವಾಹಿನಿ ಆದ ಉದಯ ಚಾನೆಲ್ ನಲ್ಲಿ ಪ್ರಸಾರವಾಯ್ತು ಆದರೆ ಇದರಲ್ಲಿ ಉದಯ ವಾಹಿನಿ ಅವರ ತಪ್ಪೋ ಅಥವಾ ಚಿತ್ರ ನಿರ್ದೇಶಕ ನಿರ್ಮಾಪಕರ ತಪ್ಪೋ ತಿಳಿಯುತ್ತಿಲ್ಲ ಯಾಕೆಂದರೆ ಚಿತ್ರದಲ್ಲಿ ಇನ್ನು ಕೆಲವು ದೃಶ್ಯಗಳು ಬ್ರಾಹ್ಮಣ ಸಮುದಾಯಕ್ಕೆ ಮುಜುಗರವಾಗುವಂತ ದೃಶ್ಯಗಳು ಹಾಗೆ ಪ್ರಸಾರ ಗೊಂಡಿದ್ದು ಅದನ್ನು ಮೊದಲೇ ಗಮನಿಸಿ ಅಂತ ದೃಶ್ಯಗಳನ್ನು ಹೊರತುಪಡಿಸಿ ವಾಹಿನಿಯಲ್ಲಿ ಪ್ರದರ್ಶಿಸಬೇಕಿತ್ತು ಎಂದು ಚಿತ್ರ ನೋಡುತ್ತಿದಾಗ ಅನ್ಸಿತ್ತು ಯಾಕೆಂದ್ರೆ ಚಿತ್ರಮಂದಿರಕ್ಕೆ ಚಿತ್ರಪ್ರೇಮಿಗಳು ಮಾತ್ರ ಬಂದು ನೋಡುತ್ತಿದ್ರು ಆದ್ರೆ ಈಗ ಎಲ್ಲರ ಮನೆಯಲ್ಲಿ ಟಿವಿ ಇದ್ದೆ ಇರತ್ತೆ ಆದ್ರೆ ಚಿತ್ರಮಂದಿರದಲ್ಲಿ ಹೋಗಬಾರದು ಎಂದು ಕೊಂಡಿದ್ದ ಮುಜುಗರ ಆಗುವಂತ ದೃಶ್ಯಗಳು ಮನೆ ಮನೆಗೆ ಇಂದು ತಲುಪಿದೆ ಇದಕ್ಕೆ ಯಾರು ಹೊಣೆ ಒಂದು ಸಮುದಾಯಕ್ಕೆ ಅವಮಾನ ಮಾಡುವಂತ ದೃಶ್ಯಗಳನ್ನು ಚಿತ್ರೀಕರಿಸುವ ಮುನ್ನ ಕೆಲವೊಂದು ಸೂಕ್ಷ್ಮಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರೀಕರಿಸಬೇಕು ಯಾವುದೇ ಸಮುದಾಯಕ್ಕು ಅವಮಾನ ಮಾಡಬಾರದು ಎಂದು ಕೋರುತ್ತೇವೆ.

LEAVE A REPLY

Please enter your comment!
Please enter your name here