No menu items!
24 C
Munich
Monday, May 4, 2026

ಮಗಳ ಪ್ರಿಯಕರನನ್ನು ರಾಡ್ ನಿಂದ ಹೊಡೆದು ಕೊಂದ ತಂದೆ..!

Must read

ಬೆಂಗಳೂರು: ನಗರದ ಅಶೋಕನಗರ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್ ಬಳಿ ಮಗಳ ಪ್ರಿಯಕರನನ್ನು ತಂದೆಯೇ ಕೊಂದು ಹಾಕಿರುವ ಘಟನೆ ನಡೆದಿದೆ. ಡೇವಿಡ್ ಕೊಲೆಯಾದ ಯುವಕ. ಯವತಿ ತಂದೆ ಮಂಜುನಾಥ್ ಎಂಬಾತನಿಂದ ಕೃತ್ಯ. ಆಟೋ ಡ್ರೈವರ್ ಆಗಿದ್ದ ಡೇವಿಡ್, ಮಂಜುನಾಥ್ ಎಂಬಾತನ ಮಗಳನ್ನ ಪ್ರೀತಿಸ್ತಿದ್ದ. ಮದುವೆ ಮಾಡಿಕೊಡುವಂತೆ ಪದೇಪದೆ ಪೀಡಿಸುತ್ತಿದ್ದ. ಮದುವೆಗೆ ನಿರಾಕರಿಸಿದರೆ ನಿಮ್ಮ ಮಗಳೊಂದಿಗಿನ ಫೋಟೋಗಳನ್ನ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.


ಫೋಟೋ ಮತ್ತು ವಿಡಿಯೋ ಇದೆ ಅಂತ ಹೆದರಿಸ್ತಿದ್ದ. ಇದರಿಂದ ಮಗಳ ಮರ್ಯಾದೆ ಹಾಳಾಗುತ್ತೆ ಎಂಬ ನಿರ್ಧಾರಕ್ಕೆ ಬಂದ ತಂದೆ ಮಾತನಾಡುವ ನೆಪದಲ್ಲಿ ಡೇವಿಡ್ನನ್ನು ಕರೆದು ರಾಡ್ನಿಂದ ಹೊಡೆದು, ಚಾಕುವಿನಿಂದ ಇರಿದಿದ್ದಾನೆ. ನಂತರ ಹಾಲೋಬ್ರಿಕ್ಸ್ ಕಲ್ಲುಎತ್ತಿಹಾಕಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಮಂಜುನಾಥ್ನನ್ನು ಅಶೋಕ ನಗರ ಪೊಲೀಸರು ವಶಕ್ಕೆ ಪಡೆಡಿದ್ದಾರೆ.

- Advertisement -spot_img

More articles

- Advertisement -spot_img

Latest article