No menu items!
26.4 C
Munich
Friday, August 7, 2026

ಯುವತಿಯ ಮೈಮುಟ್ಟಿ ಅಸಭ್ಯ ವರ್ತನೆ: ರಾಪಿಡೋ ಬೈಕ್ ಚಾಲಕ ಮೊಹಮ್ಮದ್ ಖಾಜಾ ಬಂಧನ

Must read

ಯುವತಿಯ ಮೈಮುಟ್ಟಿ ಅಸಭ್ಯ ವರ್ತನೆ: ರಾಪಿಡೋ ಬೈಕ್ ಚಾಲಕ ಮೊಹಮ್ಮದ್ ಖಾಜಾ ಬಂಧನ

ಬೆಂಗಳೂರು: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಮೊಹಮ್ಮದ್ ಖಾಜಾನನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.

ಯುವತಿ ಬಿಟಿಎಂ ಲೇಔಟ್‌ನಿಂದ ಇಂದಿರಾನಗರಕ್ಕೆ ತೆರಳಲು ರಾಪಿಡೋ ಸೇವೆ ಬುಕ್ ಮಾಡಿದ್ದರು. ಈ ವೇಳೆ ಪ್ರಯಾಣದ ಅವಧಿಯಲ್ಲಿ ಚಾಲಕ ಮೊಹಮ್ಮದ್ ಖಾಜಾ ದಾರಿಯುದ್ದಕ್ಕೂ ಅಸಭ್ಯವಾಗಿ ವರ್ತಿಸಿ, ಯುವತಿಯ ಮೈಮುಟ್ಟಿದನೆಂದು ಆರೋಪಿಸಲಾಗಿದೆ.

ಚಾಲಕನ ವರ್ತನೆಗೆ ಅಸಮಾಧಾನಗೊಂಡ ಯುವತಿ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರಿನ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article