No menu items!
13.2 C
Munich
Saturday, May 30, 2026

ಹನಿ ಟ್ರ್ಯಾಪ್ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ: ಸಚಿವ ಜಿ. ಪರಮೇಶ್ವರ್

Must read

ಹನಿ ಟ್ರ್ಯಾಪ್ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ: ಸಚಿವ ಜಿ. ಪರಮೇಶ್ವರ್

ಬೆಂಗಳೂರು: ಹನಿ ಟ್ರ್ಯಾಪ್ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹನಿ ಟ್ರ್ಯಾಪ್ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಇಷ್ಟು ದೊಡ್ಡ ಆರೋಪ ಬಂದಿದೆ, ಗಂಭೀರವಾಗಿ ತಗೊಳ್ಳಲೇಬೇಕಲ್ಲ. ರಾಜಣ್ಣ ಅವರು ಇಷ್ಟೊತ್ತಿಗೆ ದೂರು ಕೊಟ್ಟಿದ್ದರೆ ಯಾವ ಸ್ವರೂಪದ ತನಿಖೆ ಅಂತ ಘೋಷಣೆ ಮಾಡ್ತಿದ್ದೆವು ಎಂದು ತಿಳಿಸಿದ್ದಾರೆ.
ಇನ್ನೂ ಸಿಬಿಐ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ ಎಂಬ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ನಾವು ನಮ್ಮದೇ ರೀತಿಯಲ್ಲಿ ಪರಿಶೀಲಿಸಿ ನಿರ್ಧಾರ ಮಾಡ್ತೇವೆ. ಇಷ್ಟು ದೊಡ್ಡ ಘಟನೆ ನಡೆದಿದೆ, ವಿಧಾನಸೌಧದಲ್ಲಿ ಚರ್ಚೆ ಆಗಿದೆ. ನಡೆಯದಿರೋದೆಲ್ಲ ನಡೆದಿದೆ, ಅಂಥದ್ರಲ್ಲಿ ಗಂಭೀರವಾಗಿ ತಗೊಳ್ಳಲಿಲ್ಲ ಅಂದ್ರೆ ಆಗಲ್ಲ ಎಂದಿದ್ದಾರೆ.

- Advertisement -spot_img

More articles

- Advertisement -spot_img

Latest article