ಸಮಂತಾ-ನಾಗಚೈತನ್ಯ ಸಂಸಾರದಲ್ಲಿ ಬಿರುಕು? ಬದಲಾದ ನಟಿ!

0
184

ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಸಹ ಪರಸ್ಪರ ಪ್ರೀತಿಸಿ ತದನಂತರ ಮನೆಯವರ ಒಪ್ಪಿಗೆ ಮೇರೆಗೆ ವಿಜೃಂಭಣೆಯಿಂದ ಮದುವೆ ಮಾಡಿಕೊಂಡರು. ಇಬ್ಬರೂ ಏ ಮಾಯ ಚೇಸಾವೆ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ತದನಂತರ ಒಳ್ಳೆಯ ಸ್ನೇಹ ಸಂಬಂಧ ಇಟ್ಟುಕೊಂಡಿದ್ದ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಹೀಗೆ ಪ್ರೀತಿಯನ್ನು ಹಲವಾರು ವರ್ಷಗಳ ಕಾಲ ಇಟ್ಟುಕೊಂಡು ಬಂದಿದ್ದ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.

ಇಷ್ಟು ದಿನಗಳಾದರೂ ಯಾವುದೇ ಗಾಸಿಪ್ ಗಳಿಗೆ ಒಳಗಾಗದೆ ಸುಖವಾಗಿ ಸಂಸಾರ ವನ್ನು ಸಾಗಿಸುತ್ತಿದ್ದ ನಟಿ ಸಮಂತಾ ಮತ್ತು ನಾಗಚೈತನ್ಯ ಕುರಿತು ಇದೀಗ ದೊಡ್ಡದೊಂದು ಕಾಂಟ್ರವರ್ಸಿ ಶುರುವಾಗಿದೆ. ಹೌದು ಮದುವೆಗೂ ಮುನ್ನ ನಟಿ ಸಮಂತಾ ಇನ್ ಸ್ಟಾಗ್ರಾಂ ಖಾತೆಯ ಹೆಸರು ಸಮಂತಾ ರುತ್ ಪ್ರಭು ಎಂದಿತ್ತು. ಆದರೆ ಮದುವೆಯಾದ ನಂತರ ಅದನ್ನು ಸಮಂತಾ ಅಕ್ಕಿನೇನಿ ಎಂದು ಬದಲಾಯಿಸಲಾಯಿತು. ಅಕ್ಕಿನೇನಿ ನಾಗಾರ್ಜುನ ಕುಟುಂಬಕ್ಕೆ ಸೊಸೆಯಾಗಿ ಹೋದ ಕಾರಣಕ್ಕೆ ಸಮಂತಾ ಅಕ್ಕಿನೇನಿ ಎಂದು ಹೆಸರನ್ನು ಬದಲಾಯಿಸಿಕೊಂಡಿದ್ದರು.

ಆದರೆ ಇದೀಗ ಮತ್ತೆ ನಟಿ ಸಮಂತಾ ತನ್ನ ಹೆಸರನ್ನು ಸಮಂತಾ ಅಕ್ಕಿನೇನಿ ಬದಲು ಸಮಂತಾ ರುತ್ ಪ್ರಭು ಎಂದು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ ಡೇಟ್ ಮಾಡಿದ್ದಾರೆ. ಹೌದು ಮದುವೆಗೂ ಮುನ್ನ ಇದ್ದ ಹೆಸರನ್ನೇ ಮತ್ತೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಸಮಂತಾ ಕಾಂಟ್ರವರ್ಸಿಗೆ ಕಾರಣವಾಗಿದ್ದಾರೆ. ತಾನು ಮದುವೆಯಾಗಿ ಹೋಗಿರುವ ಮನೆತನದ ಹೆಸರನ್ನು ತೆಗೆದು ಹಾಕಿರುವ ಸಮಂತಾ ಸಂಸಾರದಲ್ಲಿ ಬಿರುಕು ಮೂಡಿದೆಯಾ ಎಂಬ ಚರ್ಚೆಗಳು ಇದೀಗ ಜೋರಾಗಿ ನಡೆಯುತ್ತಿವೆ.