No menu items!
9.3 C
Munich
Wednesday, April 29, 2026

ರಾಜ್ ಮೊಮ್ಮಗಳ ಸಿನಿಮಾಗೆ ರಿಲೀಸ್ ದಿನವೇ ಹಿನ್ನಡೆ

Must read

ಭಾರಿ ನಿರೀಕ್ಷೆಗಳೊಂದಿಗೆ ತೆರೆಗೆ ಬಂದ ‘ನಿನ್ನ ಸನಿಹಕೆ’ ಚಿತ್ರಕ್ಕೆ ಮೊದಲ ದಿನವೇ ವಿಘ್ನ ಎದುರಾಗಿದೆ. ಚಿತ್ರಮಂದಿರಗಳಿಗೆ 100% ಅನುಮತಿ ಸಿಕ್ಕ ಮೇಲೆ ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ತುಂಬಾ ದಿನದಿಂದ ಕಾದು ಕುಳಿತು ಈಗ ಸಂಭ್ರಮದಿಂದ ಸಿನಿಮಾ ರಿಲೀಸ್ ಮಾಡಿದ್ರೆ, ಮೊದಲ ಶೋನಲ್ಲೇ ಸಮಸ್ಯೆ ಎದುರಾಗಿದೆ.

 

ಸೂರಜ್ ಗೌಡ ಮತ್ತು ಧನ್ಯಾ ರಾಮ್ ಕುಮಾರ್ ನಟನೆಯ ‘ನಿನ್ನ ಸನಿಹಕೆ’ ಚಿತ್ರ ಇಂದು (ಅಕ್ಟೋಬರ್ 8) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಚಿತ್ರಮಂದಿರ ಈ ಚಿತ್ರಕ್ಕೆ ಪ್ರಮುಖ ಥಿಯೇಟರ್ ಆಗಿತ್ತು. ಆದ್ರೀಗ, ಸಂತೋಷ್ ಥಿಯೇಟರ್ ಬೆಳಗ್ಗಿನ ಪ್ರದರ್ಶನ ರದ್ದಾಗಿದೆ.

 

ತಾಂತ್ರಿಕ ದೋಷದಿಂದ ಸಂತೋಷ್ ಚಿತ್ರಮಂದಿರದಲ್ಲಿ ‘ನಿನ್ನ ಸನಿಹಕೆ’‌ ಚಿತ್ರದ ಶೋ‌ ಸ್ಥಗಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ, ಮಧ್ಯಾಹ್ನದ ಶೋ ವೀಕ್ಷಿಸಲು ಸಂತೋಷ್ ಥಿಯೇಟರ್‌ ಬಳಿ ನೆರೆದಿದ್ದ ಪ್ರೇಕ್ಷಕರು ನವರಂಗ್ ಚಿತ್ರಮಂದಿರದ ಕಡೆ ಹೆಜ್ಜೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

 

ಕಳೆದ ಮೂರು ದಿನದಿಂದಲೂ ಸಮಸ್ಯೆ ಇದ್ರೂ ಥಿಯೇಟರ್ ಮಾಲೀಕರಿಂದ ಚಿತ್ರತಂಡಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಚಿತ್ರತಂಡ ಅಲಂಕಾರ ಮಾಡಿಕೊಂಡು ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರೂ ಯಾವುದೇ ಮಾಹಿತಿ ನೀಡಿಲ್ಲ. ಕೊನೆ ಕ್ಷಣದಲ್ಲಿ ಪ್ರದರ್ಶನ ಸಾಧ್ಯವಿಲ್ಲ ಎಂದು ತಿಳಿಸಿರುವುದರಿಂದ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article