ಸಂಕ್ರಾಂತಿ ಹಬ್ಬದಂದು ಕರ್ನಾಟಕದಲ್ಲಿ ತಮಿಳು ತೆಲುಗಿನ ಅಬ್ಬರ!

Must read

ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮಿಳು ಮತ್ತು ತೆಲುಗಿನ ಹಲವಾರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ವಿಜಯ್ ಅಭಿನಯದ ಮಾಸ್ಟರ್ ಮತ್ತು ತೆಲುಗಿನ ರವಿತೇಜ ಅಭಿನಯದ ಕ್ರ್ಯಾಕ್ ಸಿನಿಮಾ. ಎರಡು ಚಿತ್ರಗಳು ಸಹ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಅತಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿವೆ.

 

 

ಕೇವಲ ತಮಿಳುನಾಡು ಆಂಧ್ರಪ್ರದೇಶ ವಲ್ಲ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಈ ಎರಡು ಚಿತ್ರಗಳು ಬಿಡುಗಡೆಯಾಗುತ್ತಿವೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಕನ್ನಡದ ಯಾವುದೇ ಚಿತ್ರ ಸಹ ಬಿಡುಗಡೆಯಾಗಲು ಮುಂದೆ ಬಂದಿಲ್ಲ. ಆದರೆ ತಮಿಳು ಮತ್ತು ತೆಲುಗಿನ ಈ ಚಿತ್ರಗಳು ಮಾತ್ರ ಕರ್ನಾಟಕದಾದ್ಯಂತ ಅತಿ ದೊಡ್ಡ ಮಟ್ಟದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿವೆ.

 

 

ಹಬ್ಬದ ಸಮಯ ರಜೆ ಇರುವುದರಿಂದ ಚಿತ್ರಮಂದಿರಗಳತ್ತ ಪ್ರೇಕ್ಷಕರು ಬರುವುದು ಕಾಮನ್. ಹೀಗಾಗಿ ಈ ಎರಡೂ ಚಿತ್ರಗಳು ಸಹ ಸಂಕ್ರಾಂತಿ ಹಬ್ಬವನ್ನು ಗುರಿಯಾಗಿಸಿಕೊಂಡು ಬಿಡುಗಡೆಯಾಗುತ್ತಿವೆ.  ಮಾಸ್ಟರ್ ಚಿತ್ರದ ಪ್ರೀ ಬುಕಿಂಗ್ ಈಗಾಗಲೇ ಆರಂಭವಾಗಿದ್ದು ಬೆಂಗಳೂರಿನಲ್ಲಿ ಭರ್ಜರಿಯಾಗಿ ಬುಕ್ಕಿಂಗ್ ನಡೆಯುತ್ತಿದೆ. ಒಟ್ಟಾರೆಯಾಗಿ ಕನ್ನಡ ಚಿತ್ರಗಳು ಮಾತ್ರ ಸಂಕ್ರಾಂತಿಗೆ ಬಿಡುಗಡೆಯಾಗದೆ ಬೇರೆ ಚಿತ್ರಗಳಿಗೆ ಚಿತ್ರಮಂದಿರಗಳನ್ನು ಬಿಟ್ಟುಕೊಟ್ಟು ಮೂಕಪ್ರೇಕ್ಷಕರಂತೆ ಕುಳಿತುಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ..

- Advertisement -spot_img

More articles

- Advertisement -spot_img

Latest article