ಯಡಿಯೂರಪ್ಪ ಅವರು ಸಿದ್ದು ವಿರುದ್ಧ ಕಿಡಿಕಾರಿದ್ದಾರೆ ಅಧಿಕಾರ ಕಳೆದುಕೊಂಡು ಹತಾಶರಾಗಿರುವ ನೀವು ಮನಬಂದಂತೆ ಮಾತನಾಡುತ್ತಿದ್ದೀರಾ. ಇಂತಹ ಅಪಪ್ರಚಾರ ಮಾಡುವ ಬದಲು ಉಪಚುನಾವಣೆಯ ಅಖಾಡಕ್ಕೆ ಬನ್ನಿ. ನಿಮ್ಮ ಯೋಗ್ಯತೆ ಏನೆಂಬುದು ಗೊತ್ತಾಗುತ್ತದೆ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದರು.ಸಿದ್ದರಾಮಯ್ಯ ಇತ್ತೀಚೆಗೆ ಪ್ರಚಾರಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ನಿಮ್ಮ ನಾಯಕತ್ವದಲ್ಲೇ ಲೋಕಸಭೆ ಚುನಾವಣೆ ನಡೆಯಿತು. ನಿಮ್ಮ ಯೋಗ್ಯತೆಗೆ ಒಂದು ಸ್ಥಾನ ಗೆದ್ದಿದ್ದೀರ. ನೀವು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ನಿಮ್ಮಂಥವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಹೇಗೆ ಮಾಡಿತೋ ಗೊತ್ತಿಲ್ಲ. ಎಂದು ಹೇಳಿ ಕಾಂಗ್ರೆಸ್‌ಗೆ ಕೊನೆ ಮೊಳೆ ಹೊಡೆಯುವುದು ನೀವೇ ಎಂದು ವ್ಯಂಗ್ಯವಾಡಿದರು.