No menu items!
13.9 C
Munich
Wednesday, April 29, 2026

ನಟಸಾರ್ವಭೌಮ ನಟಿಯ ಲಿಪ್ ಲಾಕ್ ವೈರಲ್! ಎಲ್ಲಾ ದುಡ್ಡಿಗಾಗಿ ಎಂದ ಜನ!

Must read

ಪುನೀತ್ ರಾಜ್ ಕುಮಾರ್ ಚಿತ್ರಗಳಲ್ಲಿ ಅನ್ಯ ಭಾಷೆಯ ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಪುನೀತ್ ಹೆಸರು ಕೇಳಿದ ಕೂಡಲೇ ಕನ್ನಡ ಚಿತ್ರಗಳಿಗೆ ಎಸ್ ಎನ್ನುತ್ತಿದ್ದ ನಟಿಯರು ಪುನೀತ್ ಜೊತೆ ಅಭಿನಯಿಸಿದ ನಂತರ ಮತ್ತೆ ಯಾವುದೇ ಕನ್ನಡ ಚಿತ್ರಕ್ಕೂ ಕೂಡ ಹೆಚ್ಚಾಗಿ ಗ್ರೀನ್ ಸಿಗ್ನಲ್ ನೀಡಿದ ಉದಾಹರಣೆಗಳು ಇಲ್ಲ.

 

ಬಿಂದಾಸ್ ಬೆಡಗಿ ಹಂಸಿಕಾ, ವೀರ ಕನ್ನಡಿಗನ ಜೋಡಿ ಅನಿತಾ, ನಿನ್ನಿಂದಲೇ ನಟಿ ಎರಿಕಾ ಫರ್ನಾಂಡಿಸ್, ಪವರ್ ತ್ರಿಶಾ, ರಣವಿಕ್ರಮನ ಆದಾ ಶರ್ಮಾ, ನಟಸಾರ್ವಭೌಮನ ಅನುಪಮಾ ಪರಮೇಶ್ವರನ್ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾದ ಯುವರತ್ನ ಚಿತ್ರದ ಸಾಯೇಷಾ.. ಹೀಗೆ ಹಲವಾರು ಮಂದಿ ಪುನೀತ್ ಚಿತ್ರದಲ್ಲಿ ಕನ್ನಡದಲ್ಲಿ ಅಭಿನಯಿಸಿ ಬೇರೆ ಕನ್ನಡ ಚಿತ್ರಗಳನ್ನು ಮಾಡದೇ ತಮ್ಮ ಚಿತ್ರರಂಗಗಳಿಗೆ ವಾಪಸ್ ಆಗಿದ್ದಾರೆ.

ಹೀಗೆ ಪುನೀತ್ ರಾಜ್ ಕುಮಾರ್ ಚಿತ್ರಕ್ಕೋಸ್ಕರ ಚಂದನವನಕ್ಕೆ ಬಂದ ನಟಿಯರ ಪೈಕಿ ನಟಸಾರ್ವಭೌಮ ಚಿತ್ರದ ಅನುಪಮಾ ಪರಮೇಶ್ವರನ್ ಸದ್ಯ ಮಲಯಾಳಂ ಹಾಗೂ ತೆಲುಗು ಚಿತ್ರರಂಗದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮೂಲತಃ ಮಲಯಾಳಂ ನಟಿಯಾಗಿರುವ ಅನುಪಮಾ ಪರಮೇಶ್ವರನ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ.

 

ಹೆಚ್ಚಾಗಿ ಮೈಮಾಟ ತೋರಿಸಲು ಇಚ್ಛೆ ಪಡದಂತಹ ನಟಿ ಅನುಪಮ ಪರಮೇಶ್ವರನ್. ಹೌದು, ನಟಿ ಅನುಪಮಾ ಪರಮೇಶ್ವರನ್ ಇಲ್ಲಿಯವರೆಗೂ ಅಭಿನಯಿಸಿರುವ ಯಾವುದೇ ಚಿತ್ರದಲ್ಲಿಯೂ ಕೂಡ ಹಸಿಬಿಸಿಯಾಗಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿಯೇ ಅನುಪಮಾ ಪರಮೇಶ್ವರನ್ ಕುರಿತು ಎಲ್ಲಾ ಚಿತ್ರರಂಗದ ಅಭಿಮಾನಿಗಳಲ್ಲಿಯೂ ಕೂಡ ಇತರೆ ನಟಿಯರಿಗೂ ಮೀರಿದ ಉತ್ತಮ ಮನೋಭಾವವಿತ್ತು.

ಆದರೆ ಇದೇ ಮೊದಲ ಬಾರಿಗೆ ಅನುಪಮಾ ಪರಮೇಶ್ವರನ್ ಲಿಪ್ ಲಾಕ್ ದೃಶ್ಯವೊಂದರಲ್ಲಿ ಅಭಿನಯಿಸಿರುವುದು ಆಶ್ಚರ್ಯವನ್ನು ಮೂಡಿಸಿದೆ. ಬಿಡುಗಡೆಗೆ ಸಿದ್ಧವಾಗಿರುವ ತೆಲುಗಿನ ರೌಡಿ ಬಾಯ್ಸ್ ಎಂಬ ಚಿತ್ರದಲ್ಲಿ ನಟಿ ಅನುಪಮಾ ಪರಮೇಶ್ವರನ್ ಚಿತ್ರದ ನಾಯಕ ಆಶೀಶ್ ಜೊತೆ ಲಿಪ್ ಲಾಕ್ ದೃಶ್ಯವೊಂದರಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟ್ರೈಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು ಅನುಪಮಾ ಪರಮೇಶ್ವರನ್ ಲಿಪ್ ಲಾಕ್ ದೃಶ್ಯವನ್ನು ಈ ಟ್ರೈಲರ್ ನಲ್ಲಿ ತೋರಿಸಲಾಗಿದೆ.

ಅನುಪಮಾ ಪರಮೇಶ್ವರನ್ ಅವರ ಈ ದೃಶ್ಯವನ್ನು ನೋಡಿದ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಇಂತಹ ದೃಶ್ಯದಲ್ಲಿ ಯಾಕಾದ್ರೂ ಅಭಿನಯಿಸಿದ್ರು ಎಂದು ಬೇಸರ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಸಾಮಾನ್ಯ ಸಿನಿಪ್ರೇಕ್ಷಕ ಹೆಚ್ಚು ಸಂಭಾವನೆ ಕೊಟ್ಟದ್ದರ ಫಲಿತಾಂಶವಿದು ಎಂದು ಅನುಪಮಾ ಪರಮೇಶ್ವರನ್ ಅವರ ಕಾಲನ್ನು ಎಳೆದಿದ್ದಾರೆ.


 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article