No menu items!
10.9 C
Munich
Sunday, September 27, 2026

ನಾಯಂಡಹಳ್ಳಿ ಫ್ಲೈ ಓವರ್ ಮೇಲಿಂದ ಕೆಳಗೆ ಜಿಗಿದು ಯುವಕ ಆತ್ಮಹತ್ಯೆ

Must read

ಬೆಂಗಳೂರು:- ನಗರದ ನಾಯಂಡಹಳ್ಳಿ ಫ್ಲೈ ಓವರ್ ಮೇಲಿಂದ ಕೆಳಗೆ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ನವೀನ್ (32) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.


ಕೆಪಿಟಿಸಿಎಲ್ನಲ್ಲಿ ಕೆಲಸ ಮಾಡುತ್ತಿದ್ದ ನವೀನ್, ನಿನ್ನೆ ಮನೆಯಿಂದ ಹೊರ ಬಂದಿದ್ದ. ಇಂದು ಬೆಳಗ್ಗೆ ತನ್ನ ಸ್ಕೂಟರ್ ಅನ್ನು ನಾಯಂಡಹಳ್ಳಿ ಮೇಲ್ಸೇತುವೆ ಮೇಲೆ ನಿಲ್ಲಿಸಿದ್ದಾನೆ. ಬಳಿಕ ಮೇಲ್ಸೇತುವೆ ಮೇಲಿನಿಂದ ಜಿಗಿದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -spot_img

More articles

- Advertisement -spot_img

Latest article