No menu items!
9.3 C
Munich
Sunday, May 3, 2026

ಫ್ರೆಂಚ್‌ ಬಿರಿಯಾನಿಗೆ ‘ಪವರ್’ ಮಸಾಲಾ… ಏನ್ ಮಾಡೋದು ಸ್ವಾಮಿ ಹಾಡಿಗೆ ಅಪ್ಪು ಅಭಿಮಾನಿಗಳು ಫಿದಾ

Must read

ಫ್ರೆಂಚ್ ‌ಬಿರಿಯಾನಿ. ಸದ್ಯ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ. ಪಿಆರ್​ಕೆ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಿರ್ಮಾಣದ ಫ್ರೆಂಚ್​ ಬಿರಿಯಾನಿ ಸಿನಿಮಾ ರಿಲೀಸ್​ಗೆ ಕ್ಷಣಗಣನೆ ಶುರುವಾಗಿದೆ. ಈ ಹೊತ್ತಲ್ಲೇ ಚಿತ್ರದ ಬೊಂಬಾಟ್​ ಸಾಂಗ್​ ರಿಲೀಸ್​ ಆಗಿದ್ದು, ಸಿನಿ ರಸಿಕರ ಮನಸೆಳೆಯುತ್ತಿದೆ. ಅದೂ ಸಹ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ವಾಯ್ಸ್​ನಲ್ಲಿ ಮೂಡಿಬಂದಿರುವ ಹಾಡು ಅಭಿಮಾನಿಗಳಿಗೆ ಕಿಕ್​ ಕೊಡುತ್ತದೆ.

ಏನ್ ಮಾಡೋದು ಸ್ವಾಮಿ ಅನ್ನೋ ಸಾಂಗ್‌ನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದು, ಸಖತ್ ಹಿಟ್ ಆಗಿದೆ. ನರಕಕ್ ಇಳ್ಸಿ.. ನಾಲ್ಗೆ ಸೀಳ್ಸಿ.. ಬಾಯ್ ಹೊಲಿಸಾಕಿದ್ರೂನೆ.. ಮೂಗ್ನಲ್ ಕನ್ನಡ್ ಪದವಾಡ್ತೀನಿ, ಅನ್ನೋ ಜಿ.ಪಿ ರಾಜರತ್ನಂ ಅವರ ಸಾಲುಗಳನ್ನು ಬಳಸಿಕೊಂಡು ಈ ಹಾಡನ್ನ ರಚಿಸಲಾಗಿದ್ದು, ಪುನೀತ್‌ ದನಿಯಲ್ಲಿ ಈ ಹಾಡು ಸಖತ್ ಮಜಾಕೊಡುತ್ತೆ.

ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್​​ ಸಂಗೀತದ ಜೊತೆ ಅಭಿಷೇಕ್​ ಜೊತೆ ಸೇರಿ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಜಿ. ಪಿ ರಾಜರತ್ನಂ ಅವರ ಸಾಲುಗಳ ಜೊತೆಗೆ ಒಂದಷ್ಟು ಹೊಸ ಸಾಲುಗಳನ್ನ ಸೇರಿಸಿ ಹಾಡನ್ನ ಕಟ್ಟಿಕೊಡಲಾಗಿದೆ. ಬಾರಿನಲ್ಲಿ ಶೂಟ್​ ಮಾಡಿರೋ ಹಾಡಿನಲ್ಲಿ ಕುಡುಕರ ಫಿಲಾಸಫಿಯೂ ಇದೆ. ಪಿಆರ್​ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಈ‌ ಹಾಡು ರಿಲೀಸ್ ಆಗಿದ್ದು, ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.ಇನ್ನೂ, ಇದಕ್ಕೂ ಮುನ್ನ ಫ್ರೆಂಚ್ ಬಿರಿಯಾನಿ ಸಿನಿಮಾ ತಂಡವೂ “ದಿ ಬೆಂಗಳೂರು” ಸಾಂಗ್ ಬಿಡುಗಡೆ‌ ಮಾಡಿತ್ತು.‌ ಈ ಹಾಡಿಗೆ ಅವಿನಾಶ್ ಬಲೆಕ್ಕಳ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದರು. ‌ಯುವಗಾಯಕಿ ಅದಿತಿ ಸಾಗರ್ ಈ ಹಾಡನ್ನು ಹಾಡಿದ್ದು, ಪಿಆರ್​ಕೆ ಯುಟ್ಯೂಬ್ ಚಾನಲ್ ನಲ್ಲಿ ಹಾಡು ಬಿಡುಗಡೆಯಾಗಿತ್ತು.

ಫ್ರೆಂಚ್​ ಬಿರಿಯಾನಿ ಸಿನಿಮಾವನ್ನ ನಿರ್ದೇಶನ ಮಾಡಿರುವ ನಿರ್ದೇಶಕ ಪನ್ನಗಾಭರಣ ಬಣ್ಣ ಹಚ್ಚಿ ಹಾಡಿಗೆ ಹೆಜ್ಜೆ ಹಾಕಿರೋದು ವಿಶೇಷ. ಪುನೀತ್​ ರಾಜ್​ ಕುಮಾರ್ ವಾಯ್ಸ್​ನಲ್ಲಿ ಹಾಡು ಸಖತ್​ ಮಜವಾಗಿದ್ದು, ಸಿನಿಮಾ ನೋಡುವ ಕುತೂಹಲ ಹೆಚ್ಚಿಸುವಂತಿದೆ. ಡ್ಯಾನಿಶ್​ ಸೇಠ್​ ಮತ್ತು ಸಾಲ್ ಯೂಸುಫ್​ ಫ್ರೆಂಚ್​ ಬಿರಿಯಾನಿ ಚಿತ್ರದ ಲೀಡ್​ ರೋಲ್​ಗಳಲ್ಲಿ ನಟಿಸಿದ್ದಾರೆ. ‌ಇದರ ಜೊತೆಗೆ ಹಿರಿಯ ನಟ ರಂಗಾಯಣ ರಘು ಸಹ ಮುಖ್ಯಭೂಮಿಕೆಯಲ್ಲಿದ್ದು, ನೋಡುಗರಿಗೆ ಕಾಮಿಡಿ ಕಿಕ್ ಕೊಡಲಿದ್ದಾರೆ.

ಈ‌ ಹಿಂದೆ ಮೊದಲ ಬಾರಿಗೆ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಚಿತ್ರ ಬಿಡುಗಡೆ ಮಾಡಿ ಸಕ್ಸಸ್ ಕಂಡಿದ್ದ ಪುನೀತ್ ಇದೀಗ ಮತ್ತೊಂದು ಪ್ರಯತ್ನಕ್ಕೆ ‌ಕೈ ಹಾಕಿದ್ದಾರೆ. ಈ ಹಿಂದೆ ಲಾ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಮಾಡಿದ್ದು, ಫ್ರೆಂಚ್ ಬಿರಿಯಾನಿ ಸಿನಿಮಾವನ್ನು ಸಹ ಒಟಿಟಿ ಪ್ಲಾಟ್ ಫಾರ್ಮ್ ನಲ್ಲೇ ರಿಲೀಸ್ ಮಾಡುತ್ತಿದ್ದಾರೆ. ಇದೇ ಜು.೨೪ಕ್ಕೆ ಸಿನಿಮಾ ಬಿಡುಗಡೆ ಆಗಲಿದ್ದು, ಅದಕ್ಕೂ ಮುನ್ನವೇ ಹಾಡುಗಳು ಹಿಟ್ ಪಡೆದಿರೋದು ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article