No menu items!
5.3 C
Munich
Wednesday, September 23, 2026

ಪ್ರವಾಸಿಗರು ನೋಡಲೇಬೇಕಾದ ಸುದ್ದಿ: ಮಂಗಳೂರಿನ ಎಲ್ಲ ಬೀಚ್’ಗಳಿಗೆ ನಿರ್ಬಂಧ!

Must read

ಪ್ರವಾಸಿಗರು ನೋಡಲೇಬೇಕಾದ ಸುದ್ದಿ: ಮಂಗಳೂರಿನ ಎಲ್ಲ ಬೀಚ್’ಗಳಿಗೆ ನಿರ್ಬಂಧ!

ಮಂಗಳೂರು:- ನೀವೇನಾದರೂ ಮಂಗಳೂರು ಪ್ರವಾಸ ಕೈಗೊಂಡಿದ್ರೆ ಈ ಸುದ್ದಿ ಮಿಸ್ ಮಾಡ್ದೆ ನೋಡಿ. ಈ ಬಾರಿಯ ಮಾನ್ಸೂನ್ ಮಳೆಯ ಅಬ್ಬರ ಜೋರಾಗಿದೆ. ದೇಶಾದ್ಯಂತ ಮಳೆಯಾಗುತ್ತಿದ್ದು, ಅದರಂತೆ ಕರ್ನಾಟಕದಲ್ಲೂ ಭರ್ಜರಿ ಮಳೆ ಆಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ತುಸು ಬಿಡುವು ನೀಡಿದೆ. ಆದಾಗ್ಯೂ, ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ತಣ್ಣೀರು ಬಾವಿ ಸೇರಿದಂತೆ ಮಂಗಳೂರಿನ ಎಲ್ಲ ಬೀಚ್ಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಲೈಫ್ ಗಾರ್ಡ್ ಸಿಬ್ಬಂದಿ ಕೂಡ ಬೀಚ್ಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

- Advertisement -spot_img

More articles

- Advertisement -spot_img

Latest article