No menu items!
9.3 C
Munich
Wednesday, April 29, 2026

ರಾಜಧಾನಿಯಲ್ಲಿ ರಿಯಲ್ ಸಿಂಗಂ ಘರ್ಜನೆ…!

Must read

ಬೆಂಗಳೂರಿನ ರೌಡಿಗಳಿಗೆ ಸಿಂಗಂ ಸಿನಿಮಾ ನೆನಪಿಗೆ ಬರ್ತಾ ಇದೆ. ಯಾಕಂದ್ರೆ, ಮೊನ್ನೆ ಮೊನ್ನೆಯಷ್ಟೇ ಸಿಸಿಬಿ ADGPಯಾಗಿ ಬೆಂಗಳೂರಿಗೆ ಆಗಮಿಸಿರೋ ಖಡಕ್​ ಐಪಿಎಸ್​ ಅಧಿಕಾರಿ ಅಲೋಕ್​ ಕುಮಾರ್​, ರೌಡಿಗಳ ಬೆವರಿಳಿಸುತ್ತಿದ್ದಾರೆ. ಪ್ರತಿ ದಿನ, ಪ್ರತಿ ಕ್ಷಣ, ರಾಜಧಾನಿಯ ಮೂಲೆ ಮೂಲೆಯಲ್ಲಿರೋ ರೌಡಿ ಲಿಸ್ಟ್​ನ್ನ ಸ್ಟಡಿ ಮಾಡುತ್ತಿದ್ದಾರೆ. ರೌಡಿಗಳ ಪರೆಡ್​ ನಡೆಸಿ ಖಡಕ್​ ವಾರ್ನಿಂಗ್​ನ್ನೂ ಕೊಡುತ್ತಿದ್ದಾರೆ.
ಮಂಗಳವಾರ ಅಲೋಕ್​ ಕುಮಾರ್​ ಅವರು ಬೆಂಗಳೂರಿನ 8 ವಿಭಾಗಗಳ ಠಾಣಾ ವ್ಯಾಪ್ತಿಯ ರೌಡಿಶೀಟರ್​ಗಳಿಗೆ ಬುಲಾವ್ ನೀಡಿದ್ದರು. ಅವರ ಒಂದೇ ಒಂದು ಎಚ್ಚರಿಕೆಗೆ ಕುಖ್ಯಾತ ರೌಡಿಗಳಾದ ಮುಲಾಮ, ವೇಲು, ರಾಮ-ಲಕ್ಷಣ, ರಾಬರಿ ಗಿರಿ, ವೆಂಕಿ ಸೇರಿಂದಂತೆ ದೊಡ್ಡ ದೊಡ್ಡ ರೌಡಿಗಳೆಲ್ಲಾ ಆಗಮಿಸಿದ್ದರು. ಆ ಎಲ್ಲಾ ರೌಡಿಗಳ ಬಗ್ಗೆ ಮಾಹಿತಿ ಪಡೆದ ಅಲೋಕ್​ ಕುಮಾರ್​, ಇನ್ಮುಂದೆ ಬಾಲ ಮುಚ್ಚಿಕೊಂಡು ಇರುವಂತೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಕಮಕ್​ ಕಿಮಕ್​ ಅಂದವರಿಗೆ ತಕ್ಕ ಶಾಸ್ತಿಯಾಗುತ್ತೆ ಎನ್ನುವ ವಾರ್ನಿಂಗ್​ ಮಾಡಿದ್ದಾರೆ.
ರೌಡಿಶೀಟರ್​ಗಳನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಡ್ರಿಲ್ ಮಾಡಿದ ಎಡಿಜಿಪಿ ಅಲೋಕ್​ ಕುಮಾರ್, ಚಿಕ್ಕ ವಯಸ್ಸಿನಲ್ಲೇ ರೌಡಿಶೀಟರ್​ ಪಡೆದ ಕೆಲವರನ್ನ ಮಾತನಾಡಿಸಿದರು. ಇಷ್ಟೊಂದು ಚಿಕ್ಕ ವಯಸ್ಸಿಗೆ ರೌಡಿಸಂ ಮಾಡಿದ್ದೇಕೆ ಎನ್ನುವ ಮಾಹಿತಿ ಪಡೆದು, ಇನ್ಮುಂದೆ ಬದಲಾಗುವಂತೆ ಸಲಹೆಯನ್ನೂ ನೀಡಿದರು. ಒಟ್ಟಾರೆ ಅಲೋಕ್​ ಕುಮಾರ್​ ಅವರು ಬೆಂಗಳೂರಿಗೆ ಆಗಮಿಸಿದ ದಿನದಿಂದ ರಾಜಧಾನಿಯ ಭೂಗತ ಲೋಕದ ದೊಡ್ಡವರಿಂದ ಸಣ್ಣ ಪುಟ್ಟ ರೌಡಿಗಳು ಕೂಡ ಸೈಲೆಂಟ್ ಆಗಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article