ನಾನು ನಿರ್ಣಾಯಕ ಹಂತದಲ್ಲಿ ಈತನನ್ನು ನಂಬುತ್ತೇನೆ : ಕೆಎಲ್ ರಾಹುಲ್

1
43

 

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಾಲ್ಕನೇ ಪಂದ್ಯ ಸೋಮವಾರ ( ಏಪ್ರಿಲ್ 12 ) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ನಡೆಯಿತು. ಈ ತಂಡಗಳ ನಡುವಿನ ರೋಚಕ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ 4 ರನ್‌ಗಳ ಗೆಲುವನ್ನು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. 222 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಯಿತು. ಸಂಜು ಸ್ಯಾಮ್ಸನ್ ಶತಕದ ಏಕಾಂಗಿ ಹೋರಾಟ ನಡೆಸಿದರೂ ಸಹ ಕೊನೆಯ ಎಸೆತದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲು ಕಂಡಿತು. ರೋಚಕ ಹಣಾಹಣಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ 4 ರನ್‌ಗಳ ಜಯ ಸಾಧಿಸಿದ ನಂತರ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಅವರು ಮಾತನಾಡಿದರು.

 

ಪಂದ್ಯವನ್ನುದ್ದೇಶಿಸಿ ಮಾತನಾಡಿದ ಕೆಎಲ್ ರಾಹುಲ್ ನಿರ್ಣಾಯಕ ಸಂದರ್ಭದಲ್ಲಿ ತಾವು ಯಾವ ಬೌಲರ್‌ನ್ನು ಹೆಚ್ಚಾಗಿ ನಂಬುತ್ತಾರೆ ಎಂಬುದನ್ನು ತಿಳಿಸಿದ್ದಾರೆ. ನಿರ್ಣಾಯಕ ಓವರ್ ಮಾಡಬೇಕಾದಂತಹ ಸಂದರ್ಭದಲ್ಲಿ ಕೆಎಲ್ ರಾಹುಲ್ ಅವರು ಯಾವಾಗಲೂ ಮೊದಲ ಆದ್ಯತೆ ನೀಡುವ ಬೌಲರ್ ಅರ್ಷ್‌ದೀಪ್ ಸಿಂಗ್ ಎಂದು ತಿಳಿಸಿದ್ದಾರೆ. ನಿರ್ಣಾಯಕ ಓವರ್ ಮಾಡಬೇಕಾದಂತಹ ಸಂದರ್ಭದಲ್ಲಿ ನಾನು ಅರ್ಷ್‌ದೀಪ್ ಸಿಂಗ್ ಗೆ ಬೌಲಿಂಗ್ ಮಾಡುವ ಅವಕಾಶ ನೀಡುತ್ತೇನೆ ಆತನಿಗೂ ಸಹ ಒತ್ತಡದಲ್ಲಿ ಬೌಲಿಂಗ್ ಮಾಡುವುದು ಇಷ್ಟ ಹೀಗಾಗಿ ಈ ನಿರ್ಧಾರ ಕೆ ಎಲ್ ರಾಹುಲ್ ತಿಳಿಸಿದರು.

ಸೋಮವಾರ ( ಏಪ್ರಿಲ್ 12 ) ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಅರ್ಷ್‌ದೀಪ್ ಸಿಂಗ್ ರಾಜಸ್ಥಾನ್ ರಾಯಲ್ಸ್ ತಂಡದ ಪರ 3 ಪ್ರಮುಖ ವಿಕೆಟ್‍ಗಳನ್ನು ಪಡೆದುಕೊಂಡರು. ಮನನ್ ವೊಹ್ರಾ, ಶಿವಂ ದುಬೆ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಪಡೆಯುವ ಮೂಲಕ ಅರ್ಷ್‌ದೀಪ್ ಸಿಂಗ್ ಮಿಂಚಿದರು. ಕೆಎಲ್ ರಾಹುಲ್ ಪಂದ್ಯ ಮುಗಿದ ನಂತರ ಹೇಳಿದಂತೆಯೇ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಕೊನೆಯ ಓವರ್ ಯಾರು ಮಾಡಬೇಕು ಎಂಬ ನಿರ್ಣಾಯಕ ಸಂದರ್ಭ ಬಂದಾಗ ರಾಹುಲ್ ಬಾಲನ್ನು ಅರ್ಷ್‌ದೀಪ್ ಸಿಂಗ್ ಕಡೆ ಎಸೆದಿದ್ದರು. ಕೊನೆಯ ಓವರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಗೆಲ್ಲಲು 13 ರನ್ ಬೇಕಿತ್ತು , ಸ್ಫೋಟಕ ಆಟವಾಡಿದ್ದ ಸಂಜು ಸ್ಯಾಮ್ಸನ್ ಇನ್ನೂ ಮೈದಾನದಲ್ಲಿಯೇ ಇದ್ದರು. ಇಷ್ಟೆಲ್ಲಾ ಅತಿಯಾದ ಒತ್ತಡದ ನಡುವೆಯೂ ಬೌಲಿಂಗ್ ಮಾಡಿದ ಅರ್ಷ್‌ದೀಪ್ ಸಿಂಗ್ ಕೊನೆಯ ಓವರ್‌ನಲ್ಲಿ ಕೇವಲ 8 ರನ್ ನೀಡುವುದರ ಜೊತೆ ಸಂಜು ಸ್ಯಾಮ್ಸನ್ ಅವರ ವಿಕೆಟ್ ಪಡೆದು ಪಂಜಾಬ್ ಕಿಂಗ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

 

1 COMMENT

LEAVE A REPLY

Please enter your comment!
Please enter your name here