No menu items!
13.9 C
Munich
Wednesday, April 29, 2026

ಮದುವೆಯಾದ್ರು ಮಿಸ್ಟರ್ ನ್ಯಾಗ್ಸ್! ಹುಡುಗಿ ಯಾರು ಗೊತ್ತಾ?

Must read

ಐಪಿಎಲ್ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟು ಪರಿಚಿತವೋ ಅಷ್ಟೇ ದಾನೀಶ್ ಸೇಠ್ ಕೂಡ ಪರಿಚಿತರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಷ್ಟೇ ದಾನೀಶ್ ಸೇಠ್ ಕೂಡ ಅಭಿಮಾನಿ ವರ್ಗವನ್ನು ಹೊಂದಿದ್ದು ಸಾಮಾಜಿಕ ಜಾಲತಾಣಗಳಲ್ಲಂತೂ ಮಿಸ್ಟರ್ ನ್ಯಾಗ್ಸ್ ಎಂದೇ ಖ್ಯಾತಿಯನ್ನು ಪಡೆದಿದ್ದಾರೆ.


ಇಷ್ಟು ದಿನಗಳ ಕಾಲ ಒಂಟಿ ಜೀವನವನ್ನು ಸಾಗಿಸುತ್ತಿದ್ದ ಮಿಸ್ಟರ್ ನ್ಯಾಗ್ಸ್ ದಾನೀಶ್ ಸೇಠ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತಮ್ಮ ಹಲವು ವರ್ಷಗಳ ಗೆಳತಿ ಅನ್ಯ ರಂಗಸ್ವಾಮಿಯನ್ನು ವಿವಾಹವಾಗಿದ್ದಾರೆ. ಬೆಂಗಳೂರು ಮೂಲದ ದಾನೀಶ್ ಸೇಠ್ ಮದುವೆಯಾಗಿರುವ ಅನ್ಯ ರಂಗಸ್ವಾಮಿ ಕೂಡ ಬೆಂಗಳೂರಿನ ಯುವತಿಯೇ ಆಗಿದ್ದು ಮುಂಬೈನಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.


ಕಳೆದ ವರ್ಷದ ಡಿಸೆಂಬರ್ ಸಮಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಬುಧವಾರದಂದು ನೋಂದಣಿ ವಿವಾಹವಾಗಿದ್ದಾರೆ. ಕೊರೊನಾ ಲಾಕ್‌ಡೌನ್ ಇರುವ ಕಾರಣ ಕುಟುಂಬಕ್ಕೆ ಹತ್ತಿರವಿರುವ 15 ಜನರ ಸಮ್ಮುಖದಲ್ಲಿ ದಾನೀಶ್ ಸೇಠ್ ಮತ್ತು ಅನ್ಯ ರಂಗಸ್ವಾಮಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಷಯವನ್ನು ದಾನೀಶ್ ಸೇಠ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ದಂಪತಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article