No menu items!
12.1 C
Munich
Saturday, May 2, 2026

ರಾಜ್ಯದಲ್ಲಿ ವಾಯು ಗುಣಮಟ್ಟ ಹದಗೆಟ್ಟು ಆತಂಕ: ಮಂಗಳೂರು AQI 190ಕ್ಕೆ ಏರಿಕೆ

Must read

ರಾಜ್ಯದಲ್ಲಿ ವಾಯು ಗುಣಮಟ್ಟ ಹದಗೆಟ್ಟು ಆತಂಕ: ಮಂಗಳೂರು AQI 190ಕ್ಕೆ ಏರಿಕೆ

ಬೆಂಗಳೂರು: ರಾಜ್ಯದಲ್ಲಿ ವಾಯು ಮಾಲಿನ್ಯ ಹೆಚ್ಚುತ್ತಿರುವುದು ಆತಂಕಕಾರಿ ಸ್ಥಿತಿಗೆ ತಲುಪಿದೆ. ಬೆಂಗಳೂರು ಸೇರಿದಂತೆ ಮಂಗಳೂರು, ಉಡುಪಿ, ಬೆಳಗಾವಿ ಸೇರಿದಂತೆ ಹಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಇಂದೂ ಹಲವು ನಗರಗಳಲ್ಲಿ ಕಳಪೆ ಮತ್ತು ಅನಾರೋಗ್ಯಕರ ಮಟ್ಟದ ಏರ್ ಕ್ವಾಲಿಟಿ ಇಂಡೆಕ್ಸ್ (AQI) ದಾಖಲಾಗಿದೆ.

ಕೆಲ ದಿನಗಳ ಹಿಂದೆ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರು ನಗರದ ವಾಯು ಗುಣಮಟ್ಟ ಇಂದು 156ಕ್ಕೆ ತಲುಪಿದೆ. ಇದು ‘ಅನಾರೋಗ್ಯಕರ’ ವಿಭಾಗಕ್ಕೆ ಸೇರಿದೆ. ಇದರಿಗಿಂತ ಹೆಚ್ಚಾಗಿ ಮಂಗಳೂರು ನಗರದಲ್ಲಿ AQI 190 ದಾಖಲಾಗಿದ್ದು, ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ.

ಇದಲ್ಲದೆ ಬಳ್ಳಾರಿ ನಗರದಲ್ಲಿ 168 AQI ದಾಖಲಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮಟ್ಟದಲ್ಲಿದೆ. ಕಳೆದ ಕೆಲವು ದಿನಗಳಿಗಿಂತ ಅಂಕೆಗಳಲ್ಲಿ ಸಣ್ಣ ಮಟ್ಟಿನ ಏರುಪೇರು ಕಂಡುಬಂದರೂ, World Health Organization (WHO) ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.

ರಾಜ್ಯದ ಪ್ರಮುಖ ನಗರಗಳ ಇಂದಿನ AQI

ಬೆಂಗಳೂರು – 156

ಮಂಗಳೂರು – 190

ಮೈಸೂರು – 158

ಬೆಳಗಾವಿ – 182

ಕಲಬುರ್ಗಿ – 144

ಶಿವಮೊಗ್ಗ – 181

ಬಳ್ಳಾರಿ – 168

ಹುಬ್ಬಳ್ಳಿ – 159

ಉಡುಪಿ – 181

ವಿಜಯಪುರ – 152

AQI ವರ್ಗೀಕರಣ ಹೇಗೆ?

ಉತ್ತಮ – 0-50

ಮಧ್ಯಮ – 51-100

ಕಳಪೆ – 101-150

ಅನಾರೋಗ್ಯಕರ – 151-200

ಗಂಭೀರ – 201-300

ಅಪಾಯಕಾರಿ – 301-500+

ತಜ್ಞರ ಪ್ರಕಾರ, AQI 150 ಮೀರಿದಾಗ ಮಕ್ಕಳಿಗೆ, ವೃದ್ಧರಿಗೆ ಮತ್ತು ಉಸಿರಾಟ ಸಂಬಂಧಿತ ಸಮಸ್ಯೆಗಳಿರುವವರಿಗೆ ವಿಶೇಷ ಜಾಗ್ರತೆ ಅಗತ್ಯ. ಅಗತ್ಯವಿದ್ದರೆ ಮಾಸ್ಕ್ ಧರಿಸುವುದು, ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಹೊರಗೆ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುವುದು ಮತ್ತು ಗಿಡಗಳನ್ನು ಹೆಚ್ಚಾಗಿ ನೆಡುವುದು ಮುಂತಾದ ಕ್ರಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.

- Advertisement -spot_img

More articles

- Advertisement -spot_img

Latest article