No menu items!
11.8 C
Munich
Friday, May 15, 2026

ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ!

Must read

ಬೆಂಗಳೂರು : ದಕ್ಷಿಣ ಭಾರತದಲ್ಲಿ ಮುಂಗಾರು ಚುರುಕಾಗಿದ್ದು, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ. ಎಚ್ಎಎಲ್ನಲ್ಲಿ 30.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ,ನಗರದಲ್ಲಿ 29.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 29.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಇನ್ನೂ ಬೆಳಗಾವಿ, ಧಾರವಾಡ, ಗದಗ,ಕೊಪ್ಪಳ, ರಾಯಚೂರು, ವಿಜಯಪುರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗ, ಹಾಸನ, ತುಮಕೂರು, ವಿಜಯಪುರ, ಮೈಸೂರು, ರಾಮನಗರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರಿನಲ್ಲೂ ಸಾಧಾರಣ ಮಳೆಯಾಗಲಿದೆ. ತಾಳಿಕೋಟೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಎಚ್ಡಿ ಕೋಟೆ, ಗೋಕಾಕ, ಬೈಲಹೊಂಗಲ, ಬಾದಾಮಿ, ಶಿವಮೊಗ್ಗ, ಆಗುಂಬೆ, ಮಂಕಿ, ಚಿಂತಾಮಣಿ, ನಾಯಕನಹಟ್ಟಿ,

ನರಗುಂದ, ಹುಣಸಗಿ, ಹೊನ್ನಾಳಿ, ಸಿದ್ದಾಪುರ, ಲೋಕಾಪುರ, ಆಲಮಟ್ಟಿ, ಹಿಡಕಲ್ ಅಣೆಕಟ್ಟು, ಬೇಗೂರು, ದೇವನಹಳ್ಳಿ, ಮಾಗಡಿ, ಹೊಸಕೋಟೆಯಲ್ಲಿ ಮಳೆಯಾಗಿದೆ. ಪರಶುರಾಂಪುರ, ಮೂರ್ನಾಡು, ಗುಂಡ್ಲುಪೇಟೆ, ಅಗ್ರಹಾರ, ಕೊಟ್ಟೂರು, ಕಿರವತ್ತಿ, ಹಾವೇರಿ, ನಿಪ್ಪಾಣಿ, ಬಾಗಲಕೋಟೆ, ಬೇವೂರು, ಕೋಲಾರ, ದೊಡ್ಡಬಳ್ಳಾಪುರ, ರಾಮನಗರ, ನಾರಾಯಣಪುರ, ಮಧುಗಿರಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಶ್ರೀರಂಗಪಟ್ಟಣ, ಮಸ್ಕಿ, ಮುಂಡಗೋಡು, ಕುಶಾಲನಗರ, ಕಮ್ಮರಡಿ, ಕಂಪ್ಲಿ, ಬೆಳ್ಳೂರು, ತಿಪಟೂರು, ಮದ್ದೂರು, ಲಿಂಗಸುಗೂರು, ಸಂಕೇಶ್ವರ, ಚಿಂಚೋಳಿ, ಕಮಲಾಪುರ, ಸೇಡಬಾಳ, ಮುನಿರಾಬಾದ್, , ಇಳಕಲ್, ಧಾರವಾಡ, ಕೆಂಭಾವಿಯಲ್ಲಿ ಮಳೆಯಾಗಿದೆ.

- Advertisement -spot_img

More articles

- Advertisement -spot_img

Latest article