No menu items!
25.8 C
Munich
Sunday, July 26, 2026

ವಿಘ್ನ ವಿನಾಶಕನನ್ನೇ ಕದ್ದು ಪರಾರಿಯಾದ ಖದೀಮರು! ಸಿಸಿಟಿವಿಯಲ್ಲಿ ಸೆರೆ

Must read

ವಿಘ್ನ ವಿನಾಶಕನನ್ನೇ ಕದ್ದು ಪರಾರಿಯಾದ ಖದೀಮರು! ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ದೇವರ ಮೂರ್ತಿಯನ್ನೇ ಕಳ್ಳರು ಕದ್ದು ಪರಾರಿಯಾದ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬ್ಯಾಡರಹಳ್ಳಿ‌ ಠಾಣೆ ವ್ಯಾಪ್ತಿಯಲ್ಲಿಬೈಕ್ನಲ್ಲಿ ಮಧ್ಯರಾತ್ರಿ‌ ಬಂದ ಕಳ್ಳರು ಗಣೇಶ ‌ಮೂರ್ತಿಯನ್ನು‌ ಕದ್ದು ಹೊತ್ತೊಯ್ದಿದ್ದಾರೆ. ಆ ಮೂಲಕ ಹಬ್ಬದ ಸೀಸನ್ನಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಅಂಗಡಿಯ ಮಾಲೀಕರು ಗಣೇಶನ ಮೂರ್ತಿಯನ್ನು ಯಾರು ಕಳ್ಳತನ ಮಾಡುತ್ತಾರೆ ಎಂದು ಅಂಗಡಿಯ ಹೊರ ಭಾಗದಲ್ಲಿ ಇಟ್ಟಿದ್ದರು. ಇದನ್ನು ಗಮನಿಸಿದ ಕಳ್ಳರು ಒಂದು ಗಂಟೆ ರಾತ್ರಿ ವೇಳೆ ಗಣೇಶ ಮೂರ್ತಿ ಕದ್ದು ಎಸ್ಕೇಪ್ ಆಗಿದ್ದಾರೆ. ಮೂರ್ತಿ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ‌ ಸೆರೆಯಾಗಿದೆ. ಸದ್ಯ ಗಣೇಶ ಮೂರ್ತಿ‌ ಕಳ್ಳತನ ಮಾಡಿರುವ ಬಗ್ಗೆ ಬ್ಯಾಡರಹಳ್ಳಿ‌ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article