No menu items!
2.7 C
Munich
Friday, May 1, 2026

ನಗರದಲ್ಲಿ ಬೆಂಕಿ ಅವಘಡ: ಕೋಟ್ಯಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

Must read

ಬೆಂಗಳೂರು: ನಗರದ ಗಾಯತ್ರಿ ಅಸೋಸಿಯೇಟ್ ಗೋದಾಮಿನಲ್ಲಿ ಬೆಳಗ್ಗಿನ ಜಾವ 4 ಗಂಟೆಗೆ ಬೆಂಕಿ ಅವಘಡ ಸಂಭವಿಸಿದೆ.ಬೈರತಿ ಬಳಿಯ ದೊಡ್ಡ ಗುಬ್ಬಿ ಬಳಿ ಘಟನೆ ಜರುಗಿದೆ. ಗೋಡೌನ್ ನಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿ ಆಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಪಾಯವಾಗಿಲ್ಲ. 8 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ದೌಡಾಯಿಸಿದ್ದು, ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಡಿ ಮಾರ್ಟ್ ಸೇರಿ ಪ್ರತಿಷ್ಟಿತ ಸೂಪರ್ ಮಾರ್ಕೆಟ್ ಗಳಿಗೆ ಸಾಗಿಸುವ ಸಾಮಾಗ್ರಿಗಳನ್ನು ಸಂಗ್ರಹಿಸುವ ಗೋದಾಮು ಎನ್ನಲಾಗಿದೆ.

- Advertisement -spot_img

More articles

- Advertisement -spot_img

Latest article