No menu items!
20.9 C
Munich
Friday, August 21, 2026

ಸಂತೋಷ್ ಅವರೆ ನಿಮ್ಮ ತಂತ್ರಗಾರಿಕೆಯಿಂದ ನಮಗೆ ಸಂತೋಷ ಆಗಿಲ್ಲ !

Must read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆ ಮಾಡಿರುವುದು ಕುಟುಂಬ ರಾಜಕಾರಣ ಅಲ್ವಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇದು ಬಿ.ಎಲ್.ಸಂತೋಷ್ ಅವರಿಗೆ ಸ್ಪಷ್ಟ ಸಂದೇಶ. ಸಂತೋಷ್ ಅವರೆ ನಿಮ್ಮ ತಂತ್ರಗಾರಿಕೆಯಿಂದ ನಮಗೆ ಸಂತೋಷ ಆಗಿಲ್ಲ. ಯಡಿಯೂರಪ್ಪ ಅವರಿಗೆ ಪ್ರಮುಖ ಸ್ಥಾನ ಕೊಡ್ತಾ ಇದ್ದೇವೆ. ನೀವು ಏನಿದ್ದರು ಕೇಶವ ಕೃಪದಲ್ಲಿ ಇರಿ ಎಂಬ ಸಂದೇಶ ಎಂದು ಕುಟುಕಿದ್ದಾರೆ.
ವೈಯಕ್ತಿಕವಾಗಿ ನಾನು ಟೀಕೆ ಮಾಡಲ್ಲ. ವಿಜಯೇಂದ್ರ ನನಗಿಂತ ನಾಲ್ಕೈದು ವರ್ಷ ದೊಡ್ಡವರು. ಅವರಿಗೆ ಒಳ್ಳಯದಾಗಲಿ. ಬಿಜೆಪಿ ಇಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಅದಕ್ಕೆ ಜೀವ ತುಂಬುವ ಶಕ್ತಿ ಅವರಿಗೆ ಕೊಡಲಿ. ಆದರೆ ಸರ್ಜಿಕಲ್ ಸ್ಟ್ರೈಕ್ ಯಾಕೆಂದರೆ, ಸೋಮಣ್ಣ, ಸಿ.ಟಿ.ರವಿ ಟ್ರೈ ಮಾಡ್ತಾ ಇದ್ದರು. ಯಡಿಯೂರಪ್ಪ ರಾಜೀನಾಮೆಗೆ ಅವರ ಸುಪುತ್ರರು ಭ್ರಷ್ಟಾಚಾರದಲ್ಲಿ ತುಂಬಿ ತುಳುಕುತ್ತಿದ್ದಾರೆ ಎಂದು ಯತ್ನಾಳ್ ಹೇಳಿದ್ದರು ಎಂದು ತಿರುಗೇಟು ನೀಡಿದ್ದಾರೆ.

- Advertisement -spot_img

More articles

- Advertisement -spot_img

Latest article