No menu items!
33.8 C
Munich
Saturday, August 15, 2026

ಬೆಂಗಳೂರು ಪಿಜಿಗಳು ನೋಡಲೇಬೇಕಾದ ಸ್ಟೋರಿ: ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ಲೈಸೆನ್ಸ್!

Must read

 

ಬೆಂಗಳೂರು :- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸಿಲಿಕಾನ್ ಸಿಟಿಯಲ್ಲಿರುವ ಪಿಜಿಗಳಿಗೆ ಬಿಗ್ ಶಾಕ್ ನೀಡಿದೆ.

ಹೌದು, ಸೆಪ್ಟೆಂಬರ್ 15ರೊಳಗೆ ಗೈಡ್ ಲೈನ್ ಅಳವಡಿಸದಿದ್ರೆ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗಷ್ಟೆ ಪಿಜಿಗಳಿಗೆ ಪಾಲಿಕೆ ಗೈಡ್ ಲೈನ್ ಬಿಡುಗಡೆ ಮಾಡಿತ್ತು. ಗೈಡ್ ಲೈನ್ಸ್ ಅಳವಡಿಕೆಗೆ ಸೆಪ್ಟೆಂಬರ್ 15ರ ಗಡುವು ನೀಡಲಾಗಿತ್ತು.

ಗಡುವು ಮೀರಿದ್ರೆ ಅನಧಿಕೃತ ಅಂತಾ ಪರಿಗಣಿಸಿ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಅನಧಿಕೃತ ಪಿಜಿಗಳ ಮಾಹಿತಿಯನ್ನೂ ಪಾಲಿಕೆ ಕಲೆಹಾಕ್ತಿದೆ.

ಇನ್ನೂ ಪಾಲಿಕೆಯಲ್ಲಿ ಈವರೆಗೆ 2 ಸಾವಿರ ಪಿಜಿಗಳಿಗೆ ಮಾತ್ರ ಲೈಸೆನ್ಸ್ ವಿತರಣೆ ಮಾಡಲಾಗಿದ್ದು, ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳ ಕಾರ್ಯಾಚರಣೆ ಮಾಡಲಾಗಿದೆ.

ಅನಧಿಕೃತ ಪಿಜಿಗಳಿಗೆ ಬಿಸಿಮುಟ್ಟಿಸೋದಕ್ಕೂ ಪಾಲಿಕೆ ಪ್ಲಾನ್ ಮಾಡಿಕೊಂಡಿದ್ದು, ಸೆಪ್ಟೆಂಬರ್ 15ರೊಳಗೆ ಲೈಸೆನ್ಸ್ ಪಡೆಯಲು ತಾಕೀತು ಮಾಡಲಾಗಿದೆ.

ಇಲ್ಲಾ ಅಂದ್ರೆ ಪಿಜಿಗಳನ್ನ ಬಂದ್‌ ಮಾಡುವ ಎಚ್ಚರಿಕೆಯನ್ನು ಬಿಬಿಎಂಪಿ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article