ಯಾರ ಅನುದಾನವೂ ಇಲ್ಲದೆ ಅಂಧರಿಗೆ ಬೆಳಕಾದ ಜ್ಯೋತಿ..!

0
115

1991ರಲ್ಲಿ ಪ್ರಾರಂಭಿಸಿದ ಜ್ಯೋತಿ ಸೇವಾ ಸ್ಕೂಲ್ ಎನ್ನುವ ಶಾಲೆ ಬೆಂಗಳೂರಿನ ಪ್ರಧಾನ ಶಾಖೆಯೂ ವೆಂಕಟೇಶಪುರದಲ್ಲಿದೆ. ಸಂಸ್ಥೆಯ ಫ್ರಾನ್ಸಿಸ್ಕನ್ ಸಿಸ್ಟರ್ ಸರ್ವೆಂಟ್ ಆಫ್ ದಿ ಕ್ರಾಸ್ ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು ಯಾರ ಹಂಗಿಲ್ಲದೆ ಸಂಫೂರ್ಣವಾಗಿ ಉಚಿತ ಶಿಕ್ಷಣ ನೀಡುತ್ತಿದ್ದು, ಈ ಶಿಕ್ಷಣ ಸಂಸ್ಥೆ ಹಲವಾರು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನವಾಗಿದೆ.

ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಓರಿಸ್ಸಾ, ತಮಿಳುನಾಡು, ಛತ್ತಿಸಗಡ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಅಂಧ ವಿದ್ಯಾರ್ಥಿಗಳು ಬರುತ್ತಿದ್ದಾರೆ ಅದಕಾರಣ ವಿದ್ಯಾರ್ಥಿಗಳು ಸಂಖ್ಯೆ ಹೆಚ್ಚುತ್ತಿದ್ದು, ಈಗ ಶಾಲೆ ನಡೆಸಲು ಆರ್ಥಿಕ ತೊಂದರೆ ಎದುರಾಗುತ್ತಿದೆ. ಆದಕಾರಣ, ಸರ್ಕಾರದ ಅನುಧಾನ ಮತ್ತು ನಾಗರಿಕರ ಸಹಕಾರ ಬೇಕಿದೆ.


ಜ್ಯೋತಿ ಸೇವಾ ಶಾಲೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಫ್ರಾನ್ಸಿಸ್ಕನ್ ಸಿಸ್ಟಿರ್ ಸರ್ವೆಂಟ್ ಅಪ್ ದ ಕ್ರಾಸ್ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರು ಶಾಲೆಯ ಸಾಧನೆಯ ಕುರಿತು ಅವರು, ಅಂಧರ ಶಿಕ್ಷಣ ಮತ್ತು ಸರ್ವಾಂಗೀಣ ಅಭಿವೃದ್ಧಿಯನ್ನು ತನ್ನ ಗುರಿಯಾಗಿಸಿಕೊಂಡಿದೆ. ಸಂಸ್ಥೆಯನ್ನು 1991ರಲ್ಲಿ ಸ್ಥಾಪಿತವಾಯಿತು. ಅಂದಿನಿಂದ ಇಂದಿನವರೆಗೆ ಸಂಸ್ಥೆಯ ಅಂಧರ ಸರ್ವಾಂಗೀಣ ಅಭಿವೃದ್ಧಿಗೆ ತನ್ನನ್ನು ಸಮರ್ಪಿಸಿಕೊಂಡಿದೆ. ಇದರಿಂದ ಅನೇಕ ಕುಟುಂಬಗಳ ಯೋಚನೆಯನ್ನು ದೂರಗೊಳಿಸಿದೆ. ಅಂಧರು ಈಗ ಉತ್ತಮ ಸ್ಥಾನಮಾನಗಳಿಂದ ಬಾಳಬಹುದೆಂದು ತೋರಿಸಿಕೊಡುವ ಪ್ರಯತ್ನ ಸಫಲವಾಗಿದೆ.

ಸುಮಾರು 15 ವರ್ಷಗಳಿಂದ ನಿರಂತರ ಸೇವೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರವು 2016ನೇ ಸಾಲನ ಅಂಗವಿಕಲರ ಸಂಸ್ಥೆಗಳಿಗೆ ನೀಡುವ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಈ ಪ್ರಶಸ್ತಿಯು ತಮ್ಮ ಸೇವೆಯನ್ನು ವಿಸ್ತರಿಸಲು ಸ್ಪೂರ್ತಿ ನೀಡಿದೆ. ಸದ್ಯ 200ರಷ್ಟು ಅಂಧ ಮಕ್ಕಳು ಈ ಶಾಲೆಯಿಂದ ತಮ್ಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ. ಹಾಗೆಯೇ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಒಡೆದಿದ್ದಾರೆ. ಮತ್ತೆ ಕೆಲವರು ಅದೇ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ ಇದೆಲ್ಲವೂ ಆ ಶಾಲೆಯಿಂದ ಶಿಕ್ಷಣದಿಂದ ಸಾಧ್ಯವಾಗಿದೆ.


ಅಷ್ಟೇ ಅಲ್ಲದೆ, ಅಂಧ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗದೆ ಇರಲು ದಿನನಿತ್ಯದ ಕೌಶಲ್ಯ, ದೈಹಿಕ ಶಿಕ್ಷಣ ಹಾಗೂ ಚಲನವಲನ ತರಬೇತಿಗಳನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳು, ನೈತಿಕ ಶಿಕ್ಷಣ ನೈತಿಕ ಬೆಳವಣಿಗೆಯನ್ನು ನೀಡಲಾಗುತ್ತಿದೆ. ಇನ್ನು ಅಷ್ಟೇ ಅಲ್ಲ, ವಿವಿಧ ಧರ್ಮ ಗ್ರಂಥಗಳ ಸಾರವನ್ನು ಪರಿಚಯಿಸಲಾಗುತ್ತಿದೆ. ದಿನನಿತ್ಯದ ಪ್ರಾರ್ಥನೆಯ ಬಳಿಕ ಧರ್ಮಗ್ರಂಥಗಳ ಸಾರವನ್ನು ಪರಿಚಯಿಸಲಾಗುತ್ತಿದೆ.
ಒಟ್ಟಾರೆಯಾಗಿ ಅಂಧ ಮಕ್ಕಳ ಶಿಕ್ಷಣದ ಜವಾಬ್ದಾರಿ ಈ ಶಾಲೆಯದು ಮಾತ್ರವಲ್ಲ; ಮನುಷ್ಯರಾಗಿ ಹುಟ್ಟಿದ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ಶಾಲೆಯೀಗ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ.

LEAVE A REPLY

Please enter your comment!
Please enter your name here