ಸಾಹಸಪ್ರಿಯರು ಹೋಗಲೇ ಬೇಕಾದ ಭಯಾನಕ ರಸ್ತೆಗಳು..!

0
73

ಸಾಹಸಪ್ರಿಯರು ಹೋಗಲೇ ಬೇಕಾದ ಭಯಾನಕ ರಸ್ತೆಗಳು..!

ಕೆಲವರಿಗೆ ಹುಚ್ಚು ಸಾಹಸಗಳನ್ನು ಮಾಡುವ ಹುಚ್ಚುತನಗಳಿರುತ್ತವೆ. ಅದೇ ಹುಚ್ಚುಗಳಿಗೆ ಅನೇಕರು ಬಲಿಯಾಗಿದ್ದಾರೆ. ಅದರೂ ಸಾಹಸ ಮಾಡುವ ತೆವಲುಗಳು ಮಾತ್ರ ಕಡಿಮೆಯಾಗಿಲ್ಲ. ಈ ಜಗತ್ತಿನಲ್ಲಿ ಅಸಾಮಾನ್ಯ ಸಾಧಕರುಗಳಿದ್ದಾರೆ. ನೀವು ಸಾಹಸಪ್ರಿಯರಾದ್ರೇ ಈ ರಸ್ತೆಗಳಲ್ಲಿ ರೈಡು ಹೊಡೆದು ಬನ್ನಿ ನೋಡೋಣ. ಆದರೆ ಅಲ್ಲಿಗೆ ತಲುಪೋದು ಮಾತ್ರ ಕಾಸ್ಟ್ಲೀ ವಿಚಾರ… ಅದು ನಿಮಗೆ ಬಿಟ್ಟ ವಿಚಾರ.
ನಾರ್ಥ್ ಯುಂಗಾಸ್ ರೋಡ್

road_yungas11_0

69 ಕಿ.ಮಿ.ಗಳಿರುವ, ಬೋಲಿವಿಯಾದ `ಲಾಫಾಝ್’ ನಗರದಿಂದ ಸ್ಟಾರ್ಟ್ ಆಗಿ `ಕೊರೈಕೋ’ ಊರಿಗೆ ಮುಗಿಯುವ ಈ ರಸ್ತೆ ವಿಶ್ವದ ಭಯಾನಕ ರಸ್ತೆಯೆಂದು “ಇಂಟರ್ ಅಮೇರಿಕನ್ ಡೆವೆಲಪ್ಮೆಂಟ್ ಬ್ಯಾಂಕ್” ಹೆಸರಿಟ್ಟಿದೆ. ಅಂಕಿ ಅಂಶದ ಪ್ರಕಾರ ವರ್ಷಕ್ಕೆ ಸುಮಾರು 300ಕ್ಕೂ ಹೆಚ್ಚು ಮಂದಿ ಇಲ್ಲಿ “ರೋಡ್ಆ್ಯಕ್ಸಿಡೆಂಟ್”ಗೆ ಬಲಿಯಾಗುತ್ತಾರೆ. 20 ವರ್ಷಗಳ ಪುನರ್ನಿರ್ಮಾಣದ ಬಳಿಕ 2006ರಲ್ಲಿ ಪಬ್ಲಿಕ್ಗೆ ಮುಕ್ತವಾದ ಈ ರಸ್ತೆ, ಆ ರಸ್ತೆ ಅಪಘಾತ ತಡೆಯುತ್ತದೆ ಎಂದು ಅಲ್ಲಿಯ ಸರ್ಕಾರ ಹೇಳಿಕೊಂಡರೂ ಜನರಿಗೆ ಅರಿವಾದಂತಿಲ್ಲ. ಹೀಗಾಗಿ ಈ ರಸ್ತೆಯನ್ನು ಹೆಚ್ಚಾಗಿ ಬಳಸುವುದು ವಾಹನ ಸವಾರರಲ್ಲ, ಬದಲಾಗಿ ಸಾಹಸ ಕ್ರೀಡೆಯಲ್ಲಿ ತೊಡಗುವ ಜನರು.
ಗೋಲಿಯಾಂಗ್ ಟನಲ್ ರೋಡ್

goliyang

ಹೆಸರೇ ಹೇಳುವಂತೆ ಈ ರಸ್ತೆ ಗುಡ್ಡ ಪ್ರದೇಶದಲ್ಲಿದ್ದು ಚೀನಾದ `ತೈವಾಂಗ್ ನಲ್ಲಿದೆ’. ಇದನ್ನು ಅಲ್ಲಿ ವಾಸಿಸುವ ಜನಾಂಗದವರೇ ನಿರ್ಮಿಸಿದ್ದು ವಿಶೇಷ. ಈ ಕಾರ್ಯದಲ್ಲಿ ಅದೆಷ್ಟು ಜನರು ಇಲ್ಲಿಂದ ಬಿದ್ದು ಅವರ ಪ್ರಾಣ ಕಳೆದುಕೊಂಡಿದ್ದಾರೋ ಆ ದೇವರಿಗೇ ಗೊತ್ತು. ಈ ಕಣಿವೆ 5 ಮೀಟರ್ ಉದ್ದ, 4 ಮೀಟರ್ ಅಗಲವಿದ್ದು, ಇಲ್ಲಿ ಪ್ರಯಾಣಿಸಲು ನಿಮಗೆ ಗಟ್ಟಿಯಾದ ಗುಂಡಿಗೆ ಬೇಕು.
ಆಫ್ರಿಕಾ ಇಕ್ಯುಕಿರೋಡ್

africa-iquika

ಉತ್ತರ ಪ್ರಾಂತ್ಯದ `ಚಿಲಿ’ಯಲ್ಲಿರುವ ಇದು, `ಆಫ್ರಿಕಾ’ದಿಂದ `ಇಕ್ಯುಕಿ’ಗೆ ಸಂಪರ್ಕಕೊಂಡಿಯಂತಿದೆ. ಈ ರಸ್ತೆ `ಡೇಂಜರಸ್ ಡ್ರೈವ್’ಗಳಿಗೆ ಹೆಸರುವಾಸಿಯಾಗಿದ್ದು, ರಸ್ತೆಯುದ್ದಕ್ಕೂ ಅಪಾಯಕಾರಿ. ಈ ರಸ್ತೆ ಜನರಿಗೆ ಸ್ಪೀಡ್ ಡ್ರೈವ್ ಮಾಡುವುದಕ್ಕೆ ಆಕರ್ಷಿಸುವಂತಿದ್ದು, ಚಾಲಕರು ರಸ್ತೆಯ ಮರ್ಮವನ್ನರಿಯದೇ ಪ್ರಪಾತಕ್ಕೆ ಬೀಳಿಸುತ್ತಾರೆ.

ಸೈಬೀರಿಯನ್ ರೋಡ್

syberian

`ಮಾಸ್ಕೋ’ದಿಂದ `ಯಾಕುಸ್ಕ’ ತನಕ ಇರುವ ಈ ರಸ್ತೆ ಸಾಮನ್ಯದಂತಿದ್ದರೂ ಅಲ್ಲಿನ ಹವಾಮಾನ ಕೆಲವೊಮ್ಮೆ ಅಂಟಾರ್ಟಿಕವನ್ನೂ ಮೀರಿಸುವಂತಿದ್ದು, ಆ ಸಮಯದಲ್ಲಿ ಈ ರಸ್ತೆ ಮಂಜು, ಬರ್ಫ್ ಗಳಿಂದ ಮುಚ್ಚಿಹೋಗಿ ರಸ್ತೆ ಜಾರುವಂತೆ ಮಾಡುತ್ತದೆ. ಹೀಗಾಗಿ ಈ ಸಮಯದಲ್ಲಿ ಯಾವ ವಾಹನಗಳು ಓಡಾಡುವಂತಿಲ್ಲ. ಆದ್ದರಿಂದ ದೊಡ್ಡ ಟ್ರೈನ್ ನಂತೆ ಕಾಣುವ ಟ್ರಾಫಿಕ್ ಜಾಮ್ ಇಲ್ಲಿ ನೀವು ನೋಡಬಹುದು. ಕೆಲವೊಮ್ಮೆ ವಾಹನಗಳು ಓಡಾಡುವಾಗಲೇ ಹವಾಮಾನ ವೈಪರಿತ್ಯ ಉಂಟಾಗಿ ಹೆಚ್ಚು ವಾಹನಗಳ ಅಪಘಾತ ಉಂಟಾಗಿರುವ ಉದಾಹರಣೆಗಳು ಸಾಕಷ್ಟಿವೆ.
ಸಿಚುವಾನ್ ಟಿಬೆಟ್ ಹೈವೇ

strada-taroko-797x600

ಇದು ಚೀನಾ ದೇಶದ ಮುಖ್ಯ ಹೈವೆಗಳೊಂದಾಗಿದ್ದು, ದೇಶದ ಅತ್ಯಂತ ಎತ್ತರದ ರಸ್ತೆ. ಇಲ್ಲಿ ಯಾವಾಗ ಭೂಕುಸಿತ ಉಂಟಾಗುತ್ತದೆ ಎಂದು ಹೇಳುವುದು ಕಷ್ಟ. ಸಾಕಷ್ಟು ಬಾರಿ ಇದೇ ರೀತಿ ಆಗಿದ್ದು, ಅದೆಷ್ಟೋ ಜನ ಪ್ರಯಾಣದಲ್ಲಿ ಭೂಕುಸಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here