No menu items!
13.8 C
Munich
Wednesday, May 6, 2026

ರಾಹುಲ್ ಗಾಂಧಿ ಜೊತೆ ಕಂಗನಾ ರಣಾವತ್ ಮದುವೆ ; ಕೆರಳಿದ ಬಾಲಿವುಡ್ ಕ್ವೀನ್

Must read

ಸಾಮಾಜಿಕ ಜಾಲತಾಣದಲ್ಲಿ ಚಾರಿತ್ರ್ಯ ಹರಣ ಮಾಡುವವರ ಸಂತತಿ ಹೆಚ್ಚಾಗುತ್ತಿದೆ. ಲೈಕ್ಸ್, ವ್ಯೂವ್ಸ್ ಗೋಸ್ಕರ ಸುಳ್ಳು ಸುದ್ದಿಯನ್ನು ತೇಲಿ ಬಿಡುವುದೇ ಇವರ ಫುಲ್ ಟೈಮ್ ಉದ್ಯೋಗ. ಸೆಲೆಬ್ರಿಟಿಗಳ ಹೆಸರಿನಲ್ಲಿ ಸುಳ್ಳಿನ ಕಥೆ ಹೆಣೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವ ಇವರು ಅದೆಲ್ಲೋ ದೂರದಲ್ಲಿ ಕುಂತು ಮಜಾ ತಗೋತಾರೆ.


ಸದ್ಯ ಇಂತಹದ್ದೇ ಒಂದು ಕೆಲಸವನ್ನು ಗುಂಪೊಂದು ಮಾಡಿದ್ದು ಬಾಲಿವುಡ್ ನ ಕ್ವೀನ್ ಕಂಗನಾ ನಿಗಿ ನಿಗಿ ಕೆಂಡ ಕಾರಿದ್ದಾರೆ.

ಹೌದು, ”ನಾಟಿವರ್ಲ್ಡ್” ಎಂಬ ಇನ್‌ಸ್ಟಾಗ್ರಾಮ್ ಪೇಜ್‌ವೊಂದು ಇತ್ತೀಚೆಗೆ ಒಂದು ಪೋಸ್ಟ್ ಹಾಕಿತ್ತು. ರಾಹುಲ್ ಗಾಂಧಿ ಏನಾದರೂ ಬಿಜೆಪಿಗೆ ಬಂದರೆ ನಾನು ಅವರನ್ನು ಮದುವೆಯಾಗಲು ನಾನು ಸಿದ್ಧ ಅಂತ ಕಂಗನಾ ಹೇಳಿದ್ದಾರೆ ಎನ್ನುವುದು ಆ ಸುದ್ದಿಯ ಸಾರಾಂಶ.

ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಕಂಗನಾ ರಣಾವತ್ ಅಂದ್ರೆ ಫೈರ್ ಬ್ರ್ಯಾಂಡ್. ವಿಷಯ ಯಾವುದೇ ಇರಲಿ ನೇರಾನೇರವಾಗಿ ಮಾತನಾಡಿ ವಿವಾದ ಮಾಡಿಕೊಳ್ಳುವುದರಲ್ಲಿ ಇವರು ಫೇಮಸ್. ಇದೇ ಕಾರಣಕ್ಕೆ ಜನ ಈ ಸುಳ್ಳು ಸುದ್ದಿಯನ್ನ ಕೂಡ ನಿಜಾ ಇರಬಹುದು ಅಂದುಕೊಂಡು ಸಿಕ್ಕಾಪಟ್ಟೆ ಶೇರ್ ಮಾಡಿಬಿಟ್ಟರು.

ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಕುಚೋದ್ಯಗಾರರ ದರ್ಬಾರ್ ಶುರುವಾಯ್ತು. ಸತ್ಯಾಸತ್ಯತೆ ತಿಳಿಯುವ ಗೋಜಿಗೆ ಹೋಗದ ಜನ, ರಾಹುಲ್ ಮತ್ತು ಕಂಗನಾ ಜೋಡಿಯನ್ನು ಇಟ್ಟುಕೊಂಡು ಮೀಮ್ಸ್ ಮಾಡೋಕೆ, ಗೇಲಿ ಮಾಡೋಕೆ ಶುರು ಹಚ್ಚಿಕೊಂಡರು. ರಾಜಕೀಯದ ಇಬ್ಬರು ಬದ್ಧ ವೈರಿಗಳನ್ನ ಮದುವೆಗೆ ಲಿಂಕ್ ಮಾಡಿದ್ದನ್ನ ನೋಡಿ ಹಲವರು ನಕ್ಕು ನಲಿದರೆ, ಇನ್ನು ಕೆಲವರು ಇದನ್ನು ಸೀರಿಯಸ್ ಆಗಿ ತೆಗೆದುಕೊಂಡು ರಾಜಕೀಯ ಚರ್ಚೆಗಳನ್ನೇ ಶುರು ಮಾಡಿದರು.

ಆದರೆ, ಯಾವಾಗ ಈ ಸುದ್ದಿ ಮಿತಿ ಮೀರಿ ತನಗೆ ಮುಜುಗರ ತರುವ ಹಂತಕ್ಕೆ ಹೋಯಿತೋ, ಅಲ್ಲಿಗೆ ಕಂಗನಾ ಕೆರಳಿ ಕೆಂಡವಾಗಿದ್ದಾರೆ. ಸುಮ್ಮನೆ ಕೂರದ ಅವರು ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಸುಳ್ಳು ಸುದ್ದಿ ಹರಡಿದವರಿಗೆ ಸರಿಯಾದ ಕ್ಲಾಸ್ ತಗೊಂಡಿದ್ದಾರೆ. ಇದು ಕೇವಲ ಒಬ್ಬ ರಾಜಕೀಯ ವ್ಯಕ್ತಿಯ ಮೇಲೆ ನಡೆದ ದಾಳಿಯಲ್ಲ, ಬದಲಿಗೆ ಒಬ್ಬ ಮಹಿಳೆಯ ವ್ಯಕ್ತಿಗತ ಗೌರವಕ್ಕೆ ಮಾಡಲಾದ ಅಪಮಾನ ಎಂದು ಕಿಡಿ ಕಾರಿದ್ದಾರೆ.

ರಾಜಕೀಯದಲ್ಲಿರೋ ಮಹಿಳೆಯರಿಗೆ ಯಾವುದೇ ಘನತೆ ಇಲ್ಲವೇ? ಎಂದು ಪ್ರಶ್ನೆ ಮಾಡಿರುವ ಕಂಗನಾ
ಇಂತಹ ಅಸಹ್ಯಕರವಾದ ಸುಳ್ಳು ಸುದ್ದಿಗಳನ್ನು ಹರಡುವವರಿಗೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದ್ದಾರೆ. ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿ, ಈಗ
ಮಂಡಿ ಕ್ಷೇತ್ರದ ಬಿಜೆಪಿ ಸಂಸದೆಯಾಗಿ ತನ್ನದೇ ಆದ ವ್ಯಕ್ತಿತ್ವ ಹೊಂದಿರೋ ಮಹಿಳೆಯ ಬಗ್ಗೆ ಈ ರೀತಿ ಹಗುರವಾಗಿ ಪೋಸ್ಟ್ ಹಾಕೋದು ಮಹಿಳಾ ವಿರೋಧಿ ಧೋರಣೆ ಮತ್ತು ಚಾರಿತ್ರ್ಯ ಹರಣ ಅಲ್ಲದೇ ಮತ್ತೇನು?

- Advertisement -spot_img

More articles

- Advertisement -spot_img

Latest article