No menu items!
7.9 C
Munich
Wednesday, September 23, 2026

ತೆಲುಗಿನಲ್ಲಿ ಬಿಡುಗಡೆಯಾಯಿತು ಕನ್ನಡಿಗರ ಹೃದಯ ಗೆದ್ದ ‘ರಾಯರ ದರ್ಶನ’

Must read

ಪ್ಯಾನ್ ಇಂಡಿಯಾದ ಈ ಯುಗದಲ್ಲಿ ಕಮರ್ಷಿಯಲ್ ಚಿತ್ರಕ್ಕೆ, ಪ್ರೇಕ್ಷಕರು ಕ್ಯಾರೇ ಎನ್ನುತ್ತಿಲ್ಲ. ಹೀಗಿರುವಾಗ ಕನ್ನಡದ ಆಲ್ಬಂ ಹಾಡೊಂದು ತೆಲುಗಿಗೆ ಡಬ್ ಆಗಿ ಅಲ್ಲಿಯೂ ಸದ್ದು ಮಾಡ್ತಿದೆ ಅಂದರೆ ನೀವು ನಂಬ್ತೀರಾ ? ನಂಬಲೇಬೇಕು. ಯಾಕೆಂದರೆ ಇಂತಹದ್ದೊಂದು ಪವಾಡ ಗುರುರಾಯರ ಕೃಪೆಯಿಂದ ನಡೆದಿದೆ. ಕನ್ನಡಿಗರ ಹೃದಯ ಗೆದ್ದು ಯೂಟ್ಯೂಬ್​ನಲ್ಲಿ 1.5 ಮಿಲಿಯನ್ ವೀಕ್ಷಣೆ ಪಡೆದ ರಾಯರ ದರ್ಶನ ಆಲ್ಬಂ ಈಗ ತೆಲುಗಿನಲ್ಲಿ ರಾಯರ ದರ್ಶನಂ ಹೆಸರಿನಲ್ಲಿ ರಿಲೀಸ್ ಆಗಿದೆ.

ಇನ್ನು ಎರಡು ತಿಂಗಳ ಹಿಂದೆ ಕನ್ನಡದ ಹಾಡು ಮಂತ್ರಾಲಯದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ವಿಶೇಷ ಅಂದರೆ ತೆಲುಗಿನ ಹಾಡನ್ನು ಕೂಡ ಮಂತ್ರಾಲಯದಲ್ಲೇ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 29 ರಂದು ಮಂತ್ರಾಲಯದಲ್ಲಿ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಪವಿತ್ರ ದಿನದಂದೇ ಈ ತೆಲುಗು ಆವೃತ್ತಿ ಲೋಕಾರ್ಪಣೆಗೊಂಡಿದೆ.

ಸ್ವತಃ ರಾಯರ ಸನ್ನಿಧಿಯಲ್ಲೇ ಬಿಡುಗಡೆಯಾಗಿರುವ ಈ ಗೀತೆ, ತೆಲುಗು ನಾಡಿನಲ್ಲಿರುವ ರಾಯರ ಭಕ್ತರ ಹೃದಯವನ್ನು ಗೆಲ್ಲುತ್ತಿದೆ. ಸುಗುಣ ಭಟ್ ಅದ್ದೂರಿ ನಿರ್ಮಾಣ ಮತ್ತು ರಘು ಭಟ್ ಅವರ ನಿರ್ದೇಶನ ಇರುವ ಈ ಹಾಡಿಗೆ ಕನ್ನಡದ ಹೆಮ್ಮೆಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿ.ಆರ್​.ಬಾಬಿ ಕೂಡ ಅಜನೀಶ್​ಗೆ ಸಾಥ್ ನೀಡಿದ್ದಾರೆ. ಇನ್ನು ಕನ್ನಡದಲ್ಲಿ ನಾಗಾರ್ಜುನ ಶರ್ಮಾ ಮನದಲ್ಲಿ ಭಕ್ತಿಯ ಭಾವ ಮೂಡಿಸುವ ಸಾಲುಗಳನ್ನು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಬರೆದಿದ್ದರು. ತೆಲುಗಿನಲ್ಲಿ ದಿನೇಶ್ ಕಕೇರಲಾ ಈ ಕೆಲಸ ಮಾಡಿದ್ದಾರೆ.

ಕಾಂತಾರ ಖ್ಯಾತಿಯ ಅಬ್ಬಿ ವಿ ಕನ್ನಡದ ಹಾಡಿಗೆ ತಮ್ಮ ಕಂಠ ಕುಣಿಸಿದ್ದರು. ತೆಲುಗಿನಲ್ಲಿ ಖ್ಯಾತ ಗಾಯಕ ಡಾ.ಕೆ.ಎಸ್. ಹರಿಶಂಕರ್ ಹಾಡು ಹಾಡಿದ್ದಾರೆ. ಈ ಡಿವೋಷನಲ್ ಆಲ್ಬಮ್ ಸಾಂಗ್ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೇಟ್ ಮಾಡಲು ಚಿತ್ರರಂಗದ ದಿಗ್ಗಜರ ಸಪೋರ್ಟ್ ಕೂಡ ಕಾರಣ. ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್, ರಾಯರ ಅಪ್ಪಟ ಭಕ್ತರಾಗಿರುವ ನವರಸ ನಾಯಕ ಜಗ್ಗೇಶ್, ಲವ್ಲಿ ಸ್ಟಾರ್ ಪ್ರೇಮ್ ಮತ್ತು ಹಿರಿಯ ನಟಿ ತಾರಾ ಅನುರಾಧಾ ಅವರು ಈ ಹಾಡಿಗೆ ಬೆಂಬಲವಾಗಿ ನಿಂತಿದ್ದಾರೆ.

ಆಲ್ಬಂ ಹಾಡಿನ ಹಿಂದಿನ ರೂವಾರಿಗಳು

ನಿರ್ಮಾಪಕರು: ಸುಗುಣ ರಘು ಭಟ್
ನಿರ್ದೇಶನ: ರಘು ಭಟ್
ಸಂಗೀತ: ಎಬಿಬಿಎಸ್ ಸ್ಟುಡಿಯೋ, ಸಿ.ಆರ್. ಬಾಬಿ ಮತ್ತು ಬಿ. ಅಜನೀಶ್ ಲೋಕನಾಥ್
ಗಾಯಕರು: ಅಬ್ಬಿ ವಿ
ಸಾಹಿತ್ಯ: ನಾಗರ್ಜುನ್ ಶರ್ಮ
ಪ್ರೊಜೆಕ್ಟ್ ಹೆಡ್​ಗಳು : ಶ್ರೀನಿಧಿ ಎಂ. ಕೆ. ಮತ್ತು ಖುಷಿ
ಕ್ಯಾಮರಾ (ಡಿಒಪಿ): ನಾಗೇಶ್ ವಿ ಆಚಾರ್ಯ
ಸಂಕಲನ (ಎಡಿಟರ್): ಸುರೇಶ್ ಅರಸ್ ಮತ್ತು ನಾಗೇಂದ್ರ ಅರಸ್
ತಾಂತ್ರಿಕ ಮುಖ್ಯಸ್ಥರು: ದೊರೆ ಅರಸ್
ಪ್ರೊಡಕ್ಷನ್ ಹೆಡ್: ದರ್ಶನ್ ಯದುರಾಜ್
ಜಿಮ್ಮಿ ಜಿಬ್ ಆಪರೇಷನ್: ಹರೀಶ್ ಮತ್ತು ತಂಡ
ಡ್ರೋನ್ ಆಪರೇಟರ್: ವಿಕೇಶ್ ಮೊಗವೀರ / ಅರುಣ್
ಸ್ಟಿಲ್ ಪೋಫೋಟೋಗ್ರಫಿ: ಸಂಪತ್ ಪಾರ್ಸಿ ಡಿ. ಕೆ.
ಯೂನಿಟ್: ಬಿ. ಆರ್. ಮಲ್ಲಿಕಾರ್ಜುನ್ ಸೈನ್ ಲೈಟ್
ಡಿಐ ಕಲರಿಸ್ಟ್: ಎಂ. ಮುರುಗನ್, ಚಾಮುಂಡೇಶ್ವರಿ ಸ್ಟುಡಿಯೋಸ್

ತೆಲುಗಿನಲ್ಲಿ ‘ರಾಯರ ದರ್ಶನಮ್’:
ನಿರ್ಮಾಪಕರು: ಸುಗುಣ ರಘು ಭಟ್
ನಿರ್ದೇಶನ: ರಘು ಭಟ್
ಸಂಗೀತ: ಎಬಿಬಿಎಸ್ ಸ್ಟುಡಿಯೋ, ಸಿ.ಆರ್. ಬಾಬಿ ಮತ್ತು ಬಿ. ಅಜನೀಶ್ ಲೋಕನಾಥ್
ಗಾಯಕರು: ಡಾ. ಕೆ.ಎಸ್. ಹರಿಶಂಕರ್ | ಸಾಹಿತ್ಯ: ದಿನೇಶ್ ಕಕ್ಕೇರ್ಲ
ಕ್ಯಾಮರಾ (ಡಿಒಪಿ): ನಾಗೇಶ್ ಆಚಾರ್ಯ
ಸಂಕಲನ (ಎಡಿಟರ್): ವೇಧಿಕ್ ವೀರ
ಎಡಿಟಿಂಗ್ ಸ್ಟುಡಿಯೋ: ವೇಧಿಕ್ ಕಾಸ್ಮೋಸ್

ಒಟ್ನಲ್ಲಿ ಶ್ರೀ ಶ್ರೀ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದದೊಂದಿಗೆ, “ಲಕ್ಷ್ಮಿ ಗಣೇಶ್ ಪ್ರೊಡಕ್ಷನ್” ಬ್ಯಾನರ್ ಅಡಿ ನಿರ್ಮಾಣವಾದ ರಾಯರ ದರ್ಶನಂ ಆಲ್ಬಂ ಹಾಡು ತೆಲುಗು ಪ್ರೇಕ್ಷಕರ ಮನ ಗೆಲ್ಲುತ್ತಿದೆ. ನೀವು ಇನ್ನು ಹಾಡು ಕೇಳದಿದ್ದರೆ, ನೋಡದಿದ್ದರೆ ಈಗಲೇ ಕೇಳಿ ಮತ್ತು ನೋಡಿ. ಖಂಡಿತ ನಿಮಗೆ ಇಷ್ಟ ಆಗಿಯೇ ಆಗುತ್ತೆ. ಕನ್ನಡ ಮತ್ತು ತೆಲುಗು ಹಾಡುಗಳ ಲಿಂಕ್ ಕೆಳಗಿದೆ.

- Advertisement -spot_img

More articles

- Advertisement -spot_img

Latest article