No menu items!
13.9 C
Munich
Wednesday, April 29, 2026

ಧ್ರುವ ಸರ್ಜಾಗೆ ತೆಲುಗಿನ ದೊಡ್ಡ ನಿರ್ದೇಶಕ ಆಕ್ಷನ್ ಕಟ್!

Must read

ಧ್ರುವ ಸರ್ಜಾ ಅವರ ಪೊಗರು ಚಿತ್ರ ಇತ್ತೀಚೆಗೆ ಬಿಡುಗಡೆಗೊಂಡು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. 3 ವರ್ಷ ತಡಮಾಡಿ ಬಂದ ಪೊಗರು ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡದ್ದು ಅಷ್ಟಕ್ಕಷ್ಟೆ. ಇದೀಗ ಪೊಗರು ಚಿತ್ರದ ನಂತರ ನಂದಕಿಶೋರ್ ಅವರ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಧ್ರುವ ಸರ್ಜಾ ಅವರು ಅಭಿನಯಿಸಲಿದ್ದು ದುಬಾರಿ ಎಂದು ಟೈಟಲ್ ಇಡಲಾಗಿದೆ.

 

 

ಈ ದುಬಾರಿ ಚಿತ್ರ ಮುಗಿದ ನಂತರ ಧ್ರುವ ಸರ್ಜಾ ಅವರು ತೆಲುಗಿನ ದೊಡ್ಡ ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನ ಅನೇಕ ದೊಡ್ಡ ನಟರುಗಳಿಗೆ ಸಿನಿಮಾ ನಿರ್ದೇಶನ ಮಾಡಿರುವ ಪೂರಿ ಜಗನ್ನಾಥ್ ಅವರ ನಿರ್ದೇಶನದ ಅಡಿಯಲ್ಲಿ ಧ್ರುವ ಸರ್ಜಾ ಅವರು ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

 

 

 

ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೊದಲನೆಯ ಸಿನಿಮಾ ಅಪ್ಪು ಚಿತ್ರವನ್ನು ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದರು..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article