No menu items!
10.2 C
Munich
Sunday, September 27, 2026

ಸಾಲಬಾಧೆಯಿಂದ ಮರಕ್ಕೆ ನೇಣು ಹಾಕಿಕೊಂಡು ರೈತ ಸೊಸೈಡ್!

Must read

ಗದಗ:- ಸಾಲಬಾಧೆಯಿಂದ ಮರಕ್ಕೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬೆಣ್ಣೆಪೇಟೆಯಲ್ಲಿ ಜರುಗಿದೆ.

ಶಂಕ್ರಣ್ಣ ಗೋಡಿ (54) ಆತ್ಮಹತ್ಯೆ ಮಾಡಿಕೊಂಡ ರೈತ ಎನ್ನಲಾಗಿದೆ. ರೈತ ಹಲವು ಬ್ಯಾಂಕ್ ಗಳಲ್ಲಿ ಸುಮಾರು10 ಲಕ್ಷ ರೂ ಸಾಲ ಮಾಡಿದ್ದ. ಆದರೆ ಅತೀವೃಷ್ಠಿಯಿಂದ ಬೆಳೆಯೆಲ್ಲಾ ಹಾನಿಗೊಳಗಾಗಿದೆ.

ಐದು ಎಕರೆ ಜಮೀನಿನಲ್ಲಿ ಹೆಸರು ಹತ್ತಿ ಶೇಂಗಾ ಮೆಣಸಿನಕಾಯಿ ಬೆಳೆ ನಾಶವಾಗಿದ್ದು, ಟ್ರಾಕ್ಟರ್ ಗಾಗಿ, ಬೆಳೆ ಸಾಲ, ಮತ್ತು ಮತ್ತು ಆಸ್ಪತ್ರೆ ವೆಚ್ಚಕ್ಕಾಗಿ ರೈತ ಸಾಲ ಮಾಡಿದ್ದ.

ವರ್ಷದಿಂದ ವರ್ಷಕ್ಕೆ ಸಾಲ ಹೆಚ್ಚಾಗ್ತಿರೋದಕ್ಕೆ ರೈತ ಬೇಸತ್ತಿದ್ದ. ಹೀಗಾಗಿ ಈ ವರ್ಷವೂ ಆಗಿರುವ ಬೆಳೆಹಾನಿಗೆ ಬೇಸತ್ತು ಜಮೀನುನಲ್ಲಿ ನೇಣಿಗೆ ಶರಣಾಗಿದ್ದಾರೆ. ಲಕ್ಷ್ಮೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article