No menu items!
17.4 C
Munich
Friday, August 21, 2026

ಸ್ಪೋಟದಲ್ಲಿ ಗಾಯಗೊಂಡವರ ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸಲಿದೆ !

Must read

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟದಿಂದ ಗಾಯಗೊಂಡಿರುವ ಜನರನ್ನು ಆಸ್ಪತ್ರೆಗ ತೆರಳಿ ಮಾತಾಡಿಸಿದ ಸಿಎಂ ಸಿದ್ದರಾಮಯ್ಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಬಾಂಬನ್ನು ಬ್ಯಾಗಲ್ಲಿ ತಂದವನ ಬಗ್ಗೆ ಮಾತಾಡಿದ ಅವರು, ಶಂಕಿತ ವ್ಯಕ್ತಿ ಬಸ್ಸೊಂದರಲ್ಲಿ ಬಂದು ಕೆಫೆಗೆ ಹತ್ತಿರದ ಬಸ್ ಸ್ಟಾಪ್ನಲ್ಲಿ ಇಳಿದು ಹೋಟೆಲ್ ನತ್ತ ಹೋಗಿದ್ದಾನೆ. ಕೈಯಲ್ಲಿ ಒಂದು ಬ್ಯಾಗ್ ಹಿಡಿದು ಕೆಫೆಯೊಳಗೆ ಹೋದವನು ಅಲ್ಲಿದ್ದ ಮರವೊಂದರ ಬಳಿ ಕೂತು ಇಡ್ಲಿ ತಿಂದಿದ್ದಾನೆ.
ಗಡ್ಡಧಾರಿಯಾಗಿರುವ ಶಂಕಿತ ಮುಖಕ್ಕೆ ಮಾಸ್ಕ್ ಧರಿಸಿದ್ದಾನೆ ಮತ್ತು ತಲೆ ಮೇಲೆ ಟೋಪಿ ಇಟ್ಟುಕೊಂಡಿದ್ದಾನೆ. ಅವನು ಪ್ರಯಾಣಿಸಿದ ಬಸ್ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸರು, ಐಬಿ ಮತ್ತು ರಾ ಮತ್ತು ಎನ್ಐಎ ಆಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಒಂದರೆಡು ದಿನಗಳಲ್ಲಿ ಅವನ ಬಗ್ಗೆ ಪತ್ತೆಯಾಗಲಿದೆ ಎಂದ ಸಿದ್ದರಾಮಯ್ಯ ರಾಜ್ಯ ತಮ್ಮ ಸರ್ಕಾರವೂ ತನಿಖೆಗಾಗಿ ಒಂದು ವಿಶೇಷ ತಂಡವನ್ನು ರಚಿಸಿದೆ ಎಂದರು. ಬಾಂಬ್ ಸ್ಪೋಟದಲ್ಲಿ ಗಾಯಗೊಂಡವರ ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

- Advertisement -spot_img

More articles

- Advertisement -spot_img

Latest article