Home ಎಲ್ಲೆಲ್ಲಿ ಏನೇನು.? ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶವ: ತನಿಖೆಯಲ್ಲಿ ಪತ್ನಿ–ಪ್ರೇಮಿ ಕೊಲೆ ಗುಟ್ಟು ಬಹಿರಂಗ

ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶವ: ತನಿಖೆಯಲ್ಲಿ ಪತ್ನಿ–ಪ್ರೇಮಿ ಕೊಲೆ ಗುಟ್ಟು ಬಹಿರಂಗ

0
ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶವ: ತನಿಖೆಯಲ್ಲಿ ಪತ್ನಿ–ಪ್ರೇಮಿ ಕೊಲೆ ಗುಟ್ಟು ಬಹಿರಂಗ

ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಶವ: ತನಿಖೆಯಲ್ಲಿ ಪತ್ನಿ–ಪ್ರೇಮಿ ಕೊಲೆ ಗುಟ್ಟು ಬಹಿರಂಗ

ಬೆಂಗಳೂರು: ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಜಿಲ್ಲೆಯ ಪೊಲೀಸರು ಭೇದಿಸಿದ್ದಾರೆ. ಮೃತನ ಗುರುತು ಯಾದಗಿರಿ ಮೂಲದ ಬಸವರಾಜು (28) ಎಂದು ಪತ್ತೆಯಾಗಿದೆ.

ಬಸವರಾಜು ತಿಗಳರಪಾಳ್ಯದಲ್ಲಿ ಪತ್ನಿ ಶರಣಮ್ಮ ಜೊತೆ ವಾಸವಾಗುತ್ತಿದ್ದು, ಈ ಅವಧಿಯಲ್ಲಿ ಶರಣಮ್ಮ ಸ್ಥಳೀಯ ಯುವಕ ವೀರಭದ್ರ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಈ ಸಂಬಂಧಕ್ಕೆ ಅಡ್ಡಿಯಾದ ಬಸವರಾಜುವನ್ನು ದೂರಿಸಲು ಶರಣಮ್ಮ ಮತ್ತು ವೀರಭದ್ರ ಕೊಲೆ ಯೋಜನೆ ರೂಪಿಸಿದ್ದರು.

ಕಳೆದ ಶುಕ್ರವಾರ ರಾತ್ರಿ ಮನೆಗೆ ಬಂದ ಬಸವರಾಜು ಮಲಗಿದ್ದ ವೇಳೆ ಮೊದಲಿಗೆ ಅವನ ತಲೆಗೆ ಕಲ್ಲಿನಿಂದ ಹೊಡೆದು, ಬಳಿಕ ಇನ್ನೂ ಜೀವಂತವಾಗಿದ್ದ ಕಾರಣ ಕಟ್ಟೆಯಿಂದ ನೇಣು ಹಾಕಿ ಕೊಲೆ ಮಾಡಲಾಗಿದೆ.

ಘಟನೆಯನ್ನು ಮರೆಮಾಡುವ ಸಲುವಾಗಿ, ವೀರಭದ್ರ ತನ್ನ ಸ್ನೇಹಿತ ಅನಿಲ್ನ ಸಹಾಯ ಪಡೆದು ಮಧ್ಯರಾತ್ರಿ 12:30ರ ವೇಳೆಗೆ ಮೃತದೇಹವನ್ನು ಹಳೆಯ ಬಟ್ಟೆಗಳಲ್ಲಿ ಸುತ್ತಿ ಚೀಲದಲ್ಲಿ ಹಾಕಿಕೊಂಡು ಮನೆ ಹೊರಗೆ ತೆಗೆದು ಹೋಗಿದ್ದಾರೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾರೆ.

ಪೊಲೀಸರ ತನಿಖೆಯಿಂದ ಸತ್ಯ ಬೆಳಕಿಗೆ ಬಂದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಶರಣಮ್ಮ, ವೀರಭದ್ರ ಮತ್ತು ಅನಿಲ್ ಮೂವರನ್ನೂ ಬಂಧಿಸಲಾಗಿದೆ.