ಪೆಟ್ರೋಲ್ ಬಂಕ್‍ನಲ್ಲಿ ಇವೆಲ್ಲ ಇರಲೇ ಬೇಕು…! ಇಲ್ದಿದ್ರೆ ಡೀಲರ್ಸ್ ಗಳಿಗೆ ಏನ್ ಶಿಕ್ಷೆ…?

1
871

ಗ್ರಾಹಕರಿಗಾಗಿ ತೈಲಕಂಪನಿಗಳ ಮಾರ್ಗಸೂಚಿಗಳು

ಸಾರ್ವಜನಿಕ ವಲಯದಲ್ಲಿ ಪ್ರಮುಖ ಸೇವೆ ಸಲ್ಲಿಸುವ ತೈಲ ಮಾರಾಟ ಕಂಪನಿಗಳು, ಪೆಟ್ರೋಲ್ ಬಂಕ್‍ಗಳು ಕೆಲವೊಂದು ಮಾರ್ಕೆಟಿಂಗ್ ಡಿಸಿಪ್ಲೀನ್ ಅಥವಾ ಶಿಸ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕು. ಗ್ರಾಹಕರಿಗೆ ಕೆಲವೊಂದು ಸೇವೆ ಸೌಲಭ್ಯಗಳನ್ನು ಒದಗಿಸಬೇಕಾಗುತ್ತೆ! ತೈಲ ಮಾರಾಟಕಂಪನಿಗಳು ತಮಗೆ ಸಂಬಂಧಿಸಿದ ಪೆಟ್ರೋಲ್ ಬಂಕ್‍ಗಳಲ್ಲಿ ಕೆಲವೊಂದು ನಿಯಮಗಳನ್ನು ಫಾಲೋ ಮಾಡ್ಬೇಕು. ಈ ಶಿಸ್ತನ್ನು ಕಡ್ಡಾಯವಾಗಿ ಕಾಪಾಡಿಕೊಂಡು ಬರಲೇ ಬೇಕು. ಅಂತಹ ಮಾರ್ಗಸೂಚಿಗಳು ಯಾವುವು, ಈ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಡೀಲರ್ಸ್ ಯಾವೆಲ್ಲಾ ಶಿಕ್ಷೆಗೆ ಒಳಗಾಗುತ್ತಾನೆ ಎನ್ನುವುದರ ಡೀಟೇಲ್ಸ್ ಇಲ್ಲಿದೆ.

ಪೆಟ್ರೋಲ್ ಬಂಕ್ ಡೀಲರ್ಸ್‍ಗಳು ಒದಗಿಸಲೇ ಬೇಕಾದ ಸೇವೆ ಮತ್ತು ಸೌಲಭ್ಯಗಳು

 

1) ಸರಿಯಾದ ಬೆಲೆ, ಪ್ರಮಾಣದಲ್ಲಿ ಸಮರ್ಪಕವಾದ ಉತ್ಪನ್ನವನ್ನು ಖಚಿತಪಡಿಸಿಕೊಂಡು ಒದಗಿಸುವುದು

2) ಔಟ್‍ಲೆಟ್ ಲ್ಲಿ ಸರಿಯಾದ ಗಾಳಿ ವ್ಯವಸ್ಥೆಯನ್ನು ಮಾಡುವುದು.

3) ಎಲ್ಲಾ ಸಂದರ್ಭದಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸುವುದು ಮತ್ತು ವಿನಯಶೀಲ ವರ್ತನೆ ತೋರುವುದು

4) ಸಲಹೆ ಅಥವಾ ದೂರು ನೀಡುವ ಪುಸ್ತಕವೊಂದನ್ನು ಗ್ರಾಹಕರಿಗೆ ಎಟಕುವಂತಿಡಬೇಕು.

5) ದಿನದ ಬಿಡುವಿನ ಸಮಯ,ಕೆಲಸದ ಸಮಯ ಎಷ್ಟುಗಂಟೆಯಿಂದ ಎಷ್ಟುಗಂಟೆವರೆಗೆ, ರಜಾದಿನಗಳ ಪ್ರಕಟಣೆಗಳನ್ನು ಸರಿಯಾಗಿ ಕಾಣುವಂತೆ ಪ್ರದರ್ಶಿಸುವುದು

6) ಆವರಣದಲ್ಲಿ ಸುಸಜ್ಜಿತ, ಸ್ವಚ್ಛ ಶೌಚಾಲಯ ಲಭ್ಯವಿರಬೇಕು

7) ಆವರಣದಲ್ಲಿ ದೂರವಾಣಿ ಸೌಲಭ್ಯ ಸಾರ್ವಜನಿಕರಿಗಾಗಿ ಲಭ್ಯವಿರಬೇಕು

8) ತೈಲ ಕಜಂಪನಿಗಳಲ್ಲಿ ಗ್ರಾಹಕ ಸೇವೆ ಒದಗಿಸುವ, ದೂರು, ಸಲಹೆಗಳನ್ನು ಸ್ವೀಕರಿಸುವ ಕೆಲಸ ಮಾಡುವವ ವೈಯಕ್ತಿಕ ಸಂಪರ್ಕ ಹೆಸರು, ಸಂಖ್ಯೆಯನ್ನು ನೀಡಬೇಕು. ಗ್ರಾಹಕರ ಸಂಪರ್ಕಕ್ಕೆ ಇವರು ಸಿಗಬೇಕು.

9) ಕಾಲಕಾಲಕ್ಕೆ ತೈಲ ಕಂಪನಿಗಳು ಗ್ರಾಹಕರಿಗೆ ತಮ್ಮ ತಮ್ಮ ಕಂಪನಿಗಳಿಂದ ಸೇವಾ ಸಂದೇಶಗಳನ್ನು ಮೊಬೈಲ್‍ಗೆ ಕಳುಹಿಸಬೇಕು.

10) ಅಗತ್ಯ ಔಷಧಗಳನ್ನು ಹೊಂದಿರುವ ಪ್ರಥಮ ಚಿಕಿತ್ಸೆ ಪೆಟ್ಟಿಗೆಯೊಂದನ್ನು ಡೀಲರ್ಸ್ ಪಂಪ್‍ಗಳನ್ನು ತಪ್ಪದೇ ಇಟ್ಟಿರಬೇಕು.

11) ಔಟ್‍ಲೆಟ್ ಯಾವಾಗಲೂ ಶುಚಿ ಮತ್ತು ಒಳ್ಳೆಯ ಬೆಳಕು ಬೀಳುವಂತೆ ನೋಡಿಕೊಳ್ಳಬೇಕು, ನಿರ್ವಹಣೆ ಸರಿಯಾಗಿರಬೇಕು

 

ಶೌಚಾಲಯ ವ್ಯವಸ್ಥೆಯಲ್ಲಿ ಅನುಸರಿಸಬೇಕಾದ ಶಿಸ್ತುಗಳು :

1) ದಿನನಿತ್ಯ ಸ್ವಚ್ಛಗೊಳಿಸಬೇಕು

2) ಸೂಕ್ತ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು

3) ಫ್ಲಶ್ ಸಮರ್ಪವಾಗಿಕೆಲಸ ಮಾಡ್ತಾ ಇದೆಯಾ ಎಂಬುದನ್ನು ಪರೀಕ್ಷಿಸಬೇಕು.

4) ನೀರಿನ ಲಭ್ಯತೆ ಖಚಿತಪಡಿಸಿಕೊಳ್ಳಬೇಕು

5) ಬಾಗಿಲುಗಳು ಸರಿಯಾಗಿ ಇವೆಯೇ, ಲಾಕ್ ಸರಿಯಾಗಿದೆಯೇ ನೋಡಬೇಕು

 

ಸರಿ, ಆಯಾ ತೈಲಕಂಪನಿಗಳು ತಮ್ಮ ಪೆಟ್ರೋಲ್ ಬಂಕ್,ತಮಗೆ ಸಂಬಂಧಿಸಿದ ಸ್ಥಳಗಳಲ್ಲಿ ಈ ಎಲ್ಲಾ ಸೇವೆ, ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸಬೇಕೆಂಬ ಮಾರ್ಗಸೂಚಿಗಳೇ ಇವೆ. ಅಕಸ್ಮಾತ್, ಒಂದು ವೇಳೆ ಈ ಕಂಪನಿಗಳು ಈ ಸೇವೆಗಳನ್ನು ಒದಗಿಸದಿದ್ದರೆ ಏನಾಗುತ್ತೆ ಗೊತ್ತಾ?

ಮೊದಲ ಸಲ ಉಲ್ಲಂಘಿಸಿದಾಗ 15ದಿನಗಳ ಕಾಲ ಡೀಲರ್ಸ್‍ಗೆ ಮಾರಾಟ ಮತ್ತು ಸರಬರಾಜನ್ನು ತಡೆಹಿಡಿಯಲಾಗುತ್ತದೆ. ಮತ್ತೆ ಎರಡನೇ ಬಾರಿಯೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ 30ದಿನಗಳ ಕಾಲ ಮಾರಾಟ ಹಾಗೂ ಪೂರೈಕೆ ತಡೆಹಿಡಿಯಲಾಗುತ್ತದೆ. ಆಗಲೂ ಸರಿಪಡಿಸಿಕೊಳ್ಳದೇ ಮೂರನೇ ಬಾರಿಯೂ ಉಲ್ಲಂಘನೆ ಮಾಡಿದರೆ ಆ ಡೀಲರ್ಸ್‍ನ ಮಾರಾಟ ಹಕ್ಕು ಮುಗಿದಂತೆಯೇ! ಹಾಗೆಯೇ ಶೌಚಾಲಯ ನಿರ್ವಹಣೆ ಸಮರ್ಪಕವಾಗಿ ಇಲ್ಲದಿದ್ದರೆ ಮೊದಲ ಸಲ 10,0000 ರೂ ದಂಡ, 2ನೇ ಬಾರಿ 20,0000 3ನೇ ಬಾರಿ 25,000 ರೂ ನಾಲ್ಕನೇ ಬಾರಿ 30,000ರೂ ಅಥವಾ ಡೀಲರ್ಸ್ ಕಮಿಷನ್‍ನ ಶೇ.45ರಷ್ಟನ್ನು ದಂಡ ಕಟ್ಟಬೇಕು. ಗಾಳಿ, ದೂರವಾಣಿ, ಪ್ರಥಮಚಿಕಿತ್ಸೆ ಪೆಟ್ಟಿಗೆ ಮತ್ತಿತರ ಸೌಲಭ್ಯ ಇಲ್ಲದೇ ಇದ್ದಲ್ಲಿ ಫಸ್ಟ್‍ಟೈಮ್ ಪತ್ರಮುಖೇನ ಎಚ್ಚರಿಕೆ ನೀಡಲಾಗುತ್ತೆ. ನಂತರ 10,000ಸಾವಿರ ದಂಡ, ಆಗಲೂ ಸೇವೆ ಒದಗಿಸದಿದ್ದರೆ 25,000ರೂ ದಂಡ ವಿಧಿಸಲಾಗುತ್ತೆ!

ಸಾರ್ವಜನಿಕರು ಈ ಎಲ್ಲಾ ನಿಯಮಗಳನ್ನು ತಿಳಿದು, ಈ ಒದಗಿಸಬೇಕಾದ ಸೌಲಭ್ಯಗಳು ಇಲ್ಲದಿದ್ದರೆ ದೂರು ನೀಡಬಹದು! ಈ ಎಲ್ಲಾ ಸೇವೆಗಳನ್ನು ಒದಗಿಸುವುದು ಡೀಲರ್ಸ್ ಕರ್ತವ್ಯ, ಜವಬ್ದಾರಿ ಆಗಿರುತ್ತೆ!

 

1 COMMENT

LEAVE A REPLY

Please enter your comment!
Please enter your name here