No menu items!
12.1 C
Munich
Wednesday, May 20, 2026

ರಾತ್ರೋರಾತ್ರಿ ಬುಲೆಟ್ ಪ್ರಕಾಶ್ ಮಗನಿಗೆ ಮಂಗಳಮುಖಿಯರಿಂದ ಬಿತ್ತು ಏಟು!

Must read

ಕನ್ನಡ ಚಲನಚಿತ್ರರಂಗದ ಖ್ಯಾತ ಹಾಸ್ಯ ನಟರಲ್ಲಿ ಒಬ್ಬರಾಗಿದ್ದ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ನಿನ್ನೆ ರಾತ್ರಿ ಜಿಮ್ ಮುಗಿಸಿಕೊಂಡು ಮನೆಗೆ ತೆರಳುತ್ತಿರುವ ವೇಳೆ ಮಂಗಳಮುಖಿಯರು ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಇದೀಗ ಬೆಳಕಿಗೆ ಬಂದಿದೆ.

ಹೌದು ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಜಿಮ್ ಮುಗಿಸಿಕೊಂಡು ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಅವರನ್ನು ಹೆಬ್ಬಾಳ ಫ್ಲೈ ಓವರ್ ಬಳಿ ತಡೆಗಟ್ಟಿದ ಮಂಗಳಮುಖಿಯರ ಗುಂಪೊಂದು ಹಿಗ್ಗಾಮುಗ್ಗಾ ಹಲ್ಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದೆ ಎಂದು ಹೇಳಲಾಗುತ್ತಿದೆ.

ಮಂಗಳಮುಖಿಯರಿಂದ ತಪ್ಪಿಸಿಕೊಂಡು ಬೈಕ್ ಬಿಟ್ಟು ಓಡಿ ಹೋಗಿದ್ದ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಹೆಬ್ಬಾಳ ಪೊಲೀಸರ ಸಹಾಯದೊಂದಿಗೆ ಬೈಕ್ ತೆಗೆದುಕೊಂಡು ನಂತರ ಮನೆಗೆ ಹಿಂದಿರುಗಿದ್ದಾನೆ. ಸದ್ಯ ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದು ಶೀಘ್ರದಲ್ಲಿಯೇ ಹಲ್ಲೆ ಮಾಡಿರುವವರನ್ನು ವಶಕ್ಕೆ ಪಡೆದುಕೊಳ್ಳಲಿದ್ದಾರೆ.

 

ಆದರೆ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಮೇಲೆ ಹಲ್ಲೆ ಮಾಡುವಂತಹ ಆ ಮಂಗಳಮುಖಿಯರಿಗೆ ಆದರೂ ಏನಿತ್ತು ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಮೂಡಿದ್ದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗಳಿಗೆ ಕಾರಣವಾಗಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article