ಅದ್ಭುತ ಸಾಧನೆ ಮಾಡಿರುವ ಭಾರತೀಯ ನಾರಿಯರ ಲೈಫ್ ಸ್ಟೋರಿ..!

0
105

ಅದ್ಭುತ ಸಾಧನೆ ಮಾಡಿರುವ ಭಾರತೀಯ ನಾರಿಯರ ಲೈಫ್ ಸ್ಟೋರಿ..!

ಹೆಣ್ಣಲ್ಲವೇ ನಮ್ಮನ್ನೆಲ್ಲಾ ಹಡೆದ ತಾಯಿ
ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆದವಳು
ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು..!
ಕುವರನಾದೊಡೆ ಬಂದ ಗುಣವೇನದರಿಂದ
ಕುವರಿಯಾದೊಡೆ ಕುಂದೇನು..?
ಕವಯತ್ರಿ “ಸಂಚಿ ಹೊನ್ನಮ್ಮ” ಹೇಳಿದ ಸಾಲುಗಳು ಎಷ್ಟೊಂದು ಸೊಗಸಾಗಿದೆ..! ಎಷ್ಟೊಂದು ಅರ್ಥಗರ್ಭಿತವಾಗಿವೆ ಅಲ್ವಾ..? ನಿಜ ಹೆಣ್ಣಾದರೇನು ಗಂಡಾದರೇನು..? ಹೆಣ್ಣನ್ನು ಹೀಗಳೆಯುವವರೆಲ್ಲಾ ಒಂದನ್ನಂತೂ ಅರ್ಥ ಮಾಡಿಕೊಳ್ಳಲೇಬೇಕು.. ಅದೇನಪ್ಪಾ ಅಂದ್ರೆ “ಹೆಣ್ಣಿಲ್ಲದೆ ಈ ನಮ್ಮ ಗಂಡು ಜನ್ಮವೇ ಇರ್ತ ಇರ್ಲಿಲ್ಲ..! ಅದಿರಲಿ, ಅದೆಷ್ಟೋ ಹೆಣ್ಣು ಮಕ್ಕಳು ಇಡೀ ವಿಶ್ವದಲ್ಲಿಯೇ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ..! ಇಡೀ ದೇಶವೇ, ಎಲ್ಲಾ ಭಾರತೀಯರೇ ಹೆಮ್ಮೆಪಡುವಂತಹ ಆ ಸಾಧಕಿಯರ ಪರಿಚಯ ಇಲ್ಲಿದೆ..! ಮಿಸ್ ಮಾಡ್ದೇ ಓದಿ..! “ಇಡೀ ವಿಶ್ವವೇ ಮೆಚ್ಚುವ ಭಾರತೀಯ ನಾರಿಯರಿವರು”…!

1. ಭಕ್ತಿ ಶರ್ಮಾ :

yourstory_1425708203

ಇಡೀ ವಿಶ್ವವೇ ಶಹಬ್ಬಾಶ್ ಎಂದಿರುವ ಭಾರತೀಯ ಈಜುಗಾರ್ತಿ..! ಇವರಿಗಿನ್ನೂ ಕೇವಲ ಇಪ್ಪತ್ತಾರೇ ವರ್ಷ..! 2006ರಲ್ಲಿ ಇಂಗ್ಲೀಷ್ ಕಾಲಿವೆಯನ್ನು ಈಜಿ ದಾಟಿದ್ರು..! ಆಗ ಅವರಿಗೆ ಕೇವಲ ಹದಿನೇಳು ವರ್ಷ..! ಅದಲ್ಲದೆ ಎಂಟು ಕಾಲುವೆಯನ್ನು ಈಜಿದ್ದಾರೆ..! ಇವಲ್ಲಕ್ಕಿಂತಲೂ ಹೆಚ್ಚಾಗಿ ಅವರು 2010ರಲ್ಲಿ ಅಂಟಾರ್ಟಿಕ್ ನೀರಿನಲ್ಲಿ 1 ಡಿಗ್ರೀ ಸೆಲ್ಷಿಯಸ್ ತಾಪಮಾನದಲ್ಲಿ, 41.14 ನಿಮಿಷದ ಅವಧಿಯಲ್ಲಿ 2.3 ಕಿಲೋಮೀಟರ್ ಈಜಿ ದಾಖಲೆ ಬರೆದಿದ್ದಾರೆ..! ಈ ಮೂಲಕ ಅಂಟಾರ್ಟಿಕ್ ನೀರಿನಲ್ಲಿ ಈಜಿದ ಏಷ್ಯಾದ ಮೊಟ್ಟಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರೆರಾಗಿದ್ದಾರೆ..! ಅಷ್ಟೇ ಅಲ್ಲದೆ ಅತೀ ಚಿಕ್ಕ ವಯಸ್ಸಲ್ಲಿ ಅಂಟಾರ್ಟಿಕ್ ನೀರಿನಲ್ಲಿ ಈಜಿದ ಮಹಿಳೆಯೂ ಇವರಾಗಿದ್ದು..! ಈ ಸಾಧನೆ ಮಾಡುವಾಗ ಇವರಿಗೆ ಕೇವಲ 21 ವರ್ಷ ವಯಸ್ಸು..!

2. ಅರುಣಿಮಾ ಸಿನ್ಹಾ :

arunima_1425708291

ಭಾರತದ ಕೀರಿಪತಾಕೆಯನ್ನು ಎತ್ತಿ ಹಿಡಿದ ಇನ್ನೊಬ್ಬ ಮಹಾನ್ ಸಾಧಕಿ ಅರುಣಿಮಾ ಸಿನ್ಹಾ..! ನಿಮಗೂ ಗೊತ್ತಿರ ಬಹುದು.., ಅಪಘಾತವೊಂದರಲ್ಲಿ ಇವರು ಕಾಲು ಕಳೆದು ಕೊಳ್ತಾರೆ..! ಕಾಲಿಲ್ಲದೇ ಇದ್ರೂ 2011ರಲ್ಲಿ ಮೌಂಟೆವರೆಸ್ಟ್ ಶಿಖರವನ್ನೇರಿದ್ದಾರೆ..! ಮೌಂಟ್ ಎವರೆಸ್ಟ್ ಏರಿದ ವಿಶ್ವದ ಮೊಟ್ಟಮೊದಲ ವಿಕಲಚೇತನ ಮಹಿಳೆ..! ಅಷ್ಟೇ ಅಲ್ಲದೆ ಮೌಂಟ್ ಎವರೆಸ್ಟ್ ಏರಿದ ಭಾರತದ ಮೊಟ್ಟಮೊದಲ ವಿಕಲಚೇತನರೂ ಇವರೇ..! ಇವರಿಗೊಂದು ದೊಡ್ಡ ಸಲಾಂ..!

3. ಮೇರಿ ಕೋಮ್ :

India's boxer MC Mary Kom punches a bag during a training session at Balewadi Stadium in Pune, about 190 km (118 miles) from Mumbai, March 12, 2012. Mary Kom was the face of the campaign to get women's boxing into the Olympics and the Indian mother of two will be competing at the world championships in China in May aiming to book her spot at the London Games in the 51kg category. Picture taken March 12, 2012. REUTERS/Danish Siddiqui (INDIA - Tags: SPORT BOXING OLYMPICS) - RTR2ZKF4

ಇವರ ಹೆಸರನ್ನು ಕೇಳದೇ ಇರೋರಿಲ್ಲ..! ಇವರು ಭಾರತೀಯ ಮಹಿಳಾ ಬಾಕ್ಸಿಂಗ್ ಪಟು. ಇವರು ಮಣಿಪುರದ ಕೋಮ್ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಐದು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿದ್ದು, ಅಷ್ಟೇ ಅಲ್ಲದೆ ಆರೂ ಚಾಂಪಿಯನ್ ಶಿಪ್ನಲ್ಲೂ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸಿಂಗ್ ಪಟು ಇವರೇ…! 2012ರ ಬೇಸಿಗೆ ಒಲಂಪಿಕ್ಸ್ ಗೆ ಆಯ್ಕೆಯಾದ ಏಕೈಕ ಭಾರತೀಯ ಮಹಿಳಾ ಬಾಕ್ಸರ್..! 51 ಕೆಜಿ ವಿಭಾಗದಲ್ಲಿ ಭಾಗವಹಿಸಿ ಕಂಚಿನ ಪದಕ ಗೆದ್ದಿದ್ದಾರೆ..! ಇವರ ಜೀವನಾಧರಿತ ಸಿನಿಮಾ ಕೂಡ ಬಂದಿದೆ.

4. ಹರ್ಷಿಣಿ ಕಾನ್ಹೇಕರ್ :

jaagore_1425708424
ಹತ್ತು ವರ್ಷದ ಹಿಂದೆಯೇ ಇವರು “ಭಾರತದ ಮೊದಲ ಫೈರ್ ಫೈಟರ್” ಎಂಬ ಬಿರುದನ್ನು ತನ್ನದಾಗಿಸಿಕೊಂಡಿದ್ದಾರೆ..! ಅಡೆತಡೆಗಳಿರುವುದೇ ಇತಿಹಾಸ ನಿರ್ಮಿಸಲೆಂಬ ಮಾತಿನಲ್ಲಿ ನಂಬಿಕೆಯನ್ನು ಹೊಂದಿದ್ದ ಇವರು ಕೊನೆಗೂ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾದರು..!

5. ಸೈನಾ ನೆಹವಾಲ್ :

saina-nehwal-5a_1425714036
ಭಾರತದ ಈ ಬ್ಯಾಡ್ಮಿಂಟನ್ ತಾರೆ ಯಾರಿಗೆ ತಾನೆ ಗೊತ್ತಿಲ್ಲ..?! ದೇಶದ ಹೆಸರಾಂತ ಬ್ಯಾಡ್ಮಿಂಟನ್ ಆಟಗಾರ್ತಿ..! ಇವರಿಗಿನ್ನೂ ಕೇವಲ 25 ವರ್ಷ..! ಆದ್ರೆ ಸಾಧನೆ ಅಪಾರ..! ತನ್ನ 24ನೇ ವಯಸ್ಸಿನಲ್ಲಿಯೇ ಒಲಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದರು..! ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂದ ಮೊದಲ ಮಹಿಳೆಯೂ ಇವರೇ..! ಅಷ್ಟೇ ಅಲ್ದೇ.., ಇವರು ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಮೊಟ್ಟಮೊದಲ ಮಹಿಳೆಯೂ ಇವರೇ…!

6. ಪೂಜಾ ಠಾಕೂರ್ :

puja-thakur_1425712483
ಈ ವರ್ಷ(2015)ದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿದ್ದವರು.. ಅಮೇರಿಕಾ ಅಧ್ಯಕ್ಷರಾದ ಒಬಾಮ. ಆಗ ಅವರಿಗೆ ರಾಷ್ಟ್ರಪತಿ ಭವನದಲ್ಲಿ ನೀಡಲಾದ ಗೌರವ ವಂದನೆಯ ನೇತೃತ್ವವಹಿಸಿದ್ದವರು ಒಬ್ಬ ಮಹಿಳಾ ಅಧಿಕಾರಿ..! ಅವರೇ ಈ ಪೂಜಾ ಠಾಕೂರ್..! ವಾಯು ಪಡೆಯ ವಿಂಗ್ ಕಮಾಂಡರ್ ಪೂಜಾ ಠಾಕೂರ್ ಗೌರವ ವಂದನೆಯ ನೇತೃತ್ವ ವಹಿಸುವ ಮೂಲಕ ಈ ರೀತಿ ಗಣ್ಯರಿಗೆ ಗೌರವ ನೀಡುವ ಹೊಣೆಗಾರಿಕೆಯ ನೇತೃತ್ವವಹಿಸಿಸದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರದಾದರು..!

7. ವಿದ್ಯಾ ಬಾಲನ್ :

vb_1425712792
ಈ ಸಿನಿಮಾ ತಾರೆ ಎಲ್ಲರಿಗೂ ಗೊತ್ತು. ಇವರು ಸಮಾಜಶಾಸ್ತ್ರದ ಪದವೀಧರೆ..! ಇವರು ಸಿನಿಮಾ ರಂಗಕ್ಕೆ ಕಾಲಿಟ್ಟು, ಮಹಿಳೆ ಹೀಗೆಯೇ ನಟಿಸಬೇಕೆಂಬ ಗ್ರಹಿಕೆಯನ್ನು ದೂರ ಮಾಡಿದವರು..! 2014ರಲ್ಲಿ ರಾಷ್ಟ್ರಪ್ರಶಸ್ತಿ ಮತ್ತು ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರು.

8. ಸಾನಿಯಾ ಮಿರ್ಜಾ :

sania-mirza-workout_1425716061
ಮೂಗೂತಿ ಸುಂದರಿ ಎಂದೇ ಕರೆಯಲ್ಪಡುವ ಸಾನಿಯಾ ಮಿರ್ಜಾ ಭಾರತೀಯ ಟೆನಿಸ್ ಆಟಗಾರ್ತಿ..! ಜೂನಿಯರ್ ವಿಂಬಲ್ಡನ್ ಡಬಲ್ಸ್ ಗೆದ್ದ ಭಾರತದ ಅತ್ಯಂತ ಕಿರಿಯ ಆಟಗಾರ್ತಿ ಮತ್ತು ಮಹಿಳೆ..! ಗ್ರ್ಯಾಂಡ್ಸ್ಲ್ಯಾಮ್ ಪಂದ್ಯದಲ್ಲಿ ಮೂರನೇ ಸುತ್ತು ತಲುಪಿದ ಭಾರತದ ಮೊದಲ ಹಾಗೂ ಏಕೈಕ ಮಹಿಳೆ..! 2014ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಮಿಕ್ಸಡ್ ಡಬಲ್ಸ್ ನಲ್ಲಿ ಚಿನ್ನ ಗೆದ್ದಿದ್ದಾರೆ..! 2015ರಲ್ಲಿ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲೂ ಪ್ರಶಸ್ತಿ ಗೆದ್ದಿದ್ದಾರೆ..! ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯೂ ಇವರಿಗೆ ಸಾಧನೆಗೆ ಹುಡುಕಿಕೊಂಡು ಬಂದಿದೆ..! ಹೀಗೆ ಇವರ ಬಗ್ಗೆ ಹೇಳುತ್ತಾ ಹೋದರೆ ಪದಗಳೇ ಸಾಲದು..1 ಚಿಕ್ಕ ವಯಸ್ಸಲ್ಲಿಯೇ ಸಾಧನೆಯ ಶಿಖರವೇರಿದ ಇವರು ನಮ್ಮದೇಶದವ್ರೂ ಅನ್ನೋದೇ ನಮಗೆ ಖುಷಿ..!

9. ರಶ್ಮಿ ಬನ್ಸಾಲ್ :

rashmibansalahd_1425716268
ಯುವ ಬರಹಗಾರ್ತಿ. ಇವರು ಐದು ಪುಸ್ತಕಗಳನ್ನು ಬರೆದಿದ್ದಾರೆ. ಆ ಪುಸ್ತಕಗಳಲ್ಲಿ “ಸ್ಟೆ ಹಂಗ್ರಿ ಸ್ಟೆ ಫೂಲೀಶ್” ಎಂಬ ಪುಸ್ತಕ ಫೇಮಸ್ ಆಗಿದೆ..! ಈ ಪುಸ್ತಕದ ಕುರಿತು ವಿಶ್ವಮಟ್ಟದಲ್ಲಿ ವಿಮರ್ಶೆ ಆಗುತ್ತಿದೆ..! ಬೇರೆ ಬೇರೆ ಭಾಷೆಗಳಿಗೂ ತರ್ಜುಮೆ ಆಗ್ತಾ ಇದೆ..!

10. ದೀಪಿಕಾ ಪಳ್ಳಿಕಾಲ್ :

dipika-pallikal_1425716725
ಭಾರತದ ಸ್ಕ್ವಾಶ್ ಆಟಗಾರ್ತಿ. ಭಾರತದಲ್ಲಿ ಈ ಕ್ರೀಡೆ ಜನಪ್ರಿಯವಾಗಿಲ್ಲ. ಆದ್ರೂ ಇದರಲ್ಲೇ ಸಾಧನೆ ಮಾಡ್ಬೇಕೆಂಬ ಕನಸು ಇವರದ್ದು..! ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೂ ಅದನ್ನು ತಿರಸ್ಕರಿಸಿ ಸ್ಕ್ವಾಷ್ ಕಡೆ ಗಮನ ಹರಿಸಿದ್ದಾರೆ…! ಅಷ್ಟೇ ಅಲ್ಲದೇ ವಿಶ್ವ ಸ್ಕಾಷ್ ರ್ಯಾಕಿಂಗ್ ನಲ್ಲಿ ಹತ್ತರೊಳಗೆ ಸ್ಥಾನಗಳಿಸಿದ ಏಕೈಕ ಭಾರತೀಯೆ ಇವರೇ..!

 11.ತಾನಿಯಾ ಸಚ್ದೇವ್ :

SONY DSC

ಭಾರತೀಯ ಚೆಸ್ ಆಟಗಾರ್ತಿ. 2005 ಮಹಿಳಾ ಗ್ರಾಂಡ್ ಮಾಸ್ಟರ್ ಎಂಬ ಬಿರುದನ್ನು ಹೊಂದಿದ್ದಾರೆ. 2008ರಲ್ಲಿ ಅಂತರರಾಷ್ಟ್ರೀಯ ಗ್ರಾಂಡ್ ಮಾಸ್ಟರ್ ಗರಿ ಇವರಿಗೆ ಸಿಕ್ಕಿದೆ. ಅರ್ಜುನ ಪ್ರಶಸ್ತಿಯನ್ನೂ ಪಡೆದಿದ್ದಾರೆ..!

ಇವರುಗಳಲ್ಲದೆ ಕಲ್ಪನಾ ಚಾವ್ಲಾ, ಆಶಾ ರಾಯ್, ಮಿಥಾಲಿ ರಾಜ್, ಅರುಂದತಿ ಭಟ್ಟಾಚಾರ್ಯ, ಇಂದಿರಾಗಾಂಧಿ, ಪ್ರತಿಭಾಪಾಟೀಲ್………. ಹೀಗೆ ಭಾರತೀಯ ಹೆಮ್ಮೆಯ ಮಹಿಳೆಯರ ದಂಡೇ ಇದೆ..! ಇವರೆಲ್ಲರ ಜೊತೆ ಭಾರತದ ಪ್ರತಿಯೊಬ್ಬ “ಅಮ್ಮಂದಿರೂ” ಮಹಾನ್ ಮೇರು ವ್ಯಕ್ತಿಗಳೇ..! ಭಾರತದ ಅಮ್ಮಂದಿರೆಲ್ಲಾ ಗ್ರೇಟ್ ಆಗೋದು ಏಕೆ ಗೊತ್ತಾ..? ಎಲ್ಲರ ಸಾಧನೆಯ ಹಿಂದೆ ಇರುವ ಶಕ್ತಿಯೇ ಅಮ್ಮ..! ಒಮ್ಮೆ ನಿಮ್ಮ ಅಮ್ಮನನ್ನು ಕಣ್ಮಚ್ಚಿ ನೆನಪಿಸಿಕೊಳ್ಳಿ.. ಆಗ ಅರ್ಥವಾಗುತ್ತೆ.. ಅಮ್ಮಂದಿರೆಲ್ಲಾ ಗ್ರೇಟ್ ಅನ್ನೋದು…!

LEAVE A REPLY

Please enter your comment!
Please enter your name here