No menu items!
10.9 C
Munich
Sunday, September 27, 2026

ಪಿಜಿಯಲ್ಲಿ ನೇಣಿಗೆ ಕೊರಳೊಡ್ಡಿದ ಯುವಕ: ಕಾರಣ ನಿಗೂಢ!

Must read

 

ಬೆಂಗಳೂರು:- ಆತ ಬೆಂಗಳೂರಿಗೆ ಓದಲು ಬಂದಿದ್ದ ಜಮ್ಮುಕಾಶ್ಮೀರ ಮೂಲದ ವಿದ್ಯಾರ್ಥಿ. ಚೆನ್ನಾಗಿ ಓದಿ ಏನಾದ್ರೂ ಸಾಧಿಸಬೇಕು ಎಂಬ ಛಲ ತೊಟ್ಟಿದ್ದ. ಆದರೆ ಇದ್ದಕ್ಕಿದ್ದಂತೆ ಏನ್ ಆಯ್ತೋ ಏನೋ ಗೊತ್ತಿಲ್ಲ ನೇಣಿಗೆ ಶರಣಾಗಿದ್ದಾನೆ. ಅಷ್ಟಕ್ಕೂ ಈ ಸ್ಟೋರಿ ನಡೆದಿದ್ದೆಲ್ಲಿ ಅಂತೀರಾ ತೋರಿಸ್ತೀವಿ ನೋಡಿ.

ಹೌದು ನನ್ನ ಸಾವಿಗೆ‌ ನಾನೆ ಕಾರಣ ಎಂದು ಬರೆದಿಟ್ಟು ಜಮ್ಮು ಕಾಶ್ಮೀರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ತನ್ವೀರ್ ಮೃತ ವಿದ್ಯಾರ್ಥಿ ಎನ್ನಲಾಗಿದೆ. ಪ್ರತಿಷ್ಠಿತ ರೇವಾ ಯೂನಿವರ್ಸಿಟಿಯಲ್ಲಿ ತನ್ವೀರ್ ಬಿಎಸ್ಸಿ ಮಾಡುತ್ತಿದ್ದ. ಬಿಎಸ್ಸಿ ಸೆಕೆಂಡ್ ಇಯರ್ ಓದುತ್ತಿದ್ದ. ಇಂದು ಇದ್ದಕ್ಕಿದ್ದಂತೆ ಪಿ.ಜಿ ಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಿ.ಜಿಯಲ್ಲಿನ ಕೆಲ‌ ವಿದ್ಯಾರ್ಥಿಗಳು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ರವಾನೆ ಮಾಡಿದ್ದಾರೆ.

ತನ್ವೀರ್ ನ ಪೋಷಕರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಕಶ್ಮೀರದಿಂದ ತನ್ವೀರ್ ಪೋಷಕರು ಬರುತ್ತಿದ್ದಾರೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article